ಸಮಸ್ತ ಮುಸ್ಲಿಂರು ಅನ್ಸಾರಿಗೆ ಮತ ನೀಡಲು ನಿರ್ಧಾರ

0
17
loading...

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಮಸ್ತೆ ಮುಸ್ಲಿಂರು ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಅನ್ಸಾರಿಗೆ ಮತ ನೀಡಲು ನಿರ್ಧರಿಸಿದ್ದಾರೆ ಎಂದು ಬಜಾರ ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ, ಮುಸ್ಲಿಂ ಸಮಾಜದ ಹಿರಿಯ ಮುಖಂಡ ಸೈಯದ್‌ ನೂರುದ್ದೀನ ಖಾದ್ರಿ ಅಲಿಯಾಸ್‌ ನವಾಬಸಾಬ ತಿಳಿಸಿದರು.
ಇಕ್ಬಾಲ್‌ ಅನ್ಸಾರಿ ನಿವಾಸದಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಸಮಾಜದ ರಾಜ್ಯ ಸಮಿತಿಯ ತೀರ್ಮಾನದಂತೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ಚಲಾಯಿಸಲಾಗುವದು ಎಂದು ತಿಳಿಸಿದರು.
ಕಳೆದ 30 ವರ್ಷಗಳಿಂದ ಸಮಸ್ತ ಮುಸ್ಲಿಂ ಸಮಾಜ ಹಿರಿಯ ಕಾಂಗ್ರೆಸ್‌ ಮುಖಂಡ, ಮಾಜಿ ಸಂಸದ ಎಚ್‌.ಜಿ.ರಾಮುಲು ಅವರನ್ನು ಬೆಂಬಲಿಸಿ ಗೆಲ್ಲುವಂತೆ ಮಾಡಿದೆ. ಆದರೆ ಈ ಚುನಾವಣೆಯಲ್ಲಿ ಅವರು ಮುಸ್ಲಿಂ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿ ಜೆಡಿಎಸ್‌ ಅಭ್ಯರ್ಥಿ ಕರಿಯಣ್ಣ ಸಂಗಟಿಗೆ ಮತ ನೀಡಲು ತಿಳಿಸಿದ್ದಾರೆ. ಇವರ ಸೂಚನೆಯನ್ನು ತಮ್ಮ ಸಮಾಜದವರು ಪಾಲಿಸುವದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಮುಖಂಡ ಕುಮ್ಮಕ್ಕು:ಚುನಾವಣೆ ಫ್ಲೈಯಿಂಗ್‌ ಸ್ಕ್ಯಾಡ್‌ ಬಿಜೆಪಿ ಮುಖಂಡರ ಕುಮ್ಮಕ್ಕಿನಿಂದ ತಮ್ಮ ಮನೆ ಮೇಲೆ ದಾಳಿ ಮಾಡಿರುವದು ಖಂಡನೀಯ ಎಂದು ನಗರಸಭೆ ಮಾಜಿ ಅಧ್ಯಕ್ಷ ಶಾಮೀದ್‌ ಮನಿಯಾರ್‌ ತಿಳಿಸಿದರು. ದಾಳಿಯ ಸಂದರ್ಭದಲ್ಲಿ ಕೇವಲ 30 ಸಾ.ರು. ಮಾತ್ರ ಸಿಕ್ಕಿವೆ. 49 ಸಾ.ರು.ಗಳನ್ನು ವ್ಯಕ್ತಿಯೊಬ್ಬನಿಗೆ ಮನೆಯಲ್ಲಿ ಇಟ್ಟುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಅವರು ತಿಳಿಸಿದರು.
ಬಿಜೆಪಿ ಅಲ್ಪಸಂಖ್ಯಾತರ ಮುಖಂಡ ಸೈಯದ್‌ ಅಲಿ ದುರುದ್ದೇಶ ತಮ್ಮ ವಿರುದ್ದ ದೂರನ್ನು ನೀಡಿದ ಪರಿಣಾಮ ಅಧಿಕಾರಿಗಳು ತಮ್ಮ ನಿವಾಸದ ಮೇಲೆ ದಾಳಿ ಮಾಡಿದ್ದರು ಎಂದು ತಿಳಿಸಿದರು.

loading...