ಸಮಾಜದ ಕೃತಜ್ಞತೆ ಬದಲಿಗೆ ಕೃತಘ್ನತೆ ಅಧಿಕಗೊಳ್ಳುತ್ತಿರುವುದು ವಿಷಾದನೀಯ: ಶಾಸಕ ಶಿವರಾಮ

0
48
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಚುನಾವಣೆಯಲ್ಲಿ ಗೆಲುವಿಗೆ ಅಭಿವೃದ್ಧಿ ಕಾರಣವಾಗದಿದ್ದರೂ, ನಮ್ಮ ನೈತಿಕತೆ, ಆತ್ಮವಿಶ್ವಾಸ ಮತ್ತು ಆತ್ಮ ಸ್ಥೈರ್ಯ ಮೂಲವಾಗಿದೆ. ಎಂತಹ ಸಂಧಿಗ್ದ ಸಂದರ್ಭದಲ್ಲಿಯೂ ಪಲಾಯನವಾದ ಮಾಡುವ ಮನೋಭಾವನೆ ನನ್ನದಲ್ಲ. ಸಮಾಜದಲ್ಲಿ ಕೃತಜ್ಞತೆ ಬದಲಿಗೆ ಕೃತಘ್ನತೆ ಅಧಿಕಗೊಳ್ಳುತ್ತಿರುವುದು ವಿಷಾದನೀಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಮಂಗಳವಾರ ಸಂಜೆ ಪಟ್ಟಣದ ಎ.ಪಿ.ಎಂ.ಸಿ ಆವಾರದ ರೈತಭವನದಲ್ಲಿ ಯಲ್ಲಾಪುರ ತಾಲೂಕಾ ಕಾರ್ಯಕರ್ತರಿಂದ ನಾಗರಿಕ ಸನ್ಮಾನ ಸ್ವೀಕರಿಸಿ, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ನಮ್ಮ ಸ್ಥಿತಿ-ಪರಿಸ್ಥಿತಿಗಾಗಿ ಯಾರನ್ನೂ ದೂಷಿಸುವುದು ಸಮಂಜಸವಲ್ಲ. ರಾಜ್ಯದ ರಾಜಕೀಯ ಸ್ಥಿತ್ಯಂತರ ಹಾಗೂ ಚುನಾವಣೆಯ ನಂತರ ನಡೆದ ಎಲ್ಲ ಘಟನಾವಳಿಗಳೂ ಎಲ್ಲಿರಿಗೂ ಗೊತ್ತಿದೆ. ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರದ ಬಗ್ಗೆ ಯಾರಿಗೂ ಗೊಂದಲ ಬೇಡ. ಎಲ್ಲ ಅಸಮಾಧಾನವೂ ಮುಗಿದಿದೆ. ಜಿಲ್ಲೆಯ, ರಾಜ್ಯದ ಆಡಳಿತ ವಿರೋಧಿಯಿಂದ ಕಡಿಮೆ ಮತಗಳು ಬಿಳಲು ಕಾರಣವಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯನ್ನಿಟ್ಟು ಚುನಾವಣೆ ಎದುರಿಸಿದ್ದೇವೆ. ಕೊನೆಯಲ್ಲಿ ಸತ್ಯಕ್ಕೆ ಜಯವಾಯಿತು ಎಂದರು.

ಬಿಜೆಪಿಯವರು ಕೇವಲ ನರೇಂದ್ರ ಮೋದಿ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಆಯ್ಕೆಯಲ್ಲಿಯೂ ಮೋದಿಯವರ ಹೆಸರನ್ನು ಬಳಸಿಕೊಂಡರೆ ಆಶ್ಚರ್ಯವಿಲ್ಲ ಎಂದು ವ್ಯಂಗ್ಯವಾಡಿದ ಅವರು, ನನ್ನ ನೇತೃತ್ವದಲ್ಲಿ 11 ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂದು ಹಲವು ದೃಶ್ಯಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾಗಿದೆ ಎಂದರು.
ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕ ಆಸೆ-ಆಮಿಷ ಒಡ್ಡಿರುವುದು ಸತ್ಯದ ಸಂಗತಿ. ಆದರೆ ಇಷ್ಟೊಂದು ಕಾರ್ಯಕರ್ತರು ನನ್ನನ್ನು ನಂಬಿ ಆರಿಸಿಕಳುಸಿದ ಅವರಿಗೆ ನಾನು ಮೋಸ ಮಾಡಲಾರೆ. ನನ್ನ 4 ದಶಕಗಳ ರಾಜಕೀಯ ಜೀವನದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡಿದ್ದೇನೆ. ಆದರೆ ಪಲಾಯನವಾದಿ ನಾನಲ್ಲ. 78 ಶಾಕರು ಕಠಿಣ ಶ್ರಮದಲ್ಲಿದ್ದಾಗಲೂ ಯಾವ ಶಾಸಕರು ಧೃತಿಗೆಡೆದೆ ಪಕ್ಷದ ಮುಖಂಡರು ಹಾಗೂ ಪಕ್ಷದ ಸಿದ್ದಾಂತದ ಅಣತಿಯಂತೆ ನಡೆದುಕೊಂಡಿದ್ದೇವೆ. ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗದ ಕಾರ್ಯಕರ್ತರು ಹಗಲು ರಾತ್ರಿಯನ್ನದೇ ಪಕ್ಷದ ಪರವಾಗಿ ಕೆಲಸ ನಿರ್ವಹಿಸಿದ ಕಾರಣಕ್ಕಾಗಿ ಗೆಲ್ಲಲು ಸಾಧ್ಯವಾಯಿತು. ಆ ಎಲ್ಲ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಪಕ್ಷದಲ್ಲಿದ್ದು ನಿಷ್ಠೆಯಿಂದ ಕೆಲಸ ಮಾಡಲು ಸಾಧ್ಯವಾಗಿದ್ದರೆ ಅಂತಹ ವ್ಯಕ್ತಿಗಳು ನನ್ನ ಗಮನಕ್ಕೆ ತರಬೇಕು. ಪಕ್ಷದಲ್ಲಿದ್ದು ಆ ಪಕ್ಷಕ್ಕೆ ದ್ರೋಹವೆಸಗುವುದು ಸರಿಯಾದ ಕ್ರಮವಲ್ಲ. ನಾಯಕನಾದವನು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ನಾಯಕನಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ ಎಂದರು.

ಹಿರಿಯ ಮುಖಂಡ ಪ್ರೇಮಾನಂದ ನಾಯ್ಕ ಮಾತನಾಡಿ, ಯಲ್ಲಾಪುರ ತಾಲೂಕಿನಲ್ಲಿ ಯಾವ ಕಾರಣಕ್ಕಾಗಿ ಈ ಬಾರಿ ಮತ ಕಡಿಮೆಯಾಗಿದೆ. ಈ ಬಗ್ಗೆ ನಾವು ಅಭಿನಂದನೆ ಜೊತೆಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಭೆಯಾಗಿದೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಮತದಾರರು ಸ್ಪಂದಿಸಿಲ್ಲ. ಆ ಬಗ್ಗೆ ಚರ್ಚೆ ನಡೆಸಬೇಕು ಎಂದರು. ಪಕ್ಷದ ಪ್ರಮುಖ ಉಲ್ಲಾಸ ಶಾನಭಾಗ್ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ನಿರ್ದೇಶಕ ವಿಜಯ ಮಿರಾಶಿ, ಪ.ಪಂ ಅಧ್ಯಕ್ಷ ಶಿರೀಷ ಪ್ರಭು, ತಾ.ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ, ಉಪಾಧ್ಯಕ್ಷೆ ಸುಜಾತ ಸಿದ್ದಿ, ಪಿ.ಎಲ್.ಡಿ ಬ್ಯಾಂಕ್ ಆಧ್ಯಕ್ಷ ಆರ್.ಎಸ್.ಭಟ್ಟ, ತಾ.ಪಂ ಸದಸ್ಯರಾದ ರಾಧಾ ಹೆಗಡೆ ಬೆಳಗುದ್ಲಿ, ಮಾಲಾ ಚಂದಾವರ, ಎ.ಪಿ.ಎಂ.ಸಿ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ, ಉಪಾಧ್ಯಕ್ಷ ರಾಘವೇಂದ್ರ ಗೋಂದಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಆರ್.ಹೆಗಡೆ ತಾರೆಹಳ್ಳಿ, ಪಕ್ಷದ ಹಿರಿಯರಾದ ಆರ್.ಎನ್.ಹೆಗಡೆ ಗೋರ್ಸಗದ್ದೆ, ಶ್ರೀಕಾಂತ ಶೆಟ್ಟಿ, ಮಹಮ್ಮದ್ ಗೌಸ್, ಎಂ.ಎಂ.ಶೇಖ್, ವಿ.ವಿ.ಜೋಶಿ, ಶೋಭಾ ಹುಲಮನಿ, ಪ್ರಶಾಂತ ಸಭಾಹಿತ ಮತ್ತಿತರರು ಉಪಸ್ಥಿತರಿದ್ದರು. ಮುರುಳಿ ಹೆಗಡೆ ನಿರೂಪಿಸಿದರು.

loading...