ಸಸಿ ನೆಡುವ ಯೋಜನೆಗೆ ಸಾರ್ವಜನಿಕರು ಸ್ಪಂದಿಸಿ: ಶಿವರಾಜ

0
10
loading...

ಸವಣೂರ: ಪರಿಸರ ಕಾಳಜಿಗಾಗಿ ಪ್ರತಿ ಒಬ್ಬರು ಸಸಿಗಳನ್ನು ನೆಡುವ ಮೂಲಕ ಸರ್ಕಾರದ ಯೋಜನೆಗಳಿಗೆ ಸಾರ್ವಜನಿಕರು ಸ್ಪಂದಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಿವರಾಜ ಅಮರಾಪೂರ ತಿಳಿಸಿದರು.

ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಜಿ.ಪಂ, ತಾ.ಪಂ ಇಲಾಖೆಯ ಸಹಯೋಗ ಗುರುವಾರ ಸವಣೂರ ತಾಲೂಕಿನ ಇಚ್ಚಂಗಿ ಗ್ರಾಮದಿಂದ ಬಾಲೇಹೊಸೂರ ರಸ್ತೆಯ ಬದಿಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತನಾಡಿದರು.
ಕೇವಲ ಸಸಿಗಳನ್ನು ನೆಡುವ ಬದಲಾಗಿ ನೆಟ್ಟ ಸಸಿಗಳನ್ನು ಅಧಿಕಾರಿಗಳ ಸಹಕಾರದಿಂದ ಉಳಸಿ, ಬೆಳಸಿದಲ್ಲಿ ಮಾತ್ರ ಮುಂದಿನ ದಿನಮಾನದಲ್ಲಿ ಶುದ್ಧ ಪರಿಸರ ಪಡೆಯಲು ಸಾಧ್ಯವಾಗಲಿದೆ ಎಂದರು.

ಸಾಮಾಜಿಕ ಅರಣ್ಯ ಇಲಾಖೆಯ ಆರ್‍ಎಫ್‍ಓ ಗಜಾನನ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಯಡಿ ಮಳೆಗಾಲದ ಆರಂಭದ ದಿನಗಳಲ್ಲಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಣೆ ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ಸಾಲಿನ ಮನಹೋತ್ಸವವನ್ನು ಸಾಮಾಜಿಕ ಅರಣ್ಯ ಹಿರಿತನ ಯೋಜನೆಯಡಿ ಸುಮಾರು 900 ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಗಿದೆ ಎಂದರು.
ತಾ.ಪಂ ಅಧಿಕಾರಿ ಸದಾನಂದ ಅಮರಾಪೂರ, ಗ್ರಾಮದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.

loading...