ಸಾಮಾನ್ಯ ಜನರು ಆರ್ಥಿಕವಾಗಿ ಸಬಲರಾಗಬೇಕು : ಪವನ ಕಣಗಲಿ

0
378
loading...

ಸಾಮಾನ್ಯ ಜನರು ಆರ್ಥಿಕವಾಗಿ ಸಬಲರಾಗಬೇಕು : ಪವನ ಕಣಗಲಿ

ಕನ್ನಡಮ್ಮ ಸುದ್ದಿ‌-ಸಂಕೇಶ್ವರ 25:ನಿರುದ್ಯೋಗಿಗಳಿಗೆ ಸಹಾಯ ಮಾಡಿ ಅವರ ಜೀವನಕ್ಕೆ ಅನುಕೂಲಕ್ಕೆ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ಮಾಡಲು ಸಹಕಾರಿ ಸಂಘಗಳು ಬಡ ಜನರು ಮತ್ತು ಮಧ್ಯಮ ವರ್ಗಕ್ಕೆ ಸಾಲದ ರೂಪದಲ್ಲಿ ಸಹಾಯ ಒದಗಿಸಬೇಕೆಂದು ಸಾಮರ್ಥ್ಯ ಅರ್ಬನ್ ಸೌಹಾರ್ದ ಸಹಕಾರದ ಅಧ್ಯಕ್ಷ ಉದ್ಯಮಿ ಪವಣ ಕಣಗಲಿ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ನೂತನ ಸಾಮರ್ಥ್ಯ ಅರ್ಬನ್ ಸೌಹಾರ್ದ ಸಹಕಾರಿ ನಿ., ಪ್ರಾರಂಭೋತ್ಸವ ಸಂದರ್ಭದಲ್ಲಿ ಮಾತನಾಡಿದ ಅವರು‌ ಬ್ಯಾಂಕ್‍ಗಳು ಸಾಮಾನ್ಯ ಜನರ ಹಣವನ್ನು ಠೇವು ಉಳಿಸಿಕೊಳ್ಳುವ ಮೂಲಕ ಜನರ ನಂಬಿಕೆಗೆ ಪಾತ್ರರಾಗಬೇಕು,ಬ್ಯಾಂಕುಗಳು ಸಹಾಯ ಪಡೆದು ಬಡ ಜನರು ಆರ್ಥಿಕವಾಗಿ ಸಬಲರನ್ನಾಗಿಸಬೇಕಿದೆ ಎಂದರು .
ಈ ಸಂದರ್ಭದಲ್ಲಿ ಹಿರಿಯರಾದ ಪ್ರಕಾಶ ಕಣಗಲಿ, ರಾಜೇಂದ್ರ ಕಣಗಲಿ, ಯುವ ಮುಖಂಡರಾದ ಕುಮಾರ ಬಸ್ತವಾಡಿ ಸಂಸ್ಥೆಯ ಉಪಾಧ್ಯಕ್ಷರಾದ ದೇವರಾಜ ಮನವಡ್ಡರ ಹಾಗೂ ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...