ಸಾಯಿಕೃಷ್ಣ ಪ್ರತಿಷ್ಠಾನದಿಂದ ಸಾಮೂಹಿಕ ವಿವಾಹ ಸಂಪನ್ನ

0
35
loading...

ಕನ್ನಡಮ್ಮ ಸುದ್ದಿ-ಖಾನಾಪುರ: ಪಟ್ಟಣದ ಹೊರವಲಯದ ಬರಗಾಂವ ರಸ್ತೆಯಲ್ಲಿ ಮಂಗಳವಾರ ವತಿಯಿಂದ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಎರಡು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಚಿಕ್ಕಮುನವಳ್ಳಿ ಆರೂಢ ಮಠದ ಶಿವಪುತ್ರ ಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿದ ವಿವಾಹ ಮಹೋತ್ಸವದ ಧಾರ್ಮಿಕ ವಿಧಿಗಳನ್ನು ಪಾರಿಶ್ವಾಡದ ಗುರುಸಿದ್ಧಯ್ಯ ಕಲ್ಮಠ ನಡೆಸಿಕೊಟ್ಟರು.

ಪ್ರತಿಷ್ಠಾನದ ಅಧ್ಯಕ್ಷ ಕೆ.ಪಿ ಪಾಟೀಲ ವಿವಾಹ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕಿನ ರಾಜಕೀಯ, ಸಹಕಾರ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರಗಳ ಮುಖಂಡರು ಭಾಗವಹಿಸಿ ನವ ದಂಪತಿಗಳನ್ನು ಹರಸಿದರು. ಕಳೆದ ಹಲವು ವರ್ಷಗಳಿಂದ ತಾಲೂಕಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿರುವ ಪ್ರತಿಷ್ಠಾನದ ಅಧ್ಯಕ್ಷ ಕೆ.ಪಿ ಪಾಟೀಲ ಅವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ ವಧು-ವರರ ಪಾಲಕರು ಕೆ.ಪಿ ಪಾಟೀಲ ದಂಪತಿಗಳನ್ನು ಸತ್ಕರಿಸಿದರು.

loading...