ಸಿದ್ದರಾಮಯ್ಯ ರಾಜ್ಯ, ಧರ್ಮಗಳನ್ನು ಒಡೆದಿದ್ದಾರೆ: ಶಿವರಾಜ ಅರೋಪ

0
16
loading...

ಕನ್ನಡಮ್ಮ ಸುದ್ದಿ-ತೇರದಾಳ: ರಾಜ್ಯದಲ್ಲಿರುವ ಕಾಂಗ್ರೇಸ್‌ ಸರ್ಕಾರ ಬ್ರಿಟಿಷರಂತೆ ರಾಜ್ಯ, ಧರ್ಮಗಳನ್ನು ಒಡೆಯುವಲ್ಲಿ ಬಹಳ ಆಸಕ್ತಿ ತೋರಿಸಿದ್ದಾರೆ. ಯಾವುದಕ್ಕೆ ಧಕ್ಕೆ ಆದರೂ ಆಗಲಿ ಆದರೆ ಕಾಂಗ್ರೇಸ್‌ನವರಿಗೆ ಅಧಿಕಾರ ಸಿಕ್ಕರೆ ಸಾಕು ಎನ್ನುವಷ್ಟರ ಮಟ್ಟಿಗಿಳಿದಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾನ್‌ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಮಹಾತ್ಮ ಗಾಂಧೀ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಸಾರ್ವಜನಿಕ ಸಭೆಯಲ್ಲಿ ಕ್ಷೇತ್ರದ ಭಾಜಪ ಅಭ್ಯರ್ಥಿ ಸಿದ್ದು ಸವದಿಯವರ ಪರ ಮತಯಾಚಿಸುತ್ತ ರಾಜ್ಯದಲ್ಲಿರುವ ಸರ್ಕಾರಕ್ಕೆ ರೈತರ, ನೇಕಾರರ ಕಾಳಜಿ ಇಲ್ಲ. ಈಡೀ ದೇಶದಲ್ಲಿ ಒಂದೊಂದೆ ರಾಜ್ಯವನ್ನು ಕಳೆದುಕೊಳ್ಳುತ್ತ ಬರುತ್ತಿರುವ ಕಾಂಗ್ರೇಸ್‌ಗೆ ಹತಾಶೆ ಆವರಿಸಿದೆ. ಬಿಜೆಪಿ ಯುವ ಕಾರ್ಯಕರ್ತರ ಹತ್ಯೆ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ದೇಶದಲ್ಲಿಯೇ ಯಾವ ಮುಖ್ಯಮಂತ್ರಿಗಳಿಗೂ ಇಲ್ಲದಷ್ಟು ಕಾಳಜಿ ಯಡಿಯೂರಪ್ಪನವರಿಗೆ ಇದ್ದು ಅವರನ್ನು ಮುಖ್ಯಮಂತ್ರಿ ಮಾಡಬೇಕಾಗಿದ್ದು. ಕ್ಷೇತ್ರದ ಸಿದ್ದು ಸವದಿಯವರನ್ನು ಗೆಲ್ಲಿಸಿ, ಇದರಿಂದ ಮೋದಿಯವರ ಕೈ ಬಲಪಡಿಸಿದಂತಾಗುತ್ತದೆ ಎಂದರು. ಸಿದ್ದು ಸವದಿಯವರು ಮಾತನಾಡಿ ಸಿದ್ದರಾಮಯ್ಯ ಒರ್ವ ಗಮಿಂಡಿಯ ಮುಖ್ಯಮಂತ್ರಿಯಾಗಿದ್ದಾರೆ. ಇತಿಹಾಸದಲ್ಲಿ ಇಂತಹ ಮುಖ್ಯಮಂತ್ರಿಯನ್ನು ರಾಜ್ಯ ಕಂಡಿರಲಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತ, ನೇಕಾರರು ಸೇರಿದಂತೆ ಎಲ್ಲ ಬಗೆಯ ಬ್ಯಾಂಕ್‌ನ ಸಾಲ ಮನ್ನಾ ಮಾಡಲಾಗುವುದು ಎಂಬುದನ್ನು ಈಗಾಗಲೇ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆದ್ದರಿಂದ ಕ್ಷೇತ್ರದಲ್ಲಿ ಅಲ್ಲದೇ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದರು. ತೇರದಾಳ ಪುರಸಭೆ ಅಧ್ಯಕ್ಷೆ ಸುವರ್ಣಾ ಹಿರೇಕುರುಬರ, ಜಿ.ಎಸ್‌. ನ್ಯಾಮಗೌಡ, ಜಗದೀಶ ಹಿರೇಮನಿ, ಚಿದಾನಂದ ಸರಿಕರ, ಪ್ರಭಾಕರ ಭಾಗಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್‌ ಶೋ ಮುಖಾಂತರ ಮತಯಾಚನೆ ಮಾಡಿದರು.

loading...