ಸಿ.ಇ.ಟಿ ಫಲಿತಾಂಶ ಬಾರದೆ ಆತಂಕಗೊಂಡ ವಿದ್ಯಾರ್ಥಿಗಳು

0
26
loading...

ಜಯರಾಜ ಗೋವಿ
ಕನ್ನಡಮ್ಮ ಸುದ್ದಿ-ಯಲ್ಲಾಪುರ: ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಸಿ.ಇ.ಟಿ ಪರೀಕ್ಷೆ ಬರೆದು ತಿಂಗಳಾದರೂ ಹಾಗೂ ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟವಾಗಿ 20 ದಿನಗಳಾಗುತ್ತ ಬಂದರೂ ಈವರೆಗೂ ಸಿ.ಇ.ಟಿ ಫಲಿತಾಂಶ ಬಾರದಿರುವದು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಆತಂಕ ತಂದಿದೆ. ಈ ಬಾರಿ ವಿಧಾನ ಸಭೆಯ ಚುನಾವಣೆ ನಿಮಿತ್ತ ಬೇಗನೆ ಪರೀಕ್ಷೆಗಳು ಮುಗಿದಿದ್ದವು ,ಅದರ ತಕ್ಕಂತೆ ಪಿ.ಯುಸಿ ಫಲಿತಾಂಶ ಬೇಗನೆ ಬಂದಿದೆ ಆದರೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳ ಪಾಲಕರು ಸಿ.ಇ.ಟಿ ಫಲಿತಾಂಶ ಬಾರದೇ ಯಾವುದೇ (ಪದವಿ)ಕೋರ್ಸಗಳಿಗೆ ಸೇರಿಸುವ ನೀರ್ಣಯಕ್ಕೆ ಬರಲಾಗದೇ ಪರಿತಪಿಸುವಂತಾಗಿದೆ. ಅದರಲ್ಲೂ ತಾಲೂಕಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತೆರ್ಗಡೆಯಾದವರು ಬೇರೆ ತಾಲೂಕು ,ಜಿಲ್ಲೆಗಳಿಗೆ ಹೋಗುವದು ಅನಿವಾರ್ಯವಾಗಿದೆ. ಪಟ್ಟಣದಲ್ಲಿ ಇರುವದೊಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಎಲ್ಲಾ ಸೌಲಭ್ಯವಿದ್ದರೂ ವಿಜ್ಞಾನ ವಿಭಾಗವಿಲ್ಲ ಹಾಗೂ ತಾಲೂಕಿನಲ್ಲಿ ಯಾವದೇ ಡಿಪ್ಲೊಮಾ ಕಾಲೇಜುಗಳಿಲ್ಲ. ಇದರಿಂದ ಸುತ್ತಮುತ್ತಲಿನ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಮುಂದುವರೆಸುವದು ಮರೀಚಿಕೆಯಂತಾಗಿದೆ. ಸರಕಾರ ಹೆಣ್ಣು ಮಕ್ಕಳಿಗೆ 1ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ ಉಚಿತ ಶಿಕ್ಷಣ ವ್ಯವಸ್ಥೆ ಜಾರಿಗೆ ಮಾಡಿದರೂ ಕೂಡಾ ವಿಜ್ಞಾನ ವಿಭಾಗ ಪದವಿ ಶಿಕ್ಷಣ ಪಡೆಯಲಾರದಂತಹ ಅಸಹಾಯಕತೆ ತಾಲೂಕಿನ ಹೆಣ್ಣುಮಕ್ಕಳದ್ದಾಗಿದೆ.ವಿದ್ಯಾರ್ಥಿಗಳು ಸಿ.ಇ.ಟಿ ಮಾನದಂಡವಿಲ್ಲದ ಪದವಿ ಕೋರ್ಸಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೂ ಬೇರೆ ತಾಲೂಕು,ಜಿಲ್ಲೆಗೆ ಹೋಗಲೇಬೇಕಾಗಿರುವದರಿಂದ ಪಾಲಕರಲ್ಲಿ ಮಕ್ಕಳನ್ನು ಬೇರೆ ಕಡೆ ಕಳಿಸುವದು ಅನಿವಾರ್ಯ ಎಂದ ಮೇಲೆ ಇಂಜೀನೀಯರ ,ಮೆಡಿಕಲ್ ಕೋರ್ಸಗಳಿಗೆ ಪ್ರಯತ್ನಿಸಿದರಾಯಿತು ಎಂಬ ಮನೋಭಾವನೆಯಿಂದ ಸಿ.ಇ.ಟಿ ಫಲಿತಾಂಶ ಎದುರು ನೋಡುತ್ತಾ ಕಾಲಹರಣ ಮಾಡುವಂತಾಗಿದೆ.ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಪಾಲಕರು ಪಟ್ಟಣದಲ್ಲಿಯೇ ಉತ್ತಮ ಕಾಲೇಜು ಇದ್ದಿದ್ದರೆ ಅಲ್ಪ ಖರ್ಚಿನಲ್ಲಿ ಪದವಿ ಶಿಕ್ಷಣ ಮುಂದುವರೆಸಬಹುದಿತ್ತು ಇಂದಿನ ಕಾಲಮಾನದಲ್ಲಿ ಶಿಕ್ಷಣಕ್ಕಾಗಿ ಬೇರೆಡೆ ಮಕ್ಕಳನ್ನು ನಿಶ್ಚಂತೆಯಿಂದ ಕಳಿಸುವದಕ್ಕೆ ಹಿಂಜರಿಕೆಯಾಗುತ್ತದೆ ಹಾಗೂ ಹಾಸ್ಟೆಲ್‍ನ ಖರ್ಚುವೆಚ್ಚದ ಹೊರೆ ಭರಿಸಲು ಅಸಾಧ್ಯ ಎನ್ನುವಂತಹ ಮಾತುಗಳು ಪಾಲಕರಿಂದ ಕೇಳಿಬರುತ್ತವೆ.ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ವಿದ್ಯಾವಂತರ ತಾಲೂಕಾಗಿದ್ದರೂ ಕೂಡಾ ಅದಕ್ಕೆ ಪೂರಕ ವ್ಯವಸ್ಥೆ ಇಲ್ಲದಿರುವದು ವಿಪರ್ಯಾಸವೇ ಸರಿ.

loading...