ಹಂಚಿನಾಳ ಬಡಾವಣೆ ನಿವಾಸಿಗಳ ಮತದಾನ ಬಹಿಷ್ಕಾರ ವಾಪಸ್‌

0
13
loading...

ಕನ್ನಡಮ್ಮ ಸುದ್ದಿ-ಬಸವನಬಾಗೇವಾಡಿ: ತಾಲೂಕಿನ ಹಂಚಿನಾಳ ಗ್ರಾಮದ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಧೋರಣೆ ಖಂಡಿಸಿ ನಡೆಸುತ್ತಿದ್ದ ಸಾಮೂಹಿಕ ಮತದಾನ ಬಹಿಷ್ಕಾರವನ್ನು ತಹಶೀಲದಾರ ಸುಭಾಷ ಸಂಪಗಾವಿ ಹಾಗೂ ವಿವಿಧ ಪಕ್ಷಗಳ ಅಭ್ಯರ್ಥಿಗಳ ಭರವಸೆ ಮೇರೆಗೆ ಮತದಾನ ಬಹಿಷ್ಕಾರ ನಿರ್ಧಾರವನ್ನು ವಾಪಸ್‌ ಪಡೆದರು.
ಬುಧುವಾರ ಸಾಯಂಕಾಲ ಭೇಟಿ ನೀಡಿದ ತಹಶೀಲದಾರ ಸುಭಾಷ ಸಂಪಗಾವಿ ನೇತೃತ್ವದ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವೂ ಬಡಾವಣೆ ನಿವಾಸಿಗಳೊಂದಿಗೆ ಮೂಲಭೂತ ಸೌಕರ್ಯಗಳ ಕುರಿತಾಗಿ ಚರ್ಚಿಸಿದ ನಂತರ ಗ್ರಾಮಸ್ಥರೊಂದಿಗೆ ಮಾತನಾಡಿ ಇಂದು ಬೀದಿ ದ್ವೀಪ ನಿರ್ವಹಣೆ, ಧೋಬಿಘಾಟ್‌, ಕುಡಿಯುವ ನೀರಿನ ಪೈಂಪ ಜೋಡಣೆ ಮಾಡಲಾಗುವುದು, ಚುನಾವಣೆ ನಂತರ ರಸ್ತೆ ನಿರ್ಮಾಣ, ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಡೇರಿಸಲಾಗುವದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರವಾದ ಕರ್ತವ್ಯವಾಗಿದ್ದು ಎಲ್ಲರೂ ಸಂವಿಧಾನಬದ್ದ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡಿದಾಗ ನಿವಾಸಿಗಳು ಸಹಮತವ್ಯಕ್ತಪಡಿಸಿ ಧರಣಿ ವಾಪಸ್‌ ಪಡೆದರು.
ಈ ಸಂದರ್ಭದಲ್ಲಿ ತಾಪಂ ಇಓ ಸಿ.ಬಿ.ಮೇಗೇರಿ, ಕಂದಾಯ ನಿರೀಕ್ಷಕ ಎ.ಎಚ್‌.ಮಾಣಿಕಬಾಯಿ, ಗ್ರಾಮಲೆಕ್ಕಾಧಿಕಾರಿ ಪವಾರ, ಶಿವಾನಂದ ನಾಗರಾಳ, ಗಂಗಾಧರ ಬಿರಾದಾರ, ಬಾಪುಗೌಡ ಬಿರಾದಾರ, ಸೋಮನಗೌಡ ಬಿರಾದಾರ, ಮಹೇಶ ಹಾಲಿಹಾಳ, ಭೀಮರಾಯ ಬಡಿಗೇರ, ಗೌಡಪ್ಪಗೌಡ ಬಿರಾದಾರ, ಭೀಮರಾಯಗೌಡ ಬಿರಾದಾರ, ಶಾಂತವ್ವ ಬಿರಾದಾರ, ಸುರ್ವಣ ಬಿರಾದಾರ, ಮುದಕವ್ವ ಬಿಜಾಪೂರ, ಮಲ್ಲಮ್ಮ ಹಡಪದ, ಬೋರಮ್ಮ ಹಾಲಿಹಾಳ, ಬಸಮ್ಮ ವಡವಡಗಿ ಸೇರಿದಂತೆ ಮುಂತಾದವರು ಇದ್ದರು. ಬಾಕ್ಸ್‌ ಮುಖಂಡರ ಭೇಟಿ: ಹಂಚಿನಾಳದ ಗ್ರಾಮದ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರ ಧರಣಿ ಸ್ಥಳಕ್ಕೆ ಹಾಲಿ ಶಾಸಕ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಶಿವಾನಂದ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಕೆ.ಕಲ್ಲೂರ, ವಿ.ಎಂ.ಪರೆಣ್ಣನವರ, ಅಂಬೋಜಿ ಪವಾರ ಸೇರಿದಂತೆ ವಿವಿಧ ಮುಖಂಡರು ಭೇಟಿ ನೀಡಿ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ ಮತದಾನ ಹಕ್ಕನ್ನು ಕಳೆದುಕೊಳ್ಳಬೇಡಿ ಚುನಾವಣೆ ನಂತರ ಎಲ್ಲರೂ ಸೇರಿ ಮೂಲಭೂತ ಸೌಕರ್ಯ ಒದಗಿಸಲು ಶ್ರಮಿಸೋಣ ಎಂದು ಭರವಸೆ ನೀಡಿದರು.

loading...