ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಲಿದೆ: ಕಲಶೆಟ್ಟಿ

0
16
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಪ್ರಪ್ರಥಮ ಬಾರಿಗೆ ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ದಿಗ್ವಿಜಯ ಸಾಧಿಸಲಿದೆ. ಪ್ರಧಾನಿ ಮೋಧಿಯವರ ನಾಯಕತ್ವ, ಕರ್ನಾಟಕದಲ್ಲಿ ಯಡಿಯೂರಪ್ಪನವರ ಸಮರ್ಥ ಮುಂದಾಳತ್ವದಡಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇದನ್ನು ಯಾರಿಂದಲ ತಪ್ಪಿಸಲು ಅಸಾಧ್ಯ. ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಆರ್.ವಿ. ದೇಶಪಾಂಡೆ ಈಗ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಸುಳ್ಳು ಸಂದೇಶ, ಪೊಳ್ಳು ಭರವಸೆಗಳನ್ನು ನೀಡುತ್ತ ಜನರ ದಿಕ್ಕನ್ನು ತಪ್ಪಿಸುತ್ತಿದ್ದರೆ ಎಂದು ಬಿಜೆಪಿ ದಾಂಡೇಲಿ ಘಟಕದ ಅಧ್ಯಕ್ಷ ಬಸವರಾಜ ಕಲಶಟ್ಟ ಆಕ್ಷೇಪಿಸಿದರು.
ಅವರು ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಪ್ರಜ್ಞಾವಂತ ಮತದಾರರು ದೇಶಪಾಂಡೆಯವರ ಸುಳ್ಳು ಭರವಸೆಗಳಿಗೆ ಕಿವಿಗೊಡದೆ, ಅದಕ್ಕೆ ಪ್ರತಿಯಾಗಿ 35 ವರ್ಷಗಳ ಅವರ ಸಾಧನೆಯ ಬಗ್ಗೆ ನೇರವಾಗಿ ಪ್ರಶ್ನಿಸುವ ಕೆಲಸ ಮಾಡಬೇಕು ಎಂದರು. ಈ ಬಾರಿ ಹಳಿಯಾಳ ಕ್ಷೇತ್ರದಲ್ಲಿ ಆರ್.ವಿ ದೇಶಪಾಂಡೆ ಸೋಲು ಖಚಿತ, ಸುನೀಲ ಹೆಗಡೆ ಗೆಲವು ನಿಶ್ಚಿತ.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವವರು ಬಿಜೆಪಿ ಕಾರ್ಯಕರ್ತರಲ್ಲ ಎಂದ ಅವರು ಮೇ 4 ಮುಂಜಾನೆ 10.30ಕ್ಕೆ ಹಳಿಯಾಳಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಗಮಿಸಲಿದ್ದು, ದಾಂಡೇಲಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಕ್ಷೇತ್ರದ ಉಸ್ತುವಾರಿ ಹಾಗೂ ಮುಖಂಡರಾದ ಶ್ರೀಪತಿ ಭಟ್ಟ ಮಾತನಾಡಿ 15-20 ವರ್ಷಗಳಿಂದ ಬೃಹತ್ ಕೈಗಾರಿಕಾ ಮಂತ್ರಿಯಾಗಿದ್ದ ಆರ್.ವಿ ದೇಶಪಾಂಡೆಯವರ ಅಧಿಕಾರಾವಧಿಯಲ್ಲಿಯೇ ದಾಂಡೇಲಿಯ ಎರಡು ದೊಡ್ಡ ಉದ್ದಿಮೆಗಳು ಮುಚ್ಚಿದವು. ಕಾರ್ಮಿಕರು ಬೀದಿ ಪಾಲಾದರು. ಈ ಬಾರಿ ಮತ್ತೆ ಅವರು ಅದೇ ಬೃಹತ್ ಕೈಗಾರಿಕಾ ಮಂತ್ರಿಯಾದಾಗ ಜನರು ಮುಚ್ಚಿದ ಉದ್ಯಮಗಳು ಪುನರಾರಂಭ ಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದು. ಆದರೆ ಅದೂ ಹುಸಿಯಾಗಿದೆ. ಹೊಸ ಕಂಪನಿಗಳನ್ನು ತರಲೂ, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಲೂ ದೇಶಪಾಂಡೆ ಆಸಕ್ತಿ ತೋರಲಿಲ್ಲ. ಇಂತಹವರಿಗೆ ಮತ ಕೊಡಬೇಕೇ ಎಂಬುದರ ಬಗ್ಗೆ ಜನರೇ ನಿರ್ಧರಿಸಬೇಕಿದೆ ಎಂದರು.
ಬಿಜೆಪಿ ಮಹಿಳಾ ಮೋರ್ಚದ ರಾಜ್ಯ ಸಮಿತಿ ಸದಸ್ಯೆ ಶಾರದಾ ಪರಶುರಾಮ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಧಾಕರ ರೆಡ್ಡಿ, ಅಲ್ಪ ಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ರಫಿಕ್ ಹುದ್ದಾರ, ದಾಂಡೇಲಿ ಘಟಕದ ಆಧ್ಯಕ್ಷ ರಿಯಾಜ ಖಾನ್, ನಗರಸಭಾ ಸದಸ್ಯರಾದ ರವಿ ಸುತಾರ್, ಮುಸ್ತಾಕ ಶೇಖ, ಬಿಜೆಪಿ ಉಪಾಧ್ಯಕ್ಷರಾದ ಪ್ರಶಾಂತ ಬಸೂರ್ತೆಕರ, ಚಂದ್ರಕಾಂತ ಕ್ಷೀರಸಾಗರ, ಕಾರ್ಯದರ್ಶಿ ನರೇಂದ್ರ ಚೌಹಾಣ, ಸುಭಾಶ ಅರವೇಕರ, ಪ,ಜಾತಿ ಮೋರ್ಚಾ ಅಧ್ಯಕ್ಷ ದಶರಥ ಬಂಡಿವಡ್ಡರ್, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪಾಟೀಲ, ಮಹಿಳಾ ಮೋರ್ಚಾ ಅಧ್ಯಕ್ಷೆ ದೇವಕ್ಕ ಕೆರೆಮನಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಗುರು ಮಠಪತಿ, ಪ್ರಮುಖರಾದ ಎಮ್.ಎಸ್. ನಾಯ್ಕ, ಅಬ್ದುಲ್ ವಹಾಬ್ ಬಾಂಸುರಿ, ಎಸ್.ಎಮ್. ಪಾಟೀಲ, ರಾಜಶೇಖರ ಬೆಳ್ಳಿಗಟ್ಟಿ ಮುಂತಾದರಿದ್ದರು.

loading...