ಹಸೆ ಮಣೆ ಏರುವ ಮೊದಲು ಮತದಾನ ಮಾಡಿದ ವಧು

0
14
loading...

ಹಸೆ ಮಣೆ ಏರುವ ಮೊದಲು ಮತದಾನ ಮಾಡಿದ ವಧು

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಖಸಾಯಿಗಲ್ಲಿಯ ನಿವಾಸಿ ಮಾನಿನಿ ವಿಜಯ ತಶೀಲ್ದಾರ ವಧು ಮದುವೆಯ ಎರಡು ಗಂಟೆ ಮೊದಲು ಮತದಾನ ಮಾಡಿ ನಂತರ ಹಸೆ ಮಣೆ ಏರಿದ್ದಾರೆ.

ಶನಿವಾರ ಸರ್ಕಾರಿ ಹಿರಿಯ ಪ್ರಥಾಮಿಕ ಉರ್ದು ಹೆಣ್ಣು ಮಕ್ಕಳ. ಶಾಲೆ ಸಂ.೨ರಲ್ಲಿ ಸು.೧೧ಗಂಟೆ ಸುಮಾರಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.
ಮತದಾನದ ನಂತರ ಮಾದ್ಯಮದೊಮದಿಗೆ ಮಾತನಾಡಿ,ಮತದಾನ ಮಾಡುವುದು ಪ್ರತಿಯೊಬ್ಬರ ಜನ್ಮಸಿದ್ದ ಹಕ್ಕು ಎಲ್ಲರು ಮತ ಚಲಾಯಿಸಬೇಕು.ನಮ್ಮ ಒಂದು ಮತ ಜನ ನಾಯಕರನ್ನು ಆಯ್ಕೆ ಮಾಡುತ್ತದೆ ಎಂದು ಹೇಳಿದರು.

ಈ ಸಂದರ್ಬದಲ್ಲಿ ಕುಟುಂಬದವರಾದ ಮಾವ ಪ್ರಕಾಶ,ಸಹೋದರಿ ಇದ್ದರು.

loading...