ಹೆಚ್ಚು ಮತಗಳ ಅಂತರದಿಂದ ಗೆಲುವು: ಚರಂತಿಮಠ

0
16
loading...

ಬಾಗಲಕೋಟೆ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನರಿಂದ ಉತ್ತಮ ಬೆಂಬಲ ದೊರೆಯುತ್ತಿದ್ದು ಈ ಭಾರಿಯ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುವುದಾಗಿ ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಸೆಟಲ್‍ಮೆಂಟ್ ಕಾಲೋನಿ,ಐಬಿ ಕ್ರಾಸ್,ಶಾಂತಿ ಚಿಕ್ಕಮಕ್ಕಳ ಆಸ್ಪತ್ರೆ,ಸುಭಾಸ ಪಾಟೀಲ ಆಸ್ಪತ್ರೆಯ ಸುತ್ತಮುತ್ತಲಿನ ನಿವಾಸಿಗಳ ಪ್ರತಿ ಮನೆ ಮನೆಗೆ ಭೇಟಿಯಾಗಿ 5ನೇ ದಿನದ ಪ್ರಚಾರ ನಡೆಸುವ ಸಂದರ್ಭದಲ್ಲಿ ಅವರು ಮಾತನಾಡಿದರು. ಐದು ವರ್ಷದಲ್ಲಿ ಬಾಗಲಕೋಟೆ ನಗರ ಸಾಕಷ್ಟು ಹಾಳಾಗಿದೆ.ಶಾಸಕರಾದ ತಕ್ಷಣವೇ ನಗರದ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು.ಈಗಾಗಲೇ ನಗರದ ಬಹುತೇಕ ವಾರ್ಡಗಳಲ್ಲಿ ರಸ್ತೆ ಅಗೆದು ಹಾಗೆ ಬಿಡಲಾಗಿದೆ.ರಸ್ತೆಯ್ನು ಸಾಕಷ್ಟು ದುರಸ್ತಿ ಮಾಡಿ ಡಾಂಬರೀಕರಣ ಮಾಡಬೇಕಾಗಿದೆ.ಜನರು ಇಂತಹ ವ್ಯವಸ್ಥೆಗೆ ರೋಷಿ ಹೋಗಿದ್ದಾರೆಂದು ಚರಂತಿಮಠರು ಹೇಳಿದರು. ನಗರದಲ್ಲಿನ ಜನತೆಯ ಆಶೀರ್ವಾದ ಸದಾ ಇದ್ದು ಈ ಭಾರಿಯ ಚುನಾವಣೆಯಲ್ಲಿ ಸುಮಾರು 30 ಸಾವಿರ ಮತಗಳ ಅಂತರದಿಂದ ಗೆಲ್ಲುವು ನಮ್ಮದಾಗಲಿದೆ. ಮಾಜಿ ಶಾಸಕ ಪಿ.ಎಚ್.ಪೂಜಾರ,ಪ್ರಕಾಶ ತಪಶೆಟ್ಟಿ,ಜಿ.ಎನ್.ಪಾಟೀಲರು,ಪಕ್ಷದ ನಾಯಕರು,ಕಾರ್ಯಕರ್ತರು ಶ್ರಮವಹಿಸಿ ಚುನಾವಣೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಜಯ ನಮ್ಮದಾಗಿದೆ ಎಂದರು.
ಮಾಜಿ ಶಾಸಕ ಪಿ.ಎಚ್.ಪಿ.ಎಚ್.ಪೂಜಾರ, ಪ್ರಕಾಶ ತಪಶೆಟ್ಟಿ, ನಾರಾಯಣಸಾ ಭಾಂಡಗೆ, ಜಿ.ಎನ್.ಪಾಟೀಲ, ರಾಜು ನಾಯ್ಕರ, ಶಿವಾನಂದ ಟವಳಿ, ಮೋಹನ್ ಚವ್ಹಾಣ, ಸಂತೋಷ ಹೋಕ್ರಾಣಿ, ಚಂದ್ರಶೇಖರ ಶೆಟ್ಟರ, ಎಂ.ಎಂ.ಹುಲಗಬಾಳಿ, ಮಹಾಂತೇಶ ಕುಮಟಗಿ, ರಾಜು ಪಲ್ಲೇದ, ವೀರಣ್ಣ ಹಲಕುರ್ಕಿ, ಕುಮಾರ ಚವ್ಹಾಣ, ಯು.ಬಿ.ಚೌಕಿಮಠ, ಸಂಗಯ್ಯ ಸರಗಣಾಚಾರಿ, ಸತ್ಯನಾರಾಯಣ ಹೇಮಾದ್ರಿ, ಅನಂತ ಧೋಂಗಡಿ, ಎಸ್.ವೈ.ಗೌಡರ, ಶಿವಕರಣ ಯಾದವಾಡ, ಆರ್.ಆರ್.ಇಂಗಳಗಿ, ಸಂಗಮೇಶ ಹಿತ್ತಲಮನಿ, ಭಾಗ್ಯಶ್ರೀ ಹಂಡಿ, ಭಾಗ್ಯ ಪಾಟೀಲ, ರೇಖಾ ಹುಲಗಬಾಳಿ, ಲಕ್ಷ್ಮೀ ಪೀರಶೆಟ್ಟಿ, ಸರಸ್ವತಿ ತಳವಾರ, ಶೈಲಾ ಅಂಕಲಗಿ ಸೇರಿದಂತೆ ಮತ್ತಿತರರು ಪ್ರಚಾರದಲ್ಲಿ ಭಾಗವಹಿಸಿದ್ದರು.

loading...