ಹೆಚ್.ಡಿ.ಕೆ ಅಧಿಕಾರಾವಧಿಯಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗುವುದು: ರವೀಂದ್ರ

0
20
loading...

ಯಲ್ಲಾಪುರ: ಜನಸಾಮಾನ್ಯರ ನಿರೀಕ್ಷೆಯಂತೆ ಹೆಚ್.ಡಿ. ಕುಮಾರಸ್ವಾಮಿ ಯವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ರಾಜ್ಯಪಾಲರು ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡುತ್ತಿರುವುದು ಸ್ವಾಗತಾರ್ಹ. ಕುಮಾರಸ್ವಾಮಿಯವರ ಅಧಿಕಾರಾವಧಿಯಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಆಗುವದೆಂದು ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಉಸ್ತುವಾರಿ ಹಾಗೂ ಪರಾಜಿತ ಅಭ್ಯರ್ಥಿ ಎ.ರವೀಂದ್ರ ನಾಯ್ಕ ಹೇಳಿದರು.
ರಾಜ್ಯದಲ್ಲಿ ಮತ್ತು ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಪರವಾದ ಅಲೆ ಇದ್ದಾಗ್ಯೂ ಸಹ ಮತವಾಗಿ ಪರಿವರ್ತನೆಗೊಳ್ಳದೇ ಇರುವದರಿಂದ ಪಕ್ಷಕ್ಕೆ ಸೋಲುಂಟಾಗಿದ್ದು ಕ್ಷೇತ್ರದಲ್ಲಿ ಪಕ್ಷ ಸಾಕಷ್ಟು ಪ್ರಚಾರ ಕೈಗೊಂಡಿದ್ದರೂ ಹಿನ್ನೆಡೆ ಉಂಟಾಗಿರುವುದು ವಿಷಾದಕರ. ರಾಜ್ಯದಲ್ಲಿ ಕುಮಾರಸ್ವಾಮಿಯವರ ನೇತೃತ್ವದ ಸರ್ಕಾರ ಇರುವದರಿಂದ ಅವರ ಜನಪರ ಕಾರ್ಯಯೋಜನೆ ಅಡಿಯಲ್ಲಿ ಪಕ್ಷದ ಸಂಘಟನೆಯನ್ನು ಬಲಗೊಳಿಸಲಾಗುವುದು ಎಂದರು.

ಕಾಂಗ್ರೆಸ್ಸಿನೊಂದಿಗೆ ಅಂತರ:
ರಾಜ್ಯದಲ್ಲಿ ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಪಕ್ಷದ ಸಮಿಶ್ರ ಸರ್ಕಾರ ಇದ್ದಾಗಲೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸ್ವತಂತ್ರವಾಗಿ ಸಂಘಟಿಸಲಾಗುತ್ತಿದ್ದು ಕ್ಷೇತ್ರದಲ್ಲಿ ಸಂಘಟನೆಗೆ ಸಂಬಂಧಿಸಿ ಅಂತರವನ್ನು ಕಾಯ್ದುಕೊಳ್ಳಲಾಗುವುದು. ಸಮಿಶ್ರ ಸರ್ಕಾರದಲ್ಲಿ ಸರ್ಕಾರದ ಯೋಜನೆಗೆ ಮಾತ್ರ ಹೊಂದಾಣಿಕೆಯಾಗಿದ್ದು ಪಕ್ಷದ ಸಂಘಟನೆ ಮತ್ತು ಸಿದ್ದಾಂತದಲ್ಲಿ ಅಂತರ ಕಾಯ್ದುಕೊಳ್ಳಲಾಗುವದೆಂದು ರವೀಂದ್ರ ನಾಯ್ಕ ಹೇಳಿದರು.

loading...