“ಕುಂದಾ ನಗರಿಯಲ್ಲಿ ಕಮಲಕ್ಕೆ ಜೈ ಎಂದ ಮತದಾರ” 18 ರಲ್ಲಿ 10 ಕ್ಷೇತ್ರಗಳು ಕಮಲ ವಶ:8 ಕ್ಷೇತ್ರಗಳಲ್ಲಿ ಕೈ ಗೆಲವು

0
26
loading...

      “ಕುಂದಾ ನಗರಿಯಲ್ಲಿ ಕಮಲಕ್ಕೆ ಜೈ ಎಂದ ಮತದಾರ”
18 ರಲ್ಲಿ 10 ಕ್ಷೇತ್ರಗಳು ಕಮಲ ವಶ:8 ಕ್ಷೇತ್ರಗಳಲ್ಲಿ ಕೈ ಗೆಲವು
ಆನಂದ ಭಮ್ಮಣವರ
ಬೆಳಗಾವಿ : ರಾಜ್ಯದ ಹೆಚ್ಚು ಕ್ಷೇತ್ರಗಳನ್ನು ಹೊಂದಿದ ಎರಡನೆ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಈ ಭಾರಿ ಚುನಾವಣೆ ಫಲಿತಾಂಶ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಸಂಖ್ಯೆ ಹೆಚ್ಚಿಸಿದೆ.ಮೋದಿ ಮತ್ತು ಅಮೀತ ಶಾ ಅವರ ಅಬ್ಬರದ ಪ್ರಚಾರದ ಫಲವಾಗಿ ಜಿಲ್ಲೆಯೆ 18 ಕ್ಷೇತ್ರಗಳ ಪೈಕಿ ಬಿಜೆಪಿ 10 ರಲ್ಲಿ ಗೆದ್ದು ಕುಂದಾ ನಗರಿಯಲ್ಲಿ ಕಮಲ ಭಧ್ರ ಎಂದ ಮತದಾರರ ಬಿಜೆಪಿಗೆ ಜಯ ಎಂದಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿಯ ನಾಯಕರು ಹೊಂದಾಣಿಕೆ ರಾಜಕಾರಣ ಮತ್ತು ಬಂಡಾಯದ ನಡುವೆಯೂ ಕಮಲ ಅರಳಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.ಬೆಳಗಾವಿ ಲೋಕ ಸಭೆ ವ್ಯಾಪ್ತಿಯಲ್ಲಿ 5 ಸ್ಥಾನ,ಚಿಕ್ಕೋಡಿ ಲೊಕ ಸಭೆ ವ್ಯಾಪ್ತಿಯಲ್ಲಿ 4 ಸ್ಥಾನ ಮತ್ತು ಕೆನರಾ ಲೋಕ ಸಭೆ ವ್ಯಾಪ್ತಿಯಲ್ಲಿ 1 ಸ್ಥಾನ ಗೆದ್ದಿದೆ.
ದಕ್ಷಿಣೋತ್ತರದಲ್ಲಿ ಬಿಜೆಪಿಗೆ ಭರ್ಜರಿ ಗೆಲವು:
ಬೆಳಗಾವಿ ದಕ್ಷಿಣ ಮತ್ತು ಉತ್ತರ ಮತ ಕ್ಷೇತ್ರದಲ್ಲಿ ಕಳೆದ ಬಾರಿ ಎಂಈಎಸ್ ಮತ್ತು ಕಾಂಗ್ರೆಸ್ ಪಾಳಾಗಿದ್ದವು.ಆದರೆ ಈ ಬಾರಿ ಬಿಜೆಪಿ ಈ ಎರಡು ಕ್ಷೇತ್ರದಲ್ಲಿ ಜಯ ಸಾಧಿಸಿದೆ.ಎಂಈಎಸ್ ನಾಯಕರ ಒಳ ಜಗಳ ಮತ್ತು ಬಿಜೆಪಿ ನಾಯಕರ ಒಗಟ್ಟು ಈ ಭಾರಿ ಕಮಲ ಅರಳುವಂತೆ ಮಾಡಿದೆ.ಕಳೆದ ಭಾರಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಈ ಭಾರಿ ದಾಖಲೆ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ನಾರಾಯಣ ಹೋರಗಿನ ಅಭ್ಯರ್ಥಿ ಎಂಬುವುದು ಕಾಂಗ್ರೆಸ್ ಸೀಲಿಗೆ ಕಾರನ ಎನ್ನಲಗುತ್ತಿದೆ.ಜೊತೆಗೆ ಬಿಜೆಪಿಗೆ ಶಾ ಮತ್ತು ಮೋದಿ ಅಲೆ ಅಭೂತ ಪೂರ್ವ ಗೆಲವು ತಂದು ಕೊಟ್ಟಿದೆ ಎಂದು ಹೇಳಲಾಗುತ್ತಿದೆ.
ಉತ್ತರದಲ್ಲಿ ಬಿಜೆಪಿ ಗೆಲುವಿನೊಂದಿಗೆ ಸೇಠಗೆ ಭಾರಿ ಸೋಲು ಉಣಿಸಿದ ಬೆನಕೆಗೆ ಎಂಈಎಸ್ ಮತಗಳು ಮತ್ತು ಲಿಂಗಾಯತ ಮತಗಳ ಕ್ರೋಡಿಕರಣದಿಂದ ಭಾರಿ ಗೆಲುವಿಗೆ ಸಹಕಾರಿಯಾಗಿ ಉತ್ತರದಲ್ಲಿ ಕಮಲ ಅರಳಿದೆ.
ಖಾನಾಪುರ ಮತ್ತು ಬೆಳಗಾವಿ ಗ್ರಾಮೀಣದಲ್ಲಿ ಕೈ ಮೇಲು:
ಖಾನಾಪುರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‍ನ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಬಿಜೆಪಿ ಅಭ್ಯರ್ಥಿ ವಿಠ್ಠಲ ಹಲಗೆಕರ ವಿರುದ್ದ 5 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿದಾಳೆ.ಇಲ್ಲಿ ಕಳೆದ ಬಾರಿ ಎಂಈಎಸ್‍ನ ಅರವಿಂದ ಪಾಟೀಲ ಗೆದ್ದಿದ್ದರು.ಆದರೆ ಈ ಬಾರಿ ಮೂರನೆ ಸ್ಥಾನಕ್ಕೆ ತಳಲಾಗಿದೆ.ಇಲ್ಲಿ ಬಿಜೆಪಿ ಮಾಜಿ ಶಾಸಕ ರೇಮಾನಿ ಪುತೃ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿüಸಿ 5 ಸಾವಿರ ಮತ ಪಡೆದಿದ್ದೆ ಕಾಂಗ್ರೆಸ್ ಗೆಲುವಿಗೆ ಲಾಭ ವಾಗಿ ಬಿಜೆಪಿ ಸೋಲು ಕಂಡಿದೆ.
ಕಿತ್ತೂರದಲ್ಲಿ ಗೆದ್ದು ಬೈಲಹೊಂಗಲದಲ್ಲಿ ಸೋತ ಕಮಲ:
ಕಿತ್ತೂರ ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖಕ್ಕೆ ಮನ್ನನೆ ನೀಡಿದ ಮತದಾರ ಬಿಜೆಪಿಯ ಮಹಾಂತೇಶ ದೊಡ್ಡಗೌಡರ ಅವರಿಗೆ ವಿಜಯದ ಮಾಲೆ ಹಾಕಿದ್ದಾರೆ.ಇಲ್ಲಿ ಮಾಜಿ ಶಾಸಕ ಸುರೇಶ ಮಾರಿಹಾಳ ಬಿಜೆಪಿ ಟಿಕೆಟ್ ಸಿಗದ ಹಿನ್ನಲೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕಿಳಿದಿದ್ದರು ಮತ್ತು ಬಾಬಾಸಾಹೇಬ ಪಾಟೀಲ ಕೂಡ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ತಂತ್ರ ರೂಪಿಸಿ ಇನಾಮದಾರ್‍ಗೆ ಸೋಲಿನ ರುಚಿ ತೊರಿಸಿದ್ದಾರೆ.
ಬೈಲಹೊಂಗಲದಲ್ಲಿ ಕಳೆದ ಬಾರಿ ಗೆದಿದ್ದ ವಿಶ್ವನಾಥ ಪಾಟೀಲ ಈ ಬಾರಿ ಮೂರನೆ ಸ್ಥಾನಕ್ಕೆ ಇಳಿದಿದ್ದರೆ.ಇಲ್ಲಿ ಕಾಂಗ್ರೆಸ್‍ನ ಮಹಾಂತೇಶ ಕೌಜಲಗಿ ಗೆಲವು ಸಾಧಿಸಿದ್ದಾರೆ.
ಒಟ್ಟಿನಲ್ಲಿ ಕುಂದಾ ನಗರಿನಲ್ಲಿ ನಿರೀಕ್ಷೇಗೂ ನಿಲುಕದ ಗೆಲವು ಸೋಲುಗಳಾಗಿವೆ.ಕೈ ಹಾಗು ಕಮಲ ಬಂಡಾಯದ ಜೊತೆಗೆ ಹೊಂದಾಣಿಕೆ ರಾಜಕಾರಣದ ಫಲವಾಗಿ ಕೆಲ ಕ್ಷೇತ್ರಗಳಲ್ಲಿ ಸೋಲು ಕಂಡಿದೆ.

loading...