ಅಧಿಕಾರಿಗಳು ಲಂಚದಾಸೆಗೆ ಸರಕಾರ ವಂಚನೆ

0
23
loading...

ಹೊನ್ನಾವರ: ಹೊನ್ನಾವರದಲ್ಲೊಬ್ಬ ಚಾಲ್ರ್ಸ ಶೇಟ್‌ರಾಜ್‌, ವಿಜಯ್‌ ಮಲ್ಯಾ ಮೆರೆಯುತ್ತಿದ್ದಾನೆ. ಅಧಿಕಾರಿಗಳನ್ನು ಲಂಚದ ಆಮೀಶ ಹಾಗೂ ಆರ್‌.ಪಿ.ನಾಯ್ಕ ಎಂಬ ಭ್ರಷ್ಟ ಇಂಜಿನಿಯರ್‌ನಿಂದ ಬೆದರಿಸುತ್ತಾ ಸರಕಾರದ ಹಣ ದರೋಡೆ ಮಾಡುತ್ತಾ ಶ್ರೀಮಂತನಾಗುತ್ತಿದ್ದಾನೆ. ಯಾವುದೇ ಕಾನೂನು ನೀತಿ ನಿಯಮಗಳನ್ನು ಪಾಲಿಸದೇ ವಂಚನೆಯ ಬದುಕು ಮಾಡಿಕೊಂಡಿರುವ ರಾಘವೇಂದ್ರ ವಿಠ್ಠಲ ನಾಯ್ಕ ಲೆಕ್ಕವಿಡಲಾಗದಷ್ಟು ಹಣ ಮಾಡಿಕೊಂಡಿದ್ದಾನೆ.
ಹೊನ್ನಾವರ ಪ್ರವಾಸಿ ಮಂದಿರದ ಬಳಿ ಖುಲ್ಲಾ ಜಾಗದಲ್ಲಿ ಇನ್ನೊಂದು ಪ್ರವಾಸಿ ಮಂದಿರ ನಿರ್ಮಿಸಲು ಸರಕಾರ ತೀರ್ಮಾನಿಸಿದಷ್ಟೆ ಟೆಂಡರ್‌ ಕರೆದು ಕೆಲಸಕ್ಕೆ ಗುತ್ತಿಗೆ ನೀಡಲು ಸಿದ್ಧರಾಗುತ್ತಿದ್ದಂತೆ ಸುಳ್ಳು ಲೆಕ್ಕದ ಟೆಂಡರ್‌ ನೀಡಿ ಕೆಲಸವನ್ನು ರಾಘುಯಾನೆ ರಾಘವೇಂದ್ರ ವಿಠ್ಠಲ ನಾಯ್ಕ ವಹಿಸಿಕೊಂಡಿದ್ದಾನೆ. ಈತನ ಟೆಂಡರ್‌ ‘ವರ್ಡನ್‌ ಫೇಕ್‌’ ಆಗಿದ್ದು, ಆದರೂ ಆತನಿಗೆ ಅದನ್ನು ನೀಡಲಾಗಿದೆ. ಇಷ್ಟಿದ್ದೂ ಆರು ತಿಂಗಳಲ್ಲಿ ಮುಗಿಸಿ ಕೊಡುವ ಕೆಲಸ ಇದೀಗ ಎಂಟು ತಿಂಗಳು ಕಳೆದರೂ ಹಸ್ತಾಂತರ ಮಾಡಿಲ್ಲ. ಸುಮಾರು ಲಿಂಟಲ್‌ವರೆಗೆ ತಲುಪಿರುವ ಕೆಲಸ ಮುಂದೆ ಹೋಗಿಲ್ಲ. ಇದಕ್ಕೆ ಬಳಸಿರುವ ಸಿಮೆಂಟ್‌, ರೇತಿ ಹಾಗೂ ಕಲ್ಲಿನ ಬಗ್ಗೂ ಸಂಶಯಗಳು ಎದ್ದಿವೆ. ಇಷ್ಟು ಕೆಲಸಕ್ಕೆ ಸರಿಯಾಗಿ ನೀರು (ಕ್ಯೂರಿಂಗ್‌) ಹಾಕಿದ್ದೇ ಯಾರೂ ನೋಡಿಲ್ಲ ಎನ್ನುತ್ತಾರೆ.
ನೀರಿನ ಯೋಜನೆಯಲ್ಲಿ ‘ವಿಷ’: ಹಳದೀಪುರ ಹಾಗೂ ಕುದ್ರಗಿಗಳಲ್ಲಿ ವಾಟರ್‌ ಸಪ್ಲಾಯ್‌-ಟ್ಯಾಂಕ್‌ ನಿರ್ಮಿಸಿ ಪೈಪ್‌ ಜೋಡಿಸಿ ಕೊಡುವ ಗುತ್ತಿಗೆ ಪಡೆದು ಇದುವರೆಗೆ ಕೆಲಸ ಮಾಡಿ ಕೊಡದೆ ವರ್ಷಗಳು ಉರುಳಿವೆ ಕುದ್ರಗಿಯ ತಾಲೂಕಾ ಪಂಚಾಯತ್‌ ಸದಸ್ಯರೇ ತಾ.ಪಂ ಅಧ್ಯಕ್ಷರಾಗಿದ್ದಾರೆ. ಇಷ್ಟಿದ್ದರೂ ಆ ಕೆಲಸ ಮಾಡಿಸಲು ಅವರಿಂದ ಸಾಧ್ಯವಾಗಿಲ್ಲ. ತಾಲೂಕಾ ಪಂಚಾಯತ್‌ ಅಧ್ಯಕ್ಷರಿಗೇ ಬೆದರಿಸಿದ್ದಾನೆಯೇ? ಎಂಬ ಅನುಮಾನ ಬರುತ್ತಿದೆ. ಇದೇ ರೀತಿ ಹಳದೀಪುರದಲ್ಲೂ ಕೆಲಸ ಅರ್ಧಕ್ಕೆ ನಿಂತಿದೆ. ಅಂದಿನ ಶಾಸಕರಾದ ಶಾರದಾ ಶೆಟ್ಟರಿಗೆ – ಕಾರವಾರದ ಆರ್‌.ಪಿ.ನಾಯ್ಕ ಮಧ್ಯವರ್ತಿಯಾಗಿ ನಿಂತು ಈ ಕೆಲಸ ಪೂರ್ಣಗೊಳಿಸದೇ ಇಟ್ಟಿದ್ದಾನೆ ಎಂದು ಹಲವರು ಆಡಿಕೊಳ್ಳುತ್ತಿದ್ದಾರೆ. ಇವೆರಡೂ ಕೆಲಸಗಳು ಐದು ವರ್ಷದಿಂದ ನಿಂತು ಬಿಟ್ಟಿವೆ. ಈ ಎರಡೂ ಕೆಲಸದ ಪೂರ್ಣ ಬಿಲ್‌ ಪಡೆದಿದ್ದಾನೆ ಎಂದು ಹಲವರು ಹೇಳುತ್ತಾರೆ.
ಅಳ್ಳಂಕಿ ಪದವಿಪೂರ್ವ ಕಾಲೇಜು ಕಟ್ಟಡ: ಅಳ್ಳಂಕಿಯ ಪ.ಪೂ.ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಿಸುವ ಬಗ್ಗೆ ಸರಕಾರ ಕೈಗೊಂಡ ತಿರ್ಮಾನದಂತೆ ಕರೆದ ಟೆಂಡರಿಗೆ ಇದೇ ಪಾಪಿ ರಾಘು ಭಾಗಿಯಾಗಿ ಪಡೆದುಕೊಂಡ. ಆದರೆ 2011-12 ರ ಈ ಕಟ್ಟಡ 2015-16 ರಲ್ಲಿ ಮುಗಿಸಿಕೊಟ್ಟು 5 ವರ್ಷ ಮಣ್ಣು ತಿಂದೂ ಬಚಾವಾಗಿದ್ದಾನೆ. ಕಟ್ಟಡ ಇಗಲೋ ಆಗಲೋ ಎಂಬಂತಿದೆ.
ಕಾಂಡ್ಳಾ ಮರದ ಮಾರಣ ಹೋಮ: ಕಾಸರಕೋಡಿನ ಹಂಚು ಕಾರ್ಖಾನೆಯ ಬಳಿ ಇರುವ ಕಾಂಡ್ಳಾ ಮರವನ್ನು ಮಧ್ಯ ಮಧ್ಯ ತೆಗೆದು ವ್ಯವಸ್ಥಿತವಾಗಿ ಮಾಡುವ ಟೆಂಡರ್‌ನ್ನು ಬೇರೊಬ್ಬರು ಪಡೆದಿದ್ದರು. ಆದರೆ ಕೆಲಸ ರಾಘು ಯಾನೆ ರಾಘವೇಂದ್ರ ವಿಠ್ಠಲ ನಾಯ್ಕ ಮಾಡುತ್ತೇನೆಂದು ಹೇಳಿ ಲೆಕ್ಕ ಇಲ್ಲದಷ್ಟು ಮರ ಕಡಿದು ಹಾಕಿದ್ದಾನೆ. ಅರಣ್ಯಾಧಿಕಾರಿಗಳು ಹಿಂದಿನ ಗೆಳೆತನದಲ್ಲಿ ಅಂದರೆ ರಾಮತೀರ್ಥದ ಬಳಿಯ ಗ್ಯಾಸ್‌ ಗೋಡೋನ್‌ ನಿರ್ಮಿಸುವ ಸ್ಥಳದಲ್ಲಿ ಅಕ್ರಮವಾಗಿ ದಾರಿ ಬಿಟ್ಟು ಕೊಡುವಾಗ ಆದ ಗೆಳೆತನದಂತೆ- ಇಲ್ಲೂ ಆತನಿಗೆ ಕ್ಷಮೆ ನೀಡಿದ್ದು ಇರುತ್ತದೆ. ಆದರೆ ಮರಗಳ ಶಾಪ ಈತನನ್ನು ಬಲಿಪಡೆದೇ ಪಡೆಯುತ್ತದೆ. ಯಾರು ಈತನ ರಕ್ಷಕರು? ರಾಘು ವಿಠ್ಠಲ ನಾಯ್ಕ ಇಂಥೆಲ್ಲ ನೀಚ ಕೆಲಸ ಮಾಡಿಯೂ ಜೈಲಿಗೆ ಹೋಗದೇ ಹೊರಗಿರಲು ಕಾರಣ ಯಾರು? ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ. ಈತನು ಮೋಸ ವಂಚನೆ ಮಾಡಿ ಸಿಕ್ಕಿಬಿದ್ದಾಗ ತನ್ನ ಕುಂಟ ಕಾಲನ್ನು ತೋರಿಸಿ ಅತ್ತು ಕರೆದು ಜನರಿಗೆ ದಾರಿ ತಪ್ಪಿಸುತ್ತಾನೆ. ಇನ್ನೂ ದೊಡ್ಡ ವಂಚನೆಗಳಿಗೆಲ್ಲಾ ಆರ್‌.ಪಿ.ನಾಯ್ಕ ಎಂಬ ಕಾರವಾರ ಜಿ.ಪಂ.ನ ಇಂಜಿನಿಯರ್‌ ರಕ್ಷಿಸುತ್ತಾನೆ. ಆರ್‌.ಪಿ.ನಾಯ್ಕನಿಗೆ ಉತ್ತರಕನ್ನಡದ ದೊಡ್ಡ ಕಂಟ್ರಾಕ್ಟರ್‌ ಜೆ.ಕೆ.ರಾವ್‌ ಎಂಬ ಧನವಂತ ರಕ್ಷಿಸುತ್ತಾನೆ. ಹೀಗೆ ನಡೆದಿದೆ ಈ ಎಲ್ಲ ಕೆಟ್ಟ ಕಂಟ್ರಾಕ್ಟರ್‌-ಅಧಿಕಾರಿಗಳು ಗೆಳೆತನ ಮೇಲಿನ ಯಾವುದೇ ಒಂದು ಘಟನೆ ತೆಗೆದುಕೊಂಡರೂ ರಾಘು ನಾಯ್ಕನಿಗೆ ಬ್ಲ್ಯಾಕ್‌ ಲೀಸ್ಟ್‌ಲ್ಲಿ ಹಾಕಬಹುದು.

loading...