ಅಧಿಕಾರ ಕಿತ್ತಾಟದಲ್ಲಿ ಅಭಿವೃದ್ಧಿ ಮರೆತ ಮೈತ್ರಿ ಸರ್ಕಾರ : ಚಂದ್ರಶೇಖರ

0
11
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ರಾಜ್ಯದ ಜನತೆಯಿಂದ ತಿರಸ್ಕೃತ ಅಪವಿತ್ರ ಮೈತ್ರಿ ಮಾಡಿಕೊಂಡ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು ರಾಜ್ಯದ ಅಭಿವೃದ್ಧಿ ಪರ ಚಿಂತಿಸದೆ ಖಾತೆ ಹಂಚಿಕೆಯ ಕಿತ್ತಾಟದಲ್ಲಿ ಮುಳುಗಿವೆ ಎಂದು ಬಿಜೆಪಿಯ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಅಭಿಪ್ರಾಯಪಟ್ಟಿದ್ದಾರೆ.

ಜನರಿಂದ ಆಯ್ಕೆಯಾದ ಶಾಸಕರು ಕೇವಲ ತಮ್ಮ ಅಧಿಕಾರದ ವ್ಯಾಮೋಹದಿಂದ ಸಮುದಾಯದ ಪ್ರಭಾವ ಬಳಸಿ ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದ ಅವರು ಪ್ರಸ್ತುತ ಸರ್ಕಾರದ ಸಚಿವ ಸಂಪುಟವು ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ ,ಈಗ ಸಚಿವರಾಗಿರುವವರಲ್ಲಿಯೇ ಖಾತೆ ಹಂಚಿಕೆಯ ಬಗ್ಗೆ ಸಾಕಷ್ಟು ಅಸಮಾಧಾನಗಳು ಒಂದುಕಡೆಯಾದರೆ ಸಚಿವ ಸ್ಥಾನ ವಂಚಿತರ ಗುಂಪುಗಾರಿಕೆ ಬಂಡಾಯ ಎದಿದ್ದಾರೆ.
ಸರಕಾರ ಯಾವುದೇ ಅಭಿವೃದ್ಧಿಪರ ,ಜನಹಿತ ಕಾರ್ಯಕ್ರಮಗಳನ್ನು ನೀಡದೇ ಉಭಯ ಪಕ್ಷಗಳು ಚುನಾವಣೆ ಸಂಧರ್ಭದಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆ, ಜನತೆಗೆ ನೀಡಿದ ಭರವಸೆಗಳನ್ನು ಮರೆತು ಕೇವಲ ಅಧಿಕಾರ ಹಂಚಿಕೆಯ ಕಿತ್ತಾಟದಲ್ಲಿ ಮುಳುಗಿವೆ ಎಂದಿರುವ ಅವರು ರಾಜ್ಯದ ಜನತೆಯು ಮುಂದಿನ ದಿನಮಾನಗಳಲ್ಲಿ ಭಾರತೀಯ ಜನತಾ ಪಕ್ಷದ ಸ್ಥಿರ ಮತ್ತು ಜನಪರ ಆಡಳಿತದ ನೀರಿಕ್ಷೆಯಲ್ಲಿದ್ದು ಆದಷ್ಟು ಬೇಗ ಜನತೆಗೆ ಸಿಹಿ ಸುದ್ದಿ ಸಿಗಲಿದೆ ಎಂದು ಹೇಳಿದ್ದಾರೆ.

loading...