ಅನಿಷ್ಠ ಪದ್ದತಿ ಹೋಗಲಾಡಿಸುವ ಕಾರ್ಯ ಶ್ಲಾಘನೀಯ: ಆಂಜನೇಯ

0
16
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ: ನಮ್ಮ ಸಮಾಜದಲ್ಲಿರುವ ಅನಿಷ್ಠ ಪದ್ದತಿಗಳನ್ನು ತೊಡೆದು ಹಾಕಿ ಇಂತಹ ಪದ್ದತಿಗಳನ್ನು ಆಚರಣೆ ಮಾಡುವವರ ವಿರುದ್ದ ಹೋರಾಟ ಮಾಡಿ ಜಾಗೃತಿ ಮೂಡಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಶ್ಲಾಘನಿಯ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ವಿಮುಕ್ತ ದೇವದಾಸಿ ಮಹಿಳಾ ಹಾಗೂ ಮಾದಿಗ-ಛಲವಾದಿ ಮಹಾಸಭಾ ಕುಷ್ಟಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ದೇವದಾಸಿ ಪಡಿಯಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರೊ. ಬಿ.ಕೃಷ್ಣಪ್ಪರವರ 80ನೇ ವರ್ಷದ ಜನ್ಮದಿನ ಹಾಗೂ 32 ಜೋಡಿ ದೇವದಾಸಿ ಮಕ್ಕಳ ಸಾಮೂಹಿಕ ವಿವಾಹ ಸಮಾರಂಭದ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಾಮಾಜದವರು ಸಮಾಜದ ಮುಖ್ಯ ವಾಹಿನಿಗೆ ಬರಲು ಶಿಕ್ಷಣವಂತರಾಗಬೇಕು ಶಿಕ್ಷಣವನ್ನು ಕಲಿತಾಗ ಮಾತ್ರ ಪ್ರತಿಯೊಬ್ಬರು ಜಾಗೃತಗೊಳ್ಳುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿ ದೇವದಾಸಿ ತಾಯಂದಿರ ಮಕ್ಕಳ ಮದುವೆ ಮಾಡುತ್ತಿರುವದು ಶ್ಲಾಘನೀಯ.

ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಜಾಗೃತ ಮಾಡುತ್ತಿರುವ ಕುಷ್ಟಗಿ ಚಂದಾಲಿಂಗ ಕಲಾಲಬಂಡಿ ಮತ್ತು ನಾಗರಾಜ ಮೇಲಿನಮನಿ ಅವರಗಳ ಕೆಲಸ ಮಾದರಿ ಎಂದರೆ ತಪ್ಪಾಗಲಾರದು. ನಾನು ಕಳೆದ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವನಿದ್ದಾಗ ಚಂದಾಲಿಂಗ ಅವರು ನನ್ನ ಬಳಿ ದೇವದಾಸಿ ಮಕ್ಕಳ ವಿವಾಹ ಆಗುವರಿಗೆ ಸರಕಾರದಿಂದ ಸಹಾಯಧನ ನೀಡಬೇಕು ಎಂದು ನನ್ನ ಗಮನ ಸೆಳೆದರು. ಅವರ ಬೇಡಿಕೆ ಸೂಕ್ತವೆನಿಸಿ ಸರಕಾರದಿಂದ 5 ಲಕ್ಷ ಧನಸಹಾಯ ಘೊಷಣೆ ಮಾಡಲಾಗಿದೆ. ಶೋಷಿತರ ಬಗ್ಗೆ ಬುದ್ದ, ಬಸವಣ್ಣ, ಹಾಗೂ ಅಂಬೇಡ್ಕರ್ ಅವರ ಹೋರಾಟದ ಫಲವೆ ಇಂದು ನಾವುಗಳ ಜಾಗೃತರಾಗುತ್ತಿದ್ದೇವೆ. ನಾವುಗಳು ಇನ್ನು ಸಂಪೂರ್ಣವಾಗಿ ಜಾಗೃತವಾಗಿಲ್ಲ ಇನ್ನು ಕೆಲವು ಕಡೆಗಳಲ್ಲಿ ದೇವದಾಸಿ ಪದ್ದತಿಗಳು ನಡೆಯತ್ತವೆ. ಇಂತಹ ಅನಿಷ್ಠ ಪದ್ದತಿಗಳನ್ನು ದೂರ ಮಾಡಲು ನಮ್ಮೊಂದಿಗೆ ಎಲ್ಲರು ಕೈಜೋಡಿಸಿ ಸಹಕಾರ ನೀಡಿ. ಒಳ್ಳೆಯ ಕೆಲಸಗಳು ನಮ್ಮಿಂದಲೇ ಮೊದಲು ಪ್ರಾರಂಭವಾಗಬೇಕು ಉದಾಹರಣಿಗೆ ನನ್ನ ಮಗಳ ಮದುವೆಯನ್ನು ನಾನು ಸಾಮೂಹಿಕ ವಿವಾಹ ಕಾರ್ಯಕ್ರದಲ್ಲಿ ಮಾಡಿದ್ದೇನೆ. ದೇವರ ಹೆಸರಿನಲ್ಲಿ ನಾವುಗಳು ಮಾಡುವ ದುಂದವೆಚ್ಚಕ್ಕೆ ಕಡಿವಾಣ ಹಾಕಿ ಮೌಢ್ಯ ಆಚರಣೆಗಳನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ಶಾಸಕ ಅಮರೇಗೌಡ ಬಯ್ಯಾಪೂರ ಮಾತನಾಡಿ, ಸಮಾಜವನ್ನು ಸುಧಾರಣೆ ಮಾಡಬೇಕು ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಕೆಲಸ ಮಾಡಬೇಕು ಎನ್ನುವ ಚಿಂತಕರು ಇದ್ದಾಗ ಮಾತ್ರ ಇಂತಹ ಶೋಷಣೆಗೆ ಒಳಗಾದವರು ಮೇಲೆ ಬರಲು ಸಾಧ್ಯ ಇಂತಹ ಮಹಾ ಕಾರ್ಯವನ್ನು ಆಯೋಜಕ ಚಂದಾಲಿಂಗಪ್ಪ ಮಾಡುತ್ತಿರುವದು ಶ್ಲಾಘನೀಯ ಎಂದು ಹೇಳಿದರು.

ಚಿತ್ರದುರ್ಗಾ ಹಿರಿಯೂರ ಆದಿಜಾಂಬವ ಮಠದ ಪೀಠಾಧಿಪತಿ ಷಡಕರಿ ಸ್ವಾಮಿಗಳು ಮದುಮಕ್ಕಳಿಗೆ ಆರ್ಶಿವಚನ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ. ಶರಣಪ್ಪ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ನಾಗರಾಜ ವಡ್ಡಿಗೇರಿ, ವಿಠ್ಠಪ್ಪ ಗೋರಂಟ್ಲಿ, ತಾಲೂಕಾ ಪಂಚಾಯತ ಅಧ್ಯಕ್ಷಣಿ ಮಹಾಂತಮ್ಮ ಕೆ. ಪೂಜಾರ, ಪುರಸಭೆ ಉಪಾಧ್ಯಕ್ಷೆ ಜ್ಯೋತಿ ಸೇಬಿನಕಟ್ಟಿ, ವಸಂತ ಮೇಲಿನಮನಿ, ಹೂಡಿ ವೆಂಕಟೇಶ್, ಚಂದ್ರಶೇಖರ ಹಿರೇಮನಿ, ಪರುಶುರಾಮ ಕೊಡ್ಲಿ, ಆನಂದ ಭಂಡಾರಿ, ಹಾಗೂ ಕಾರ್ಯಕ್ರಮದ ಆಯೋಜಕ ಚಂದಾಲಿಂಗಪ್ಪ ಕಲಾಲಬಂಡಿ ಮುಂತಾದವರು ಭಗವಹಿಸಿದ್ದರು.

loading...