ಅನೀತಿಯ ಸರ್ಕಾರಕ್ಕೆ ಉಳಿಗಾಲವಿಲ್ಲ

0
17
loading...

ರಬಕವಿ-ಬನಹಟ್ಟಿ,ಜೂ2:ತೇರದಾಳ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿಯೇ ಅತಿ ಹೆಚ್ಚು 21 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸುವಲ್ಲಿ ಕಾರಣಿಭೂತರಾದ ಕಾರ್ಯಕರ್ತರು ಪ್ರತಿಯೊಬ್ಬರೂ ತಾವೇ ಅಭ್ಯರ್ಥಿಯಂತೆ ಕಾರ್ಯನಿರ್ವಹಿಸಿದ್ದು ವಿಶೇಷವಾಗಿತ್ತು. ಅದರಂತೆ ಕಾರ್ಯಕರ್ತರೆಲ್ಲರೂ ಶಾಸಕರಿದ್ದಂತೆ, ವಿಪಕ್ಷವಾದ ಕಾಂಗ್ರೆಸ್‍ನಲ್ಲಿ ಕಾರ್ಯಕರ್ತರ ಪಡೆಯಿಲ್ಲದೆ ಬಿಕೋ ಎನ್ನುತ್ತಿದೆ. ಕಾರ್ಯಕರ್ತರ ಪಡೆಯಿದ್ದರೆ ಕೇವಲ ಬಿಜೆಪಿಯಲ್ಲಿ ಮಾತ್ರ. ನಮ್ಮ ಕಾರ್ಯಕರ್ತರ ನಕಲು ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮತದಾರನ ಪ್ರತ್ಯೇಕ ಭೆಟ್ಟಿಯಿಂದ ಇಷ್ಟೊಂದು ಅಂತರದ ಗೆಲುವಿಗೆ ಸಾಧ್ಯವಾಯಿತು. ಈ ಗೆಲುವಿನ ಶ್ರೇಯಸ್ಸು ನಿಮ್ಮದು ಎಂದು ಶಾಸಕ ಸಿದ್ದು ಸವದಿ ಸಂತಸ ವ್ಯಕ್ತಪಡಿಸಿದರು.
ಶನಿವಾರ ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರಾದ್ಯಂತ ಸಮಸ್ಯೆಗಳು ತುಂಬಾ ಇವೆ. ತಮ್ಮ ತಮ್ಮ ಪ್ರದೇಶದ ಸಮಸ್ಯೆಗಳನ್ನು ಸಂಕೋಚವಿಲ್ಲದೆ ಪಕ್ಷಾತೀತವಾಗಿ ಗಮನಕ್ಕೆ ತಂದರೆ ಕಾರ್ಯ ಮಾಡುವದಾಗಿ ಸವದಿ ತಿಳಿಸಿದರು.
ಅನೀತಿ ಸರ್ಕಾರಕ್ಕೆ ಉಳಿಗಾಲವಿಲ್ಲ: ಅಪವಿತ್ರ ಮೈತ್ರಿಯಿಂದ ಕೂಡಿರುವ ರಾಜ್ಯ ಸರ್ಕಾರಕ್ಕೆ ಉಳಿಗಾಲವಿಲ್ಲ. ಸರ್ಕಾರ ರಚನೆಗೆ 15 ದಿನಗಳ ಕಾಲ ಅಧಿಕಾರದ ಆಸೆಗೆ ಗುದ್ದಾಟ ನಡೆಸುತ್ತ ಕಾಂಗ್ರೆಸ್-ಜೆಡಿಎಸ್ ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಕೇವಲ 6 ತಿಂಗಳೊಳಗಾಗಿ ಅಧಿಕಾರ ಪತನವಾಗಲಿದೆ ಎಂದರು. ರಾಜ್ಯದಲ್ಲಿ ಬಿಜೆಪಿ ಆಡಳಿತ ನಿಶ್ಚಿತವಾಗಿತ್ತು. 26 ಕ್ಷೇತ್ರಗಳಲ್ಲಿ ಇನ್ನೂರರಿಂದ ಎರಡು ಸಾವಿರಗಳ ಕಡಿಮೆ ಮತಗಳ ಅಂತರದ ಸೋಲುಗಳು ಸ್ವಲ್ಪ ತೊಂದರೆಯಾಗಲು ಕಾರಣವಾಯಿತೆಂದು ಸವದಿ ಬೇಸರ ವ್ಯಕ್ತಪಡಿಸಿದರು.
ಎಲ್ಲದಕ್ಕೂ ಸೈ: ಚುನಾವಣೆ ಪೂರ್ವದಲ್ಲಿ ನೀಡಿದ ಆಶ್ವಾಸನೆಯಂತೆ ಮರಳು ಸುಲಭವಾಗಿ ದೊರಕಲು ಮರಳು ಸರಳೀಕರಣ ಮಾಡಿಯೇ ತೀರುತ್ತೇನೆ. ಸರ್ಕಾರ ನಮ್ಮದಿಲ್ಲ ಕಾರಣ ಸ್ವಲ್ಪ ವಿಳಂಬವಾಗುವದು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾಮಾಣಿಕ ಬಡವರಿಗೆ ಹಾಗು ಬಿಜೆಪಿ ಕಾರ್ಯಕರ್ತರೆಂಬ ಉದ್ದೇಶದಿಂದ ಆಶ್ರಯ ಫಲಾನುಭವಿಗಳಿಗೆ ದ್ರೋಹವೆಸಗಿದ್ದಾರೆ. ಅವರ್ಯಾರು ಚಿಂತೆ ಮಾಡುವ ಅಗತ್ಯವಿಲ್ಲ. ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಮನೆ ನಿರ್ಮಿಸಿ ಕೊಡಲಾಗುವದು. ಅದರಂತೆ ಮಹತ್ವದ್ದಾಗಿ ಅರಣ್ಯ ಪ್ರದೇಶದಲ್ಲಿ ವಾಸವಿರುವ ಫಲಾನುಭವಿಗಳಿಗೆ ಕೇಂದ್ರ ಮಟ್ಟದಲ್ಲಿ ಇದರ ವಿಷಯವಿದ್ದು, ಅಂಥಹ ಕುಟುಂಬಗಳಿಗೆ ಅಧಿಕೃತ ಹಕ್ಕುಪತ್ರ ಒದಗಿಸಲು ಸಕಲ ರೀತಿಯಲ್ಲಿ ಸನ್ನದ್ಧವಾಗುತ್ತೇನೆಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಜಿಪಂ ಸದಸ್ಯರಾದ ಪರಶುರಾಮ ಬಸವ್ವಗೋಳ, ಪುಂಡಲೀಕ ಪಾಲಭಾಂವಿ, ಮೀನಾಕ್ಷಿ ಸವದಿ, ರಾಜು ಅಂಬಲಿ, ಬಸನಗೌಡ ಪಾಟೀಲ, ಮಹಾದೇವಪ್ಪ ಹಟ್ಟಿ, ಡಿ.ಆರ್. ಪಾಟೀಲ, ಪುಷ್ಪದಂತ ದಾನಿಗೊಂಡ, ಶ್ರೀಶೈಲ ಪಾಟೀಲ, ಮನೋಹರ ಶಿರೋಳ, ಕಾಮಣ್ಣ ಹೊನಕಾಂಡೆ, ಆನಂದ ಕಂಪಿ. ಸುರೇಶ ಅಕ್ಕಿವಾಟ, ಸಂಜಯ ತೆಗ್ಗಿ, ದುಂಡಪ್ಪ ಮಾಚಕನೂರ, ಬಾಬಾಗೌಡ ಪಾಟೀಲ, ಸುರೇಶ ರೇಣಕೆ, ರಾಮಣ್ಣ ಹುಲಕುಂದ, ಧರೆಪ್ಪ ಉಳ್ಳಾಗಡ್ಡಿ, ಮಹಾಂತೇಶ ಹಿಟ್ಟಿನಮಠ, ಮಲ್ಲಿಕಾರ್ಜುನ ಹುಲಗಬಾಳಿ, ಮಹಾಲಿಂಗಪ್ಪ ಕೋಳಿಗುಡ್ಡ, ಬಸವರಾಜ ತೆಗ್ಗಿ, ಸವಿತಾ ಹೊಸೂರ, ನಂದು ಗಾಯಕವಾಡ, ಶಂಕರೆಪ್ಪ ಭುಜರುಕ, ಮಹಾದೇವ ಚೋಳ್ಳಿ, ಹರ್ಷವರ್ಧನ ಪಟವರ್ಧನ, ರಾಜು ತೆಂಗಿನಕಾಯಿ, ಸಂಗೀತಾ ಖಾನಾಪುರ, ಮಹಾವೀರ ಭಿಲವಡಿ, ಧನಪಾಲ ಸವದಿ, ವೈಷ್ಣವಿ ಬಾಗೇವಾಡಿ, ಗೋವಿಂದ ಡಾಗಾ, ಇಸಾಕ್ ಸವದಿ, ವರ್ಧಮಾನ ಕೋರಿ ಸೇರಿದಂತೆ ಅನೇಕರಿದ್ದರು.
ಜಿ.ಎಸ್. ಗೊಂಬಿ ಸ್ವಾಗತಿಸಿದರು. ಶಂಕರ ಹುನ್ನೂರ ನಿರೂಪಿಸಿದರು. ರಾಜು ಬಾಣಕಾರ ವಂದಿಸಿದರು.

loading...