ಅರ್ಜೆಂಟೈನಾ ಗೆಲುವು, ಮರೊಡೊನಾ ಆರೋಗ್ಯದಲ್ಲಿ ಏರುಪೇರು

0
20
loading...

ರಷ್ಯಾ:- ಬುಧವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೈಜೀರಿಯಾ ವಿರುದ್ಧ ಅರ್ಜೆಂಟೈನಾ ದಾಖಲಿಸಿದ ಜಯದ ಗೋಲ್‌ನಿಂದ ತೀವ್ರ ಹರ್ಷಗೊಂಡ ಮಾಜಿ ಫುಟ್ಬಾಲ್ ಆಟಗಾರ ಡಿಗೊಮರೊಡೊನ ಮೈದಾನದಲ್ಲೆÃ ಅಸ್ವಸ್ಥರಾಗಿದ್ದಾರೆ.
ಅರ್ಜೆಂಟೈನಾ-ನೈಜೀರಿಯಾ ತಂಡಗಳ ನಡುವೆ ನಡೆಯುತ್ತಿದ್ದ ಸೆಣಸಾಟದಲ್ಲಿ ಅರ್ಜೆಂಟೈನಾ ತಂಡ ಟೂರ್ನಿಯಲ್ಲಿ ಉಳಿದುಕೊಳ್ಳಲು ಗೆಲುವು ಅನಿವಾರ್ಯವಾಗಿತ್ತು.
ಪಂದ್ಯ ಆರಂಭವಾದ ೮೬ನೇ ನಿಮಿಷಕ್ಕೆ ಅರ್ಜೆಂಟೈನಾ ಆಟಗಾರ ಮಾರ್ಕೊರೋಜೊ ಗೆಲುವಿನ ಗೋಲ್ ಬಾರಿಸಿದ್ದರು. ಈ ವೇಳೆ ಗಣ್ಯರ ವೀಕ್ಷಣಾ ಸ್ಥಳದಿಂದ ಪಂದ್ಯ ವೀಕ್ಷಿಸುತ್ತಿದ್ದ ಅರ್ಜೆಂಟೈನಾದ ಮಾಜಿ ಫುಟ್ಬಾಲ್ ಆಟಗಾರ ಡಿಗೊಮರೊಡೊನ ಅತಿಯಾಗಿ ಆವೇಶಕ್ಕೆ ಒಳಗಾದರು ಹಾಗೂ ಇದರಿಂದ ಸ್ಥಳದಲ್ಲೆÃ ಕುಸಿದಿದ್ದರು.
ಅಲ್ಲೆÃ ಲಭ್ಯವಿದ್ದ ಅರೆವೈದ್ಯಕೀಯ ಪಡೆ ಮರಡೊನ ಅವರಿಗೆ ಚಿಕಿತ್ಸೆ ನೀಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ೧೯೮೬ರ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಅರ್ಜೈಂಟೈನಾಗೆ ಗೆಲುವು ತಂದುಕೊಡುವಲ್ಲಿ ಮರಡೊನ ಪಾತ್ರ ಮರೆಯಲಾಗದು.

loading...