ಅಸಹಾಯಕರನ್ನು ಕಡೆಗಣಿಸಿದರೆ ಸಮ್ಮನಿರಲ್ಲ: ಶಾಸಕ ದಿನಕರ

0
11
loading...

ಕುಮಟಾ: ಬಡವರು ಹಾಗೂ ಅಸಹಾಯಕರನ್ನು ಕಡೆಗಣಿಸಿದರೆ ಸಮ್ಮನಿರಲ್ಲ ಎಂದು ನಾಡ ಕಚೇರಿಯ ಅಧಿಕಾರಿಗಳಿಗೆ ಶಾಸಕ ದಿನಕರ ಶೆಟ್ಟಿ ಎಚ್ಚರಿಕೆ ನೀಡಿ ದರು.
ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ ವ್ಯಾಪ್ತಿಯ ಬೈರವೇಶ್ವರ ಕೇರಿಯ ಸಾವೇರ ಬಾಬ್ಲಿ ರೊಡ್ರಿಗಿಸ್‌ ಅವರು ಗಾವಡಿ ಕೆಲಸ ಮಾಡುತ್ತಿರುವಾಗ ಆಯ ತಪ್ಪಿ ಬಿದ್ದು ಆಸ್ಪತ್ರೆಯಿಂದ ಡಿಸ್‌ಚಾರ್ಚ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಿರುವಾಗ ಗಾಯದ ಮೇಲೆ ಬರೆ ಎಳೆದಂತೆ ಅವರ ಮನೆಯ ಮೇಲೆ ಭಾರಿ ಬಿರುಗಾಳಿಗೆ ತೆಂಗಿನ ಮರ ಉರುಳಿ ಬಿದ್ದಿರುವುದರಿಂದ ಸಾವಿರಾರು ರೂ ಹಾನಿ ಸಂಭವಿಸಿದೆ. ಹೀಗಿರುವಾಗ ಕಾರ್ಯ ನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಕುಮಟಾರವರು ಸದ್ರಿ ಮನೆಯ ಹಾನಿ ಶೇ 14.50 ಎಂತ ಅರ್ಜಿಯನ್ನು ವಿಲೆಗೆ ತಂದಿದ್ದಾರೆ ಸರಕಾರದ ನಿಯಮಾವಳಿಗಳ ಪ್ರಕಾರ ಶೆ 15 ಕ್ಕಿಂತ ಕಡಿಮೆ ಹಾನಿಯಾದ ಮನೆಗಳಿಗೆ ಪರಿಹಾರ ನೀಡಲು ಅವಕಾಶ ಇಲ್ಲ. ಇದನ್ನು ಗಮನಿಸಿಯೆ ಮೇಲಿನಂತೆ ಎಚ್ಚರಿಕೆ ನೀಡಿದ ಶಾಸಕರು, ಮೌಲ್ಯ ಮಾಪನ ಮಾಡುವಾಗ ಅವರ ಪರಿಸ್ಥಿತಿಯನ್ನು ಅವಲೋಕಿಸಬೇಕು ಪೆನ್ನು ಇದೆ ಎಂದು ಹೇಳಿ ಬಡವರಿಗೆ ಸಿಗಬೇಕಾದ ಪರಿಹಾರಕ್ಕೆ ಕಡಿವಾಣ ಹಾಕಬಾರದೆಂದು ಖಡಕ ಆಗಿ ಸೂಚಿಸಿದರು. ಅಲ್ಲದೇ ಮನೆ ಕಟ್ಟುವಾಗ ಆಯಾ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಾದ ಸಾವೇರ ರೊಡ್ರಿಗಿಸ್‌ ರ ವೈಧ್ಯಕೀಯ ವೆಚ್ಚವನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ದೊರಕಿಸಿ ಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖ ಬಾಳಾ ಡಿಸೋಜಾ, ಗ್ರಾ.ಪಂ. ಗಣೇಶ ಅಂಬಿಗ, ದೀಪಕ ಭಟ್ಟ ವಿನಾಯಕ ದಿವಾಕರ ನಾಯ್ಕ ಸಂತೋಷ ಹರಿಕಾಂತ ಮುಂತಾದವರು ಉಪಸ್ಥಿತರಿದ್ದರು.

loading...