ಆಧ್ಯಾತ್ಮೀಕ ಬೆಳೆಸುವಲ್ಲಿ ಕ್ಷತ್ರೀಯ ಸಮಾಜ ಅಗತ್ಯ: ಭಾಂಡೆಗೆ

0
6
loading...

ಬಾಗಲಕೋಟೆ: ಸಮಾಜದಲ್ಲಿ ಸ್ಥಾಸ್ಯ ಬೆಳೆಸುವ ಜೊತೆಗೆ ಆಧ್ಯಾತ್ಮೀಕವಾಗಿ ಬೆಳೆಯಬೇಕಾದರೆ ಕ್ಷತ್ರೀಯ ಸಮಾಜ ಅಗತ್ಯವಿದೆ. ಇಂತಹ ಸಮಾಜದ ಇಂದು ಎಲ್ಲಾ ರಂಗದಲ್ಲಿಯೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಆಧ್ಯಾತ್ಮಕ ಪ್ರವಚನಕಾರ ಆಗಿರುವ ರಘುನಾಥಸಾ ಭಾಂಡೆಗೆ ತಿಳಿಸಿದ್ದಾರೆ.
ಅವರು ನಗರದ ಅಂಭಾಭವಾನಿ ದೇವಸ್ಥಾನದಲ್ಲಿ ಸೋಮವಂಸ ಸಹಸಾರ್ಜುನ ಕ್ಷತ್ರೀಯ ಸಮಾಜ ವತಿಯಿಂದ ಹಮ್ಮಿಕೊಂಡಿದ್ದ ಬಡ ಮಕ್ಕಳಿಗೆ ಪುಸ್ತಕ ವಿತರಣಾ ಸಮಾರಂಭದಲ್ಲಿ ಭಗವತ್ಗೀತಾ ಪುಸ್ತಕಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ,ಕ್ಷತ್ರೀಯ ಸಮಾಜ ಇತಿಹಾಸ ಹಿನ್ನಲೆ ಹೊಂದಿದೆ.ರಾಮಾಯಣ,ಮಹಾಭಾರತ ಕಾಲದಿಂದಲೂ ಛತ್ರಪತಿ ಶಿವಾಜಿ ಕಾಲದಿಂದಲೂ ಕ್ಷತ್ರೀಯ ಜನಾಂಗದವರು ತಮ್ಮದೇ ಆದ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ ಎಂದರು.

ಕ್ಷತ್ರೀಯ ಸಮಾಜದವರು ಆಗಿನ ಕಾಲದಲ್ಲಿ ಸಾಮಾಜ್ಯವನ್ನು ಕಟ್ಟುವಲ್ಲಿ ಯಾವುದೇ ಆಶೆ ಆಮಿಷೆಗಳಿಗೆ ಬಲಿಆಗದೆ ಹಾಗೂ ಯಾವ ಪ್ರಾತಿನಿತ್ಯಕ್ಕೂ ಆಶೆ ಪಡೆದು,ಸಾರ್ಥವನ್ನು ತ್ಯಜಿಸಿ,ಸಾಮಾಜ್ಯ ಕಟ್ಟುವಲ್ಲಿ ಹೋರಾಟ ಮಾಡುತ್ತಿದ್ದರು.ಈಗಲೂ ಸಹ ಸೋಮವಂಶ ಸಹಸಾರ್ಜುನ ಕ್ಷತ್ರೀಯ ಸಮಾಜದವರು ರಾಜಕೀಯವಾಗಿ,ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂಬ ಹಂಬಲ ಇಲ್ಲದೆ ಎಲ್ಲರಿಗೂ ಸಹಾಯ ಸಹಕಾರ ಮಾಡುತ್ತಾ,ಕೂಡುಗೈ ದಾನಿಗಳಾಗಿ ಬದುಕುತ್ತಾರೆ ಹೊರತು,ಸ್ವಾರ್ಥಕ್ಕಾಗಿ ಎಂದೂ ಜೀವನಸಾಗಿಲಿಲ್ಲ ಎಂದು ಹಿತವಚನ ನೀಡಿದ ಭಾಂಡೆಗೆ ಈಗ ಕಾಲ ಬದಲಾಗಿದೆ ಎಲ್ಲರೂ ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಮುಂದು ಬರಬೇಕಾಗಿದೆ.ಜನಪ್ರತಿನಿಧಿಗಳನ್ನು ಆರಿಸಿ ಕಳಿಸುವುಕ್ಕೆ ಪ್ರಮುಖ ಪಾತ್ರವಹಿಸಿದ್ದು,ಜಯ ಗಳಿಸಿರುವ ಶಾಸಕ ಹತ್ತಿರ ಹೋಗಿ ನಮ್ಮ ಸಮಾಜಕ್ಕೆ ಮೂಲಭೂತ ಹಕ್ಕುಗಳನ್ನು ಒದಗಿಸಿಕೊಡುವಂತೆ ಕೇಳಬೇಕಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಮಾಜದ ಬಡ ಮಕ್ಕಳಿಗೆ ಒಂದು ರಿಂದ ಪಿಯುಸಿ ಅಧ್ಯಾಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.
ವೇದಿಕೆ ಮೇಲೆ ಸಮಾಜದ ಉಪಾಧ್ಯಕ್ಷ ಎಂ.ಎಂ.ಪಾಟೀಲ್, ಕಾರ್ಯದರ್ಶಿ ರಘುನಾಥಸಾ ಧೋಂಗಡೆ, ತರುಣ ಸಂಘದ ಅಧ್ಯಕ್ಷ ಜಗದೀಶ ಪವಾರ, ಗಜಾನನ ಉತ್ಸವ ಸಮಿತಿ ಅಧ್ಯಕ್ಷ ಹನಮಂತ ನಿರಂಜನ ಸಹಸಾರ್ಜುನ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ವಿಜಯ ದಾನಿ, ಮಹಿಳಾ ಘಟಕದ ಕಾರ್ಯದರ್ಶಿ ಸುವರ್ಣ ದಾನಿ, ಸೇರಿದಂತೆ, ಶರತ್ ಕಲಬುರ್ಗಿ, ಮೋತಿಲಾಲಸಾ ಕಠಾರೆ, ಸಿದ್ದರಾಮಸಾ ದಾನಿ, ಗಂಗಾಧರಸಾ ಕಾಟವಾ ಸೇರಿದಂತೆ ಸಮಾಜದ ಬಂದು ಬಳಗದವರು ಉಪಸ್ಥಿತಿರಿದ್ದರು.

loading...