ಆರೋಗ್ಯ ಸೇವಾ ಸುಧಾರಣೆ ಯೋಜನೆ ಮುಂದುವರಿಕೆ : ವರದಿ ಸಲ್ಲಿಸಲು ಸೂಚನೆ

0
17
loading...

ವಿಜಯಪುರ: ವಿಶ್ವಬ್ಯಾಂಕ್ ನೆರವಿನ ಆರೋಗ್ಯ ಸೇವಾ ಸುಧಾರಣೆ ಯೋಜನೆ(ಕೆ.ಹೆಚ್.ಎಸ್.ಡಿ.ಪಿ) ಕರ್ನಾಟಕದಲ್ಲಿ ಅಂತಿಮಗೊಂಡಿದ್ದು, ಈ ಯೋಜನೆ ಮುಂದುವರೆಸುವ ಕುರಿತಂತೆ ವರದಿ ಸಲ್ಲಿಸಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರದಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಿಶ್ವ ಬ್ಯಾಂಕ್ ನೆರವಿನ ಆರೋಗ್ಯ ಸುಧಾರಣೆ ಯೋಜನೆಯು ಕರ್ನಾಟಕ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಮುಂದುವರೆದಿರುವ ಬಗ್ಗೆ ಮಾಹಿತಿ ಇದ್ದು, ಈ ಯೋಜನೆ ಕರ್ನಾಟಕದಲ್ಲಿಯೂ ಮುಂದುವರೆಸುವ ಬಗ್ಗೆ ಸಂಪೂರ್ಣ ವಿವರವನ್ನೊಳಗೊಂಡ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂಗಾರು ಆಗಮಿಸಿರುವ ಹಿನ್ನೆಲೆಯಲ್ಲಿ ಚಿಕನ್ ಗುನ್ಯ, ಡೆಂಗ್ಯೂ ಇತ್ಯಾದಿ ಸಾಂಕ್ರಮಿಕ ರೋಗಗಳ ತಡೆಗಟ್ಟುವಿಕೆಯ ಬಗ್ಗೆ ವ್ಯಾಪಕ ಪ್ರಚಾರ ನೀಡುವುದು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಿಕೆಗೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.

ನಿಫಾ ವೈರಸ್ ಹರಡುವಿಕೆಯ ವಿಧಾನದ ಬಗ್ಗೆ ಹಾಗೂ ಸಾರ್ವಜನಿಕರಲ್ಲಿ ಮೂಡಿರುವ ಆತಂಕವನ್ನು ನಿವಾರಿಸುವ ಬಗ್ಗೆ ಸೂಕ್ತ ತಿಳುವಳಿಕೆ ಹಾಗೂ ಪ್ರಚಾರ ಕೈಗೊಳ್ಳಬೇಕು. ತಜ್ಞರು ಈ ಬಗ್ಗೆ ಪರಿಶೀಲಿಸಿ, ನಿಫಾ ವೈರಸ್ ಹರಡುವ ವಿಧಾನ, ಕರ್ನಾಟಕದಲ್ಲಿ ಈವರೆಗಿನ ಈ ವೈರಸ್ ಪೀಡಿತ ರೋಗಿಗಳಿದ್ದಲ್ಲಿ ಅವುಗಳ ವಿವರ, ವೈರಸ್ ತಡೆಗಟ್ಟುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕು. ವಿಶೇಷವಾಗಿ ಮಾವಿನ ಹಣ್ಣು ಹಾಗೂ ಇತ್ಯಾದಿ ಹಣ್ಣುಗಳನ್ನು ಉಪಯೋಗಿಸುವುದರಿಂದ ನಿಫಾ ವೈರಸ್ ಉಂಟಾಗುತ್ತಿದೆ ಎಂಬ ಅನಗತ್ಯ ಗೊಂದಲ ನಿವಾರಣೆ, ಕುರಿತು ಎರಡು ದಿನಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಯ ಬಗ್ಗೆ ಪ್ರತಿ ವಾರ ಸಂಕ್ಷಿಪ್ತವಾದ ವರದಿಯನ್ನು ನೀಡಲು ಸೂಚಿಸಿದ ಅವರು, ಡಿ.ಹೆಚ್.ಓ. ಗಳ ಜಾಬ್ ಚಾರ್ಟ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ವರದಿ ನೀಡಬೇಕು. ಕೆ.ಪಿ.ಎಂ.ಇ ಆಕ್ಟ್‍ನÀ ಪ್ರಸ್ತುತ ಹಂತದ ವಿವರವನ್ನು ಸಲ್ಲಿಸಬೇಕು. ಔಷಧ ನಿಯಂತ್ರಣ ಇಲಾಖೆಗೆ ಸಂಬಂಧಿಸಿದಂತೆ ಲ್ಯಾಬೋರೇಟರಿಗಳನ್ನು ಬಲಪಡಿಸುವ ಬಗ್ಗೆ, ಔಷಧ ನಿರೀಕ್ಷಕರು ನಡೆಸುವ ತಪಾಸಣೆ ವಿಧಾನದ ಬಗ್ಗೆ, ‘ಸಕಾಲ’ ಯೋಜನೆಯಡಿ ಲೈಸನ್ಸ್ ನವೀಕಕರಣದ ಬಗ್ಗೆ ಹಾಗೂ ಫಾರ್ಮಸಿ ಕೌನ್ಸಿಲ್ ಕಾರ್ಯವ್ಯಾಪ್ತಿಯ ಬಗ್ಗೆ ವರದಿ ನೀಡಲು ಸೂಚಿಸಿದರು. ಯಶಸ್ವಿನಿ ಯೋಜನೆಯ ಮುಂದುವರೆಸುವ ಬಗ್ಗೆ, ಫಲಾನುಭವಿಗಳಿಂದ ಸ್ವಇಚ್ಛಾ ವಂತಿಗೆ ಸಲ್ಲಿಸುವ ಬಗ್ಗೆ, ಸವರ್ಣ ಆರೋಗ್ಯ ಯೋಜನೆ ಬಗ್ಗೆ, ಜಿಲ್ಲಾಧಿಕಾರಿಗಳ ಮುಖಾಂತರ ಈ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ವರದಿ ನೀಡುವಂತೆ ಸೂಚಿಸಿದರು. ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳು, ಜಿಲ್ಲಾ ಹಾಗೂ ಮತ್ತು ತಾಲ್ಲೂಕು ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಜೊತೆಗೆ ಸೂಕ್ತ ಜಾಗೃತಿ ಮೂಡಿಸಬೇಕು. ಎನ್.ಜಿ.ಓ.ಗಳ ಸಹಯೋಗದೊಂದಿಗೆ ರೋಗಪೀಡಿತ ಮಕ್ಕಳಿಗೆ ಸಂರಕ್ಷಣ ಒದಗಿಸುವ ಬಗ್ಗೆ ವಿವರವಾದ ವರದಿಯನ್ನು ನೀಡಲು ಸೂಚಿಸಲಾಯಿತು. ಸ್ಟೇಟ್ ಬ್ಲಡ್ ಟ್ರಾನ್ಸ್‍ಫ್ಯೂಸಿಯನ್, ಕೌನ್ಸಿಲ್ ಕಾರ್ಯವೈಖರಿ, ಬ್ಲಡ್ ಸೇಫ್ಟಿ ಆಫಿಸರ್ಸ್‍ಗಳ ಜಾಬ್ ಚಾರ್ಟ್ ಮತ್ತು ಕಾರ್ಯಕ್ಷಮತೆ ವರದಿ ಸಲ್ಲಿಸಬೇಕು. ರಾಜ್ಯದ ಹಿಂದುಳಿದ ಭಾಗಗಳಲ್ಲಿ ರೋಗಿಗಳಿಗೆ ಅಗತ್ಯವಾದ ರಕ್ತದ ಕೊರತೆಯಿದ್ದು, ಕಾಲೇಜು ಹಾಗೂ ಇತರೆ ಸಂಸ್ಥೆಗಳಲ್ಲಿ ರಕ್ತದಾನದ ಬಗ್ಗೆ ಪ್ರಚಾರ ನೀಡಿ, ಹೆಚ್ಚಿನ ರೀತಿಯಲ್ಲಿ ರಕ್ತದಾನ ಮಾಡಿಸುವ ಬಗ್ಗೆ ಕ್ರಮಕೈಗೊಳ್ಳಬೇಕು. ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯ ದಿನಾಚರಣೆಯ ಸಂದರ್ಭದಲ್ಲಿ ರಕ್ತ ದಾನಿಗಳಿಗೆ ಪ್ರೋತ್ಸಾಹ ನೀಡಲು ಮೆಡಲ್ಸ್ ಮತ್ತು ಪ್ರಮಾಣಪತ್ರ ಪ್ರದಾನ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು. ಮುಂಬರುವ ಸ್ವತಂತ್ರ ದಿನಾಚರಣೆಯಿಂದಲೇ ಈ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿದರು. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕೈಗೊಂಡಿರುವ ವಿವಿಧ ಅಧಿಕಾರಿ/ಸಿಬ್ಬಂದಿಗಳ ನೇಮಕಾತಿಯ ಬಗ್ಗೆ ಸಂಪೂರ್ಣ ವಿವರವನ್ನು ಒದಗಿಸಬೇಕು. 2018ನೇ ಸಾಲಿನ ಆಯವ್ಯಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಘೋಷಿಸಲಾದ ಕಾರ್ಯಕ್ರಮಗಳ ಅನುಷ್ಠಾನ ಬಗ್ಗೆ ವಿವರ ಒದಗಿಸಲು ಸೂಚಿಸಿದರು. ಸಭೆಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...