ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೈಗಾರಿಕೆ ಸ್ಥಾಪನೆ: ಬೊಮ್ಮಾಯಿ

0
18
loading...

ಬಂಕಾಪುರ: ಈ ಬಾರಿ ಈ ಕ್ಷೇತ್ರದ ಸಾರ್ವಜನಿಕರ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಕೈಗಾರಿಕೊದ್ಯಮವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಪಟ್ಟಣದ ಸುಂಕದಕೇರಿಯ ಕನಕ ಸಬಾ ಭವನದಲ್ಲಿ ಕುರುಬ ಸಮುದಾಯದವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಗೆ ಮೂಲಭೂತ ಸೌಲಭ್ಯದ ಜೋತೆಗೆ ವ್ಯಾಪಕ ಯೋಜನೆಗಳನ್ನು ರೂಪಿಸಲಾಗಿದೆ. ರೈತರ ಆಧಾಯವನ್ನು ಹೆಚ್ಚಿಸಲು ಉಪ ಕಸಬುಗಳ ಮೂಖಾಂತರ ಉತ್ಪಾದನೆಯನ್ನು ಹೆಚ್ಚಿಸುವಂತಹ ವಿನೂತನವಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇದಲ್ಲದೆ ಕ್ಷೇತ್ರದ ಅಂತರಜಲ ಹೆಚ್ಚಿಸಲು ಕೆರೆ ಕಟ್ಟೆಗಳನ್ನು ತುಂಬಿಸುವ ಕಾರ್ಯಕ್ಕೆ ಇಗಾಗಲೇ ಚಾಲನೆ ದೊರೆತಿದೆ. ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ, ಕೌಶಲ್ಯ ತರಬೇತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಡಿಸಿ ಅವರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಠಿ ಮಾಡುವುದರ ಜೋತೆಗೆ ಮಹಿಳೆಯರಿಗೆ ಉದ್ಯೋಗವಕಾಶ, ಕೈಗಾರಿಕಾ ವಲಯಗಳ ಸ್ಥಾಪನೆ ಸೇರಿದಂತೆ ಹತ್ತು ಹಲವಾರು ಯೋಜನೆಗಳಿಂದ ಕ್ಷೇತ್ರದ ಜನರ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಪ್ರಯತ್ನಿಸುವದಾಗಿ ಹೇಳಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಮತ್ತೂರ, ರಾಮಣ್ಣ ರಾಣೋಜಿ, ಶಿವಾನಂದ ರಾಮಗೇರಿ ಮಾತನಾಡಿದರು. ಮುಖಂಡರಾದ ಮಹಬಳೇಶ ಹೊನಕೇರಿ, ಯಲ್ಲಪ್ಪ ನರಗುಂದ, ವಿಶ್ವನಾಥ ಹರವಿ, ಗುರುಸ್ವಾಮಿ ಕೆಂಡದಮಠ, ಮಾಲತೇಶ ರಾಣೋಜಿ, ಬಸವರಾಜ ನಾರಾಯಣಪುರ, ಹೊನ್ನಪ್ಪ ಹೂಗಾರ, ರಾಘವೇಂದ್ರ ಮೇಲಗಿರಿ, ರಾಮಕೃಷ್ಣ ಆಲದಕಟ್ಟಿ, ಮಣಿಕಂಠ ರಾಣೋಜಿ, ಪಾಲಾಕ್ಷಪ್ಪ ಹಾವಣಗಿ ಸೇರಿದಂತೆ ಕುರುಬ ಸಮಾಜ ಮುಖಂಡರು ಉಪಸ್ಥಿತರಿದ್ದರು. ಜಿ.ಎಸ್.ದೇಸಾಯಿ ನಿರೂಪಿಸಿದರು.

loading...