ಇನ್ನರ್‍ವ್ಹೀಲ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

0
14
loading...

ಕನ್ನಡಮ್ಮ ಸುದ್ದಿ-ಶಿರಸಿ: ಇತ್ತೀಚೆಗೆ ಕೊಲ್ಲಾಪುರದಲ್ಲಿ ಜರುಗಿದ ಇನ್ನರ್‍ವ್ಹೀಲ್ ಜಿಲ್ಲೆ 317ರ 45ನೇ ಸಮಾವೇಶದಲ್ಲಿ ಶಿರಸಿ ಇನ್ನರ್‍ವ್ಹೀಲ್ ಕ್ಲಬ್ಬಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಲಾಯಿತು.
ಇನ್ಹರ್‍ವೀಲ್ ಕ್ಲಬ್ ಅಧ್ಯಕ್ಷೆ ಮಧುಮತಿ ಹೆಗಡೆ, ಕಾರ್ಯದರ್ಶಿ ಪ್ರತಿಮಾ ಸ್ವಾದಿ, ಖಜಾಂಚಿ ಶ್ವೇತಾ ಪ್ರಭು, ಐ.ಎಸ್.ಓ. ದೀಕ್ಷಿತಾ ಭಟ್ಟ, ಬುಲೆಟಿನ್ ಸಂಪಾದಕಿ ಡಾ. ಅರ್ಪಣಾ ಹೆಗಡೆ ಮತ್ತು ಸಾಕ್ಷರತಾ ಸಂಚಾಲಕಿ ಆಶಾ ಹೆಗಡೆ ಅವರಿಗೆ ವೈಯಕ್ತಿಕ ಪುರಸ್ಕಾರ ನೀಡಲಾಯಿತು. ಹಾಗೆಯೇ ಜಿಲ್ಲಾ ಮಟ್ಟದ ಹ್ಯಾಪಿಸ್ಕೂಲ್ ಸ್ಟಾರ್ ಕ್ಲಬ್ ಪ್ರಶಸ್ತಿ ಮತ್ತು ರಾಷ್ಟ್ರ ನಿರ್ಮಾಣ ಪ್ರಶಸ್ತಿಗಳು ಕ್ಲಬ್ಬಿಗೆ ಪ್ರಾಪ್ತವಾಯಿತು. ಈ ಪ್ರಶಸ್ತಿ ಪುರಸ್ಕಾರಗಳನ್ನು ಪ್ರದಾನ ಮಾಡಿದ ಜಿಲ್ಲಾಧ್ಯಕ್ಷೆ ಉಷಾ ಗೌಡರ್ ಶಿರಸಿ ಇನ್ನರ್‍ವ್ಹೀಲ್ ಕ್ಲಬ್‍ನ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಈ ಎಲ್ಲಾ ಸಾಧನೆ ಕ್ಲಬ್ಬಿನ ಸದಸ್ಯರೆಲ್ಲರ ಪ್ರೀತಿಪೂರ್ವಕ ಸಹಕಾರದಿಂದ ಸಾಧ್ಯವಾಗಿದ್ದು ಇದರ ಶ್ರೇಯಸ್ಸು ಎಲ್ಲರಿಗೂ ಸಲ್ಲುವುದಾಗಿ ಮಧುಮತಿ ಉಮಾಪತಿ ಹೆಗಡೆ ತಿಳಿಸಿದರು.

loading...