ಇನ್ನು ಮುಂದೆ ನಿಗದಿತ ವೇಳೆಯಲ್ಲಿ ಕೆಲಸ ಮುಗಿಸಿ : ಲಕ್ಷ್ಮಿ ಹೆಬ್ಬಾಳಕರ

0
56
loading...

ಬುಧುವಾರದಂದು ಹಳೆಯ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅಭಿವದ್ಧಿ ಕೆಲಸಗಳು ಯಾವ ಹಂತದಲ್ಲಿ ಇವೆ, ಈಗಾಗಲೇ ಮುಗಿಯಬೇಕಾದ ಕೆಲಸಗಳು ಯಾಕೆ ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ನಾನು ಜನರಿಗೆ ಹಲವು ಅಶ್ವಾಸನೆಗಳನ್ನು ನೀಡಿ ಶಾಸಕಿ ಆಗಿ ಆಯ್ಕೆ ಆಗಿದ್ದೇನೆ ಆದರಿಂದ ನಾವು ಆ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿ ತೋರಿಸಬೇಕು ಎಂದರು.ಮೊದಲಿನ ಹಾಗೆ ಕೆಲಸ ಮಾಡಿದರೆ ನಡೆಯಲ್ಲ ಇನ್ನು ಮುಂದೆ ನಿಮ್ಮ ಕೆಲಸ ಸರಿಯಾಗಿ ಮುಗಿಸಿ ಜನರ ಸಮಸ್ಸೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿ ಮುಗಿಸಿ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಸೂಚನೆ ನೀಡಿದರು.ಇನ್ನು ನಿಮಗೆ ಏನಾದರು ತೊಂದರೆ ಇದ್ದರೆ ಹೇಳಿ ಅದನ್ನು ಮೊದಲು ಪೂರ್ತಿಗೊಳಿಸೋಣ ಎಂದು ಅಧಿಕಾರಿಗಳಿಗೆ ಅಭಯ ನೀಡಿದರು

loading...