ಈರುಳ್ಳಿ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರ ಪ್ರತಿಭಟನೆ

0
20
loading...

ಬಸವನಬಾಗೇವಾಡಿ: ರಾಜ್ಯದಲ್ಲಿ ರೈತರು ಸಾಕಷ್ಟು ಈರುಳ್ಳಿ ಬೆಳೆ ಬೆಳೆದು ರೈತರ ಶ್ರಮಕ್ಕೆ ತಕ್ಕಂತೆ ಬೆಂಬಲ ಬೆಲೆ ಇಲ್ಲದೆ ಈರುಳ್ಳಿ ಬೆಳೆದ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಆಗ್ರಹಿಸಿ ಶನಿವಾರ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಈರಳ್ಳಿಯನ್ನು ಕಚೇರಿಯ ಮುಂದೆ ಸುರಿದು ಪ್ರತಿಭಟನೆ ನಡೆಸಿ ತಹಶೀಲ್ದಾರ ಎಸ್.ಎಸ್. ಸಂಪಗಾವಿ ಅವರಿಗೆ ಮನವಿ ಸಲ್ಲಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ರೈತರು ಯಾವುದೇ ಬೆಳೆ ಬೆಳೆದರು ಕಟಾವು ಅಥವಾ ರಾಶಿ ಮಾಡಿದ ನಂತರ ಇನ್ನೇನು ಮಾರುಕಟ್ಟೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಬೆಲೆಗಳು ಸಂಪೂರ್ಣ ಕುಸಿದು ಬಿಡುತ್ತವೆ ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ, ರೈತರು ಯಾವುದೇ ಬೆಳೆ ಬೆಳೆಯ ಬೇಕಾದರೆ ಅದರ ಹಿನ್ನಲೆ ಎಲ್ಲ ರೀತಿಯ ಖರ್ಚು ವೆಚ್ಚಗಳು ಎಷ್ಟು ತಗಲುತ್ತವೆ ಎಂಬುದನ್ನು ಗಣನೆÉಗೆ ತೆಗೆದುಕೊಂಡು ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ರೈತರು ಯಾವುದೇ ಬೆಳೆ ಬೆಳೆಯುವ ಸಂದರ್ಭದಲ್ಲಿ ಬೆಲೆ ಗಗನಕ್ಕೆ ಏರುತ್ತದೆ ಅದೇ ರೈತರು ಕಟಾವು ಮಾಡಿ ಅಥವಾ ರಾಶಿ ಮಾಡಿದ ನಂತರ ಮಾರಾಟಕ್ಕೆ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ದೀಢಿರನೆ ಬೆಲೆ ಕುಸಿತಗೊಂಡು ರೈತರಿಗೆ ಆಘಾತವನ್ನುಂಟು ಮಾಡುತ್ತದೆ ಸಧ್ಯ ಈರಳ್ಳಿ ಬೆಲೆ ಪ್ರತಿ ಕ್ವಿಂಟಾಲಿಗೆ 600 ರೂಳಿಂದ 700 ರೂಗಳ ವರೆಗೆ ಇದ್ದು ಸ್ವಲ್ಪ ಉತ್ತಮ ಈರುಳ್ಳಿಗೆ 800 ರೂ ಗಳ ಬೆಂಬಲ ಬೆಲೆ ಸಿಗುತ್ತದೆ ಇಷ್ಟೊಂದು ಅಗ್ಗದ ದರದಲ್ಲಿ ಖರೀದಿಸಿದರೆ ಈರುಳ್ಳಿ ಬೆಳೆದ ರೈತರು ಎಲ್ಲ ಖಚ್ಚು ವೆಚ್ಚಗಳನ್ನು ತೆಗೆದು ಕೊನೆಗೆ ಮಾರುಕಟ್ಟೆಗೆ ತಂದು ಮಾರಾಟ ಮಾಡಿದರೆ ವಾಹನದ ಬಾಡಿಗೆ ಹಣ ಕೈಯಿಂದಲೆ ಕೊಟ್ಟು ಬರಿಗೈಯಿಂದ ಮನೆಗೆ ಹಿಂದಿರುಗುವಂತಾಗುತ್ತದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ತಾಲೂಕ ಉಪಾzsಕ್ಷ ಸಿದ್ದರಾಮ ಅಂಗಡಗೇರಿ, ಡಾ| ಎಂ ರಾಮಚಂದ್ರ ಬೊಮ್ಮನಜೋಗಿ, ಈರಣ್ಣ ದೇವರಗುಡಿ, ಸುಭಾಸ ಬಿಸಿರೊಟ್ಟಿ, ಕೃಷ್ಣಪ್ಪ ಬೊಮ್ಮರಡ್ಡಿ, ಅರ್ಜುನ ಹಾವಗೊಂಡ, ಅಂದಾನೆಪ್ಪ ಬಿರಾದಾರ, ಬಸಯ್ಯ ಮಠ, ವಿಶ್ವೇಶ್ವರಯ್ಯ ಮಠ, ಶಿವಯ್ಯ ಗದ್ದಗಿಮಠ, ಮೈಬೂಬಸಾಬ ಅವಟಿ, ಹೊನ್ನಕೆರಪ್ಪ ತೆಲಗಿ, ಶಿವಪ್ಪ ತಂಗಡಗಿ, ಮಾಚಪ್ಪ ಹೊರ್ತಿ, ಭೀಮಪ್ಪ ಬಡಿಗೇರ, ಅಪ್ಪಾಸಾಹೇಬ ಜಾಯಗೊಂಡ, ಗದಿಗೆಪ್ಪ ಕುಂಬಾರ ಸೇರಿದಂತೆ ಮುಂತಾದವರು ಇದ್ದರು.

loading...