ಉಚಿತ ಬಸ್ ಪಾಸ್ ನೀಡುವಂತೆ ಎಬಿವಿಪಿ ಒತ್ತಾಯ

0
52
loading...

ಉಚಿತ ಬಸ್ ಪಾಸ್ ನೀಡುವಂತೆ ಎಬಿವಿಪಿ ಒತ್ತಾಯ

ಕನ್ನಡಮ್ಮ ಸುದ್ದಿ-ಬೆಳಗಾವಿ:ಕಳೆದ ಶೈಕ್ಷಣಿಕ ವರುಷದಲ್ಲಿ ಹಿಂದಿನ ಸಿದ್ದರಾಮಯ್ಯ ಸರಕಾರ ಎಲ್ಲ ವರ್ಗದ ವಿಧ್ಯಾರ್ಥಿಗಳಿಗೆ ಉಚಿತವಾಗಿ ಬಸ್ ನೀಡುತ್ತೆವೆ ಎಂದು ಘೋಷಿಸಿತು. ಅದರಂತೆ ಎಲ್ಲ ವಿಧ್ಯಾರ್ಥಿಗಳಿಗೆ ಈಗಿನ ಕುಮಾರಸ್ವಾಮಿ ಸರಕಾರ ವಿಧ್ಯಾರ್ಥಿಗಳಿಗೆ ಉಚಿತ ಬಸ ಪಾಸ ಕೂಡಲೆ ನೀಡಬೇಕೆಂದು ಅಖಿಲ ಭಾರತ ವಿಧ್ಯಾರ್ಥಿ ಪರಿಷತ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಚುನಾಯಿತ ಶಾಸಕರುಗಳಿಗೆ ಮನವಿ ಸಲ್ಲಿಸಿತು.
ಗುರುವಾರ ನಗರದ ನೂರಾರು ಕಾಲೇಜು ವಿಧ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಎಲ್ಲ ವರ್ಗದ ವಿಧ್ಯಾರ್ಥಿಗಳಿಗೆ ಬಸ್ ನೀಡುವಂತೆ ಒತ್ತಾಯಿಸಿತು.  ಸ್ಥಳಕ್ಕೆ ಆಗಮಿಸಿದ ಉತ್ತರ ಶಾಸಕ ಅನಿಲ ಬೆನಕೆ ಮತ್ತು ದಕ್ಷಿಣ ಶಾಸಕ ಅಭಯ ಪಾಟೀಲ ವಿಧ್ಯಾರ್ಥಿಗಳ ಮನವಿ ಸ್ವಿಕರಿಸಿ ತಮ್ಮ ಹೋರಾಟಕ್ಕೆ ಬೆಂಬಲವಿದೆ ಕೂಡಲೆ ರಾಜ್ಯ ಸರಕಾರ ಎಲ್ಲ ವರ್ಗದ ವಿಧ್ಯಾರ್ಥಿಗಳಿಗೆ ಉಚಿತ ಬಸ್ ನೀಡಬೇಕು ಎಂದರು.

ಈ ಸಂಧರ್ಭದಲ್ಲಿ ಎಬಿವಿಪಿ ಮುಖಂಡರುಗಳು ಸಚಿನ್ ಹಿರೇಮಠ,ರೋಹಿತ ಉಮನಾಬಾದಿಮಠ,ಭೀಮಸೆನ್ ಪಪ್ಪು ಇದ್ದರು.

loading...