ಉಚಿತ ಬಸ್ ಪಾಸ್ ನೀಡುವಂತೆ ಪ್ರತಿಭಟನೆ

0
14
loading...

ಹುನಗುಂದ-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶೈಕ್ಷಣಿಕ ಪಾಸನ್ನು ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದ ಕೊನೆಯ ಬಜೆಟ್‍ನಲ್ಲಿ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಘೋಷಿಸಿದ್ದನ್ನು ಇಂದಿನ ಸಿ.ಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡದರೇ ಸರ್ಕಾರಕ್ಕೆ ಹೊರೆಯಾಗುವುದು ಎಂದು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದ್ದನ್ನು ನಿಲ್ಲಿಸಿರುವುದು ಖಂಡಿನೀಯ ಶೀಘ್ರವೇ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.
ಇಲ್ಲಿನ ಸರಕಾರಿ ಪಿಯು ಕಾಲೇಜದಿಂದ ಮಹಾಂತ ವೃತ್ತ, ಎಬಿವಿಪಿ ಪ್ರತಿಭಟನಾ ರ್ಯಾಲಿಯು ಬಸ್ ನಿಲ್ದಾಣ ಮಾರ್ಗವಾಗಿ ತಾಲೂಕ ತಹಶೀಲ್ದಾರ ಕಚೇರಿ ಮುಂದೆ ಪ್ರತಿಭಟಿಸುತ್ತ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿಜಯ ಗೌಡರ ಮಾತನಾಡಿ ಕಳೆದ ಸರಕಾರದಲ್ಲಿ ಸಿಎಂ ಸಿದ್ದರಾಮಯ್ಯನವರು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಶೈಕ್ಷಣಿಕ ಹಿತದೃಷ್ಟಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು. ನೂತನ ಸಿಎಂ ಎಚ್.ಡಿ. ಕುಮಾಸ್ವಾಮಿ ಸರಕಾರಕ್ಕೆ ಹೊರೆ ಎಂದು ಬಸ್ ಪಾಸ್ ನೀಡುವದನ್ನು ತಡೆದಿರುವದು ಖಂಡನೀಯ.

ಅದು ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ನೀಡುವುದರಲ್ಲಿ ವಿಳಂಬ ಮಾಡಿತ್ತಿದ್ದು.ಇದರಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಿ ತಿಂಗಳ ಕಳೆಯುತ್ತಾ ಬಂದರೂ ವಿದ್ಯಾರ್ಥಿಗಳು ಮಾತ್ರ ಪಾಸ್ ಸಿಗದೇ ಕ್ಲಾಸ್‍ಗೆ ಬರಲು ತೊಂದರೆಯಾಗುತ್ತಿದ್ದು.ಕೆಲ ವಿದ್ಯಾರ್ಥಿಗಳು ಪ್ರಯಾಣ ದರವನ್ನು ನೀಡಿ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ.ಇನ್ನು ಕೆಲವು ಬಡ ವಿದ್ಯಾರ್ಥಿಗಳು ಹಣ ಕೊಟ್ಟು ಬರಲು ಸಾಧ್ಯವಾಗದೇಮನೆಯಲ್ಲಿ ಕುಳಿತುಕೊಳ್ಳುವ ಪರಸ್ಥಿತಿ ನಿರ್ಮಾಣವಾಗಿದೆ.ತಕ್ಷಣ ಸರ್ಕಾರ ವಿದ್ಯಾರ್ಥಿಗಳ ಸಮಸ್ಯೆಯನ್ನು ಅರ್ಥೈಸಿಕೊಂಡು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಕ್ರಮ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದರು.
ವಿದ್ಯಾರ್ಥಿ ಪರಿಷತ್ ಮುಖಂಡ ಸೋಮು ಪಾಟೀಲ ಮಾತನಾಡಿ ಎಷ್ಟೋ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದು.ಸರ್ಕಾರ ನೀಡುವ ಉಚಿತ ಪಾಸ್‍ನ್ನೇ ಅವಲಂಬಿಸಿದ್ದು ಅದಕ್ಕೆ ಸರ್ಕಾರ ತಕ್ಷಣ ಎಬಿವಿಪಿಯ ಈ ಬೇಡಿಕೆಯನ್ನು ಇಡೇರಿಸಬೇಕೆಂದು ಅವರು ಒತ್ತಾಯಿಸಿದರು. ಸಿದ್ದು ಹಿರೇಮಠ, ರವಿ ನಾಯಕ, ಕಿರಣ್ ಗೌಡರ್, ವಿಘ್ನೇಶ ಉಡುಪಿ ಸೇರಿದಂತೆ ಕಾಲೇಜ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

loading...