ಉಸಿರು ಇರುವವರೆಗೆ ಜನರ ಸೇವೆ ಮಾಡುವೆ: ಮುರುಗೇಶ ನಿರಾಣಿ

0
20
loading...

ಬೀಳಗಿ: ಬೀಳಗಿ ವಿಧಾನಸಭಾ ಮತಕ್ಷೇತ್ರದ 85 ಸಾವಿರ ಮತದಾರರು ನನಗೆ ಮತ ನೀಡಿ ಶಾಸಕನಾಗಿ ಆಯ್ಕೆ ಮಾಡಿದ್ದು ನನ್ನ ಕೊನೆಯುಸಿರು ಇರುವವರಗೆ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರಳು ಶ್ರಮಿಸಿ ಜನರ ಋಣ ಮುಟ್ಟಿಸಲು ಪ್ರಯತ್ನಸುತ್ತೆನೆ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದಿಂದ ಏರ್ಪಡಿಸಿದ ಪಕ್ಷದ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ತಾಲೂಕಾ ಬಿ.ಜೆ.ಪಿ ಘಟಕ ಹಾಗೂ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬೀಳಗಿ ಕ್ಷೇತ್ರದ ಜನರು ನನ್ನನ್ನು ಮೂರು ಭಾರಿ ಶಾಸಕನಾಗಿ ಹಾಗೂ ಸಚಿವನಾಗಿ ಆಯ್ಕೆ ಮಾಡಿದ್ದು ಈ ಕ್ಷೇತ್ರದ ಅಭಿವೃದ್ಧಿ ಜೊತೆ ಸಾರ್ವಜನಿಕರ ಸೇವೆ ಮಾಡಲು ಪಕ್ಷದ ಕಾರ್ಯಕರ್ತರು ಹಗಲಿರಳು ಗೆಲವಿಗಾಗಿ ಶ್ರಮಿಸಿದ್ದು ನಿಮ್ಮ ಸೇವೆಗೆ ಸದಾ ಬದ್ದನಾಗಿದ್ದು, ಹಿಂದಿನ ಸರಕಾರದಲ್ಲಿ ಬಿ.ಎಸ್.ಯಡಿಯೂರಪ್ಪನವರು ಬ್ರಹತ್ ಹಾಗೂ ಮದ್ಯಮ ಕೈಗಾರಿಕಾ ಸಚಿವನಾಗಿ ಮಾಡಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಮಾಡಿ ಉದ್ಯೋಗ ಸೃಷ್ಟಿಸಿ ನಾಡಿನ ಸೇವೆ ಅವಕಾಶವನ್ನು ಒದಗಿಸಿ ನಮ್ಮ ಬೀಳಗಿ ಕ್ಷೇತ್ರದ ಹೆಸರನ್ನು ತರಲು ಪ್ರಾಮಾಣಿಕ ಸೇವೆ ಮಾಡಿದ್ದೆನೆ ಎಂದರು.
ಮಾಜಿ ಶಾಸಕ ಪಿ. ಎಚ್.ಪೂಜಾರ ಮಾತನಾಡಿ ಮುರುಗೇಶ ನಿರಾಣಿರವರು ಪ್ರತಿಯೊಬ್ಬರ ಕಷ್ಟ ಸುಖ:ಗಳಲ್ಲಿ ಭಾಗಿಯಾಗಿ ಸರ್ವ ಜನಾಂಗ ನೆಮ್ಮದಿಯಾಗಿರುವಂತ ಯೋಜನೆಗಳನ್ನು ಕೈಗೆತ್ತಿಕೊಂಡು ಯಾವುದೇ ಪಕ್ಷ ಭೇದ ಮಾಡದೆ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಲು ಸಲಹೆ ನೀಡಿದರು.

ಸಮೀಶ್ರ ಸರಕಾರ ಯಾವ ಗಳಿಗೆಯಲ್ಲಿ ಕುಸಿಯುತ್ತದೆ ಎನ್ನವ ಬಗ್ಗೆ ದಿನ ನಿತ್ಯ ಅವಲೋಕನ ಮಾಡುತ್ತಿದ್ದು ಕಾರ್ಯಕರ್ತರು ಬರಲಿರುವ ಯಾವುದೇ ಚುಣಾವನೆ ಸಂದರ್ಭದಲ್ಲಿ ಒಗ್ಗಟ್ಟಾಗಿ ಕಾರ್ಯಪ್ರವೃತರಾಗಬೇಕೆಂದು ವಿನಂತಿಸಿದ ಅವರು ಮುರುಗೇಶ ನಿರಾಣಿ ಗೆಲವು ಇದು ಕಾರ್ಯಕರ್ತರ ಗೆಲವು ಎಂದು ಬಣ್ಣಿಸಿದರು.
ಕಮಲಾ ಮುರುಗೇಶ ನಿರಾಣಿ ವಿ.ಪ. ಸದಸ್ಯ ಹಣಮಂತ ನಿರಾಣಿ, ಸಂಗಪ್ಪ ಕಟಗೇರಿ, ಎಂ.ಎಂ.ಶಂಬೋಜಿ, ಜಿ.ಪಂ.ಸದಸ್ಯ ಹೂವಪ್ಪ ರಾಠೋಡ, ಮಹಾಂತೇಶ ಕೋಲಕಾರ, ಕೆ.ವಿ. ಪಾಟೀಲ, ಶ್ರೀಶೈಲ ಯಂಕಚಿಮಠ, ಎಸ್.ಟಿ. ವಲ್ಲಿಗೌಡರ, ವಿಜಯಲಕ್ಮೀ ಪಾಟೀಲ, ಕಾವೇರಿ ರಾಠೋಡ, ದ್ರಾಕ್ಷಾಯಣಿ ಜಂಬಗಿ, ಶೋಭಾ ಹಂಚಿನಾಳ, ಸುರೇಶ ಜಿದ್ದಿಮನಿ ಇದ್ದರು.

ಸಮಾರಂಭಕ್ಕೆ ಮುಂಚೆ ಜಿ.ಎಲ್.ಬಿ.ಸಿ. ಯಿಂದ ಸಿದ್ದೇಶ್ವರ ದೇವಸ್ಥಾನದವರೆಗೆ ತೆರೆದ ವಾಹನದಲ್ಲಿ ಶಾಸಕ ಮುರುಗೇಶ ನಿರಾಣಿಹಾಗೂ ಕಮಲಾ ನಿರಾಣಿರವರನ್ನು ವಾಧ್ಯ ವೈಭವಗಳೋಂದಿಗೆ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.

loading...