ಎಂ.ಬಿ. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಮುಂದುವರಿದ ಸತ್ಯಗ್ರಹ

0
21
loading...

ವಿಜಯಪುರ: ಎಂ.ಬಿ. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಬಬಲೇಶ್ವರ ಶಾಂತವೀರ ಸರ್ಕಲ್ ಹತ್ತಿರ ನಡೆದ 6ನೇ ದಿನದ ಸರದಿ ಉಪವಾಸ ಸತ್ಯಾಗ್ರಹ ಮುಂದುವರೆಯಿತು. ಜೈನಾಪುರ ಮತ್ತು ಹಂಗರಗಿ ಗ್ರಾಮಸ್ಥರಿಂದ ಕರ್ನಾಟಕ ಗ್ರಾಮಸ್ಥರು ಧರಣಿಯ ನೇತೃತ್ವ ವಹಿಸಿದ್ದರು.

ಸತ್ಯಾಗ್ರಹಿಗಳನ್ನು ಉದ್ದೇಶಿಸಿ ವಿಜಯಪುರ ಜಿ.ಪಂ. ಮಾಜಿ ಅಧ್ಯಕ್ಷ ಬಸವರಾಜ ರಮಾಕಾಂತ ದೇಸಾಯಿ ಮಾತನಾಡಿ, “ನುಡಿದಂತೆ ನಡೆ, ಇದೆ ಜನ್ಮ ಕಡೆ”, ಬಸವಣ್ಣನವರ ವಾಣಿಯಂತೆ ಬಬಲೇಶ್ವರ ಕ್ಷೇತ್ರದ ಮತದಾರರಿಗೆ ನೀಡಿದ ಭರವಸೆಗಳನ್ನು ಚಾಚು ತಪ್ಪದೇ ಸಿದ್ದರಾಮಯ್ಯನವರ ಸರಕಾರದಲ್ಲಿ ಡಾ.ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ಕೃಷ್ಣಾ ಕೋಳ್ಳ ಮತ್ತು ಕಾವೇರಿ ಕಣಿವೆ ನೀರಾವರಿ ಯೋಜನೆಗಳನ್ನು ತಮ್ಮ 5ವರ್ಷದ ಅವಧಿಯಲ್ಲಿ ಯಶಸ್ವಿಯಾಗಿ ಲೋಕಾರ್ಪಣೆಯನ್ನು ಮಾಡಿದ್ದಾರೆ. ಕರುನಾಡ ಭಗೀರಥ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕರಾದ ಎಂ.ಬಿ.ಪಾಟೀಲರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದ್ದನ್ನು ಖಂಡಿಸಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ.
ನಮ್ಮ ವಿಜಯಪುರ ಜಿಲ್ಲೆ “ಬರದ ನಾಡ” ಎಂಬ ಹೆಸರನ್ನು ತೆಗೆದು ಹಾಕಿ “ಹಸಿರು ನಾಡು”ನ್ನಾಗಿ ಪರಿವರ್ತಿಸಿದ್ದಾರೆ. ಶೈಕ್ಷಣಿಕ ರಂಗದಲ್ಲಿ ವಿಜಯಪುರ ಜಿಲ್ಲೆಯನ್ನು ರಾಷ್ಟ್ರ ಮಟ್ಟದಲ್ಲಿ ಮುಂಚೂಣಿ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಇಂಥವರಿಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದ ರಾಜ್ಯದ ಮತ್ತು ರಾಷ್ಟ್ರೀಯ ನಾಯಕರು ಕೂಡಲೇ ಈ ಅನ್ಯಾಯವನ್ನು ಸರಿಪಡಿಸದೇ ಹೋದಲ್ಲಿ ನಾವೂ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಉಪ್ಪಾರ ಭಗೀರಥ ಪೀಠಾಧೀಪತಿಗಳಾದ ಪರಮಪೂಜ್ಯ ಶ್ರೀ ಶಿವಾನಂದ ಮಹಾರಾಜರು ಲಿಂಗದಳ್ಳಿ ಇವರು ಸಾನಿಧ್ಯವನ್ನು ವಹಿಸಿದರು.

ವೇದಿಕೆಯ ಮೇಲೆ ವೇದಮೂರ್ತಿ ನಾಗಯ್ಯ ಸ್ವಾಮಿ ಹಿರೇಮಠ, ಜಗದೀಶ ದೇಸಾಯಿ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಪಾಟೀಲ ಮತ್ತು ಎಂ.ಬಿ.ಪಾಟೀಲ, ಶ್ರೀಶೈಲ ತುಪ್ಪದ, ಗದಿಗೆಪ್ಪ ಚಿಕರೆಡ್ಡಿ, ಹನಮಂತ ಚೋಳಪ್ಪಗೋಳ, ಸಂಗಪ್ಪ ಹವಾಲ್ದಾರ, ಸೈಯದ ಬೆಳ್ಳಗಿ, ಬಸವರಾಜ ಬಳ್ಳೂರ, ಮುತ್ತಪ್ಪ ಮಂಟೂರ, ಸಿದ್ದು ಕೊಡೆಕಲ್, ಯಲ್ಲನಗೌಡ ಬಿರಾದಾರ, ಭೀಮಣ್ಣ ಲಕ್ಷಾಲಟ್ಟಿ, ಸಂಗಪ್ಪ ಯರನಾಳ, ಸಂಗಮೇಶ ಕೋಲಕಾರ, ನಾಗು ಹೊಳೆಪ್ಪಗೋಳ(ಹಲಗಣಿ), ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಯವ್ವ ಕೋಲಾರ, ರಂಗವ್ವ ನಾಗರಾಳ, ಕಾಶಿನಾಥ ಹುಲ್ಲೂರು, ರಾಮಸ್ವಾಮಿ ಹಂಗರಗಿ, ಶೀವಾಜಿ ಭೋವಿ, ಬಂದೇನವಾಜ ನದಾಫ, ನಾಗರಾಜ ಅಂಬಿಗೇರ(ಜೈನಾಪುರ), ಲಕ್ಕಪ್ಪ ಅಂಬಿಗೇರ, ಸಂಗಪ್ಪ ಮಜ್ಜಿಗೇರ ಮತ್ತಿತರರು ಉಪಸ್ಥಿತರಿದ್ದರು.

loading...