ಎಚ್ಕೆಗೆ ‘ಕೈ’ ತಪ್ಪಿದ ಸಚಿವ ಸ್ಥಾನ ಕಾರ್ಯಕರ್ತರಿಂದ ಪ್ರತಿಭಟನೆ: ಆಕ್ರೋಶ

0
20
loading...

ಗದಗ : ರಾಜ್ಯದ ಕಾಂಗ್ರೇಸ್ ಮತ್ತು ಜಾತ್ಯಾತೀತ ಜನತಾದಳ ಮೈತ್ರಿ ಸರಕಾರದ ಸಚಿವ ಸಂಪುಟದಲ್ಲಿ ಗದಗ ಶಾಸಕ ಎಚ್.ಕೆ.ಪಾಟೀಲರಿಗೆ ಸಚಿವ ಸ್ಥಾನ ನೀಡದಿರುವದಕ್ಕೆ ಕಾಂಗ್ರೇಸ್ ಧುರೀಣರು ಹಾಗೂ ಕಾರ್ಯಕರ್ತರು ಗದಗ-ಬೆಟಗೇರಿ ಅವಳಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ರಾಜ್ಯಪಾಲರ ಉಪಸ್ಥಿತಿಯಲ್ಲಿ ರಾಜ್ಯ ಮುಖ್ಯಮಂತ್ರಿಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಗದಗ ಶಾಸಕ ಎಚ್.ಕೆ.ಪಾಟೀಲರಿಗೆ ಸಚಿವ ಸ್ಥಾನ ಸಿಗದಿರುವದು ಕಾಂಗ್ರೇಸ್ ಕಾರ್ಯಕರ್ತರು, ಎಚ್.ಕೆ.ಪಾಟೀಲರ ಅಭಿಮಾನಿಗಳು ನಗರದ ಮಹಾತ್ಮಾ ಗಾಂಧಿ ಸರ್ಕಲ್‍ದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿ ಟೈರ್‍ಗೆ ಬೆಂಕಿ ಹಚ್ಚಿ ಬೊಬ್ಬೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಮಿತಿ, ಗದಗ ಶಹರ ಕಾಂಗ್ರೇಸ್ ಅಲ್ಪಸಂಖ್ಯಾತರÀ ಘಟಕ, ದಲಿತ ಸಂರ್ಘಷ ಸಮಿತಿ, ಯಂಗ ಇಂಡಿಯಾ, ಗದಗ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರು, ಅಂಜುಮನ್ ಇಸ್ಲಾಂ ಸಂಸ್ಥೆ ಪದಾಧಿಕಾರಿಗಳು, ನಗರಸಭಾ ಸದ್ಯಸರ ಸಯೋಗದೊಂದಿಗೆ ಟಾಯರಿಗೆ ಬೆಂಕಿಹಚ್ಚಿ ಪ್ರತಿಭಟಣೆ ಮಾಡಲಾಯಿತು.

ಯುವ ಕಾಂಗ್ರೆಸ್ ಸಮೀತಿ ಅಧ್ಯಕ್ಷ ಸರ್ಫರಾಜ ಬಬರ್ಚಿ, ಡಿ.ಎಸ್.ಎಸ್‍ನ ವಿನಾಯಕ ಬಳ್ಳಾರಿ, ಗದಗ ಶಹರ ಅಲ್ಪಸಂಖ್ಯಾತರÀ ಅಧ್ಯಕ್ಷ ಬಾಶಾಸಾಬ ಮಲಸಮುದ್ರ ಮಾತನಾಡಿದರು.
ಅಬ್ಬು ರಾಟಿ, ಯುವರಾಜ ಬಳ್ಳಾರಿ, ಬಸವರಾಜ ಮಾದವಗುಂಡಿ, ಮುನ್ನಾ ಶೇಖ, ಮಹ್ಮದ್ ಸಾಲಗಾರ, ಮುರಗೇಶ ಬಡ್ನಿ, ಚಾಂದ ಕೋಟ್ಟುರ, ಜೂನಸಾಬ ನಮಾಜಿ, ರಾಜು ರೋಣದ, ಮಕ್ತುಂಸಾಬ ನಾಲಬಂದ, ಗುರು ಮುಳಗುಂದ, ಮಂಜು, ದಾದು ಕನವಳ್ಳಿ, ದಾದು ಮುಂಡರಗಿ, ಶ್ರೀಕಾಂತ, ಕೃಷ್ಣಾ, ಮಂಜುನಾಥ ಅಗಸಿಮನಿ, ಪರಶುರಾಮ ಬಾಕಳೆ, ಸಾಧಿಕ ಧಾರವಾಡ, ಗಂಗಾಧರ, ರಾಘವೇಂದ್ರ, ಹುಲಗೇಶ, ರಫಿಕ ಮುಂತಾದವರು ಉಪಸ್ಥಿತರಿದ್ದರು.

ಹಾಲುಮತ ಮಹಾಸಭಾ ಖಂಡನೆ : ಪ್ರಸ್ತುತ ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಪಕ್ಷವು ಕುರುಬರನ್ನು ಕಡೆಗಣಿಸಿರುವುದನ್ನು ಖಂಡಿಸಿ ಹಾಲುಮತ ಮಹಾಸಭಾ ಹಾಗೂ ಕುರುಬ ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜೂ. 7 ರಂದು ಬೆಳಿಗ್ಗೆ 10.30 ಗಂಟೆಗೆ ಗದಗ ಮಹಾತ್ಮಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರುದ್ರಣ್ಣ ಗುಳಗುಳಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 2018ರ ವಿಧಾನಸಭಾ ಚುನಾವಣೆಯಲ್ಲಿ ಕುರುಬರು ಸಿದ್ದರಾಮಯ್ಯನವರನ್ನು ಬೆಂಬಲಿಸಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿದ್ದೇವೆ. ಆದರೆ, ಕಾಂಗ್ರೇಸ್ ಪಕ್ಷ ಸಮ್ಮಿಶ್ರ ಸರ್ಕಾರದಲ್ಲಿ ಕುರುಬರಿಗೆ ಸಚಿವ ಸ್ಥಾನ ನೀಡದೇ ಉಂಡ ಮನೆಗೆ ದ್ರೋಹ ಬಗೆದಿದೆ.

ಜಾತಿ ಅಭಿಮಾನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ನೋಡಿ ಕಲಿಯಬೇಕು. 38 ಶಾಸಕರಿಂದ ಸರಕಾರ ರಚಿಸಿದ ಕುಮಾರಸ್ವಾಮಿ ಅವರು ಸಚಿವ ಸಂಪುಟದಲ್ಲಿ ಒಕ್ಕಲಿಗ ಸಮುದಾಯಕ್ಕೆ 9 ಸ್ಥಾನಗಳನ್ನು ದೊರಕಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು 78 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಹಾಗೂ 8 ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಕುರುಬರಿಗೆ ಒಂದು ಸ್ಥಾನ ನೀಡದಿರುವುದು ದುರ್ಧೈವದ ಸಂಗತಿಯಾಗಿದೆ.
ಕರ್ನಾಟಕದಲ್ಲಿರುವ ಕುರುಬರು ಮುಗ್ಧರೇ ಇರಬಹುದು. ಆದರೆ, ಬುದ್ದಿಹೀನರಲ್ಲ ಕುರುಬರಿಗೆ ಸಚಿವ ಸ್ಥಾನ ಕೊಡಿಸದೇ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗುವುದು ಬೇಡ. ಸಿದ್ದರಾಮಯ್ಯನವರನ್ನು ಸೇರಿದಂತೆ ಎಲ್ಲಾ 8 ಜನ ಕಾಂಗ್ರೇಸ್ ಶಾಸಕರು ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಬೇಕು ಎಂದರು.

ಕುರುಬರಿಗೆ ರಾಜಕೀಯ ಕ್ಷೇತ್ರದಲ್ಲೂ ಈ ರೀತಿಯ ತಾರತಮ್ಯ, ಮೋಸ, ಅನ್ಯಾಯವಾಗುತ್ತಿದೆ. ಇದನ್ನು ಕುರುಬ ಸಮುದಾಯ ಎಂದಿಗೂ ಸಹಿಸಿಕೊಳ್ಳುವುದಿಲ್ಲ. ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷವನ್ನು ಕರ್ನಾಟಕದಲ್ಲಿರುವ ಕುರುಬರು ಸಂಪೂರ್ಣವಾಗಿ ಬಹಿಷ್ಕರಿಸಬೇಕಾಗುತ್ತದೆ ಎಂದರು.

loading...