ಎಡಿಸಿ ಶಶಿಧರಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

0
18
loading...

ಬಾಗಲಕೋಟೆ: ಬಾಗಲಕೋಟೆಗೆ ಅನೇಕ ಜನ ಅಪರ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಲ್ಲಿ ಅಲ್ಪ ಸಮಯದಲ್ಲಿ ಎಲ್ಲ ಅಧಿಕಾರಿಗಳ ಜೊತೆ ಬೆರತು ಉತ್ತಮ ಕಾರ್ಯನಿರ್ವಹಿಸಿದವರು ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ವರ್ಗಾವಣೆಗೊಂಡ ಅಪರ ಜಿಲ್ಲಾಧಿಕಾರಿ ಹಾಗೂ ಬೀಳಗಿ ತಹಶೀಲ್ದಾರಗೆ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಲ್ಲರೊಂದಿಗೆ ಬೆರೆತು ಕಾರ್ಯನಿರ್ವಹಿಸುವುದು ಇಂದಿನ ದಿನಗಳಲ್ಲಿ ಕಷ್ಟಕರವಾಗಿದ್ದು, ಇಂತಹ ಸ್ವಭಾವ ಹಲವರಲ್ಲಿ ಕೆಲವರಿಗೆ ಮಾತ್ರ ಇದ್ದು, ಅದು ಕುರೇರ ಅವರಲ್ಲಿ ಕಂಡುಬಂದಿದ್ದರಿಂದ ಅಲ್ಪ ದಿನಗಳಲ್ಲಿಯೇ ಜಿಲ್ಲಾ ಆಡಳಿತದ ಎಲ್ಲ ಅಧಿಕಾರಿಗಳಿಗೆ ಆತ್ಮೀಯರಾಗಿದ್ದರು. ಈ ಕಾರಣದಿಂದ ಕಳೆದ ವಿಧಾನಸಭಾ ಚುನಾವಣೆ ಯಶಸ್ವಿಗೆ ಕಾರಣರಾಗಿದ್ದಾರೆ ಎಂದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ಮಾತನಾಡಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿ.ಪಂ ಸಿಇಓ, ಅಪರ ಜಿಲ್ಲಾಧಿಕಾರಿ ಹಾಗೂ ನಾನು ಸೇರಿ ಕಾರ್ಯನಿರ್ವಹಿಸಿದ್ದೇವೆ. ಆಡಳಿತಾತ್ಮಕ ಕಾರ್ಯದಲ್ಲಿ ತೊಡಗುವಾಗ ಸಾಧಕ ಬಾದಕರಗಳ ಬಗ್ಗೆ ವಿವರಿಸಿ ಎಲ್ಲರೂ ಒಂದೇ ಬಗೆಯ ನಿರ್ಧಾರ ಕೈಗೊಳ್ಳುತ್ತಿದ್ದೆವು. ಹೀಗಾಗಿ ಶಶಿಧರ ಅವರು ಅಪರ ಜಿಲ್ಲಾಧಿಕಾರಿಗಳಾದಾಗಿನಿಂದ ಆಡಳಿತ ನಡೆಸುವಲ್ಲಿ ಯಾವುದೇ ರೀತಿಯ ತೊಂದರೆ, ಬಿನ್ನಾಭಿಪ್ರಾಯಗಳು ಬರಲಿಲ್ಲ. ಇದರಿಂದಾಗಿ ಚುನಾವಣಾ ಕಾರ್ಯ ಯಶಸ್ವಿಯಾಗಿ ನಡೆಸಲು ಸಾಧ್ಯಯಿತು ಎಂದರು.
ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಶಶೀಧರ ಕುರೇರ ಮಾತನಾಡಿ ಪ್ರಥಮದಲ್ಲಿ ಬಾಗಲಕೋಟೆಗೆ ಬಂದಾಗಿ ಹಿರಿಯ ಅಧಿಕಾರಿಗಳ ಆಡಳಿತ ವೈಖರಿಗಳ ಬಗ್ಗೆ ಗಮನವಿಟ್ಟು ಕಾರ್ಯನಿರ್ವಹಿಸುತ್ತಿರುವಾಗ ಯಾರಾದರೊಬ್ಬರು ಏನಾದರೂ ತಪ್ಪನ್ನು ಕಂಡು ಹಿಡಿಯುವರೆಂಬ ಅಳುಕು ನನ್ನಲ್ಲಿತ್ತು. ಆದರೆ ಇದುವರೆಗೂ ನಾನು ಕಾರ್ಯನಿರ್ವಹಿಸಿದಂತಹ ಬಾಗಲಕೋಟೆ ಜಿಲ್ಲೆಯ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಆಡಳಿತ ನಡೆಸುವಲ್ಲಿ ಸಹಕಾರ ನೀಡಿದ್ದು, ಮರೆಯುವಂತಿಲ್ಲವೆಂದು ಹೇಳಿದರು. ಇಲ್ಲಿಯ ಆಡಳಿತ ಕಡತಗಳ ವ್ಯವಸ್ಥೆ ಉತ್ತಮವಾಗಿದೆ ಎಂದು ತಿಳಿಸಿದರು. ಈಗ ನಾನು ಕಾರ್ಯನಿರ್ವಹಿಸಲು ಹೊರಟಿರುವ ಕಚೇರಿಯಲ್ಲಿ ಇಲ್ಲಿದ್ದ ಅಧಿಕಾರಿಗಳಂತ ಅಧಿಕಾರಿಗಳೇ ದೊರೆಯಲಿ ಎಂದು ಆಶಿಸುತ್ತಾ ವ್ಯಯಕ್ತಿಕವಾಗಿ ನನಗೆ ಆಡಳಿತ ನೀಡುವಲ್ಲಿ ಸಹಕಾರ ನೀಡಿದ ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಅಭಿನಂದಿಸಿದರು. ಸಮಾರಂಭದಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್‌.ಕಾಮಾಕ್ಷಿ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ, ಕಂದಾಯ ಇಲಾಖೆಯ ಶಿರಸ್ತೆದಾರ ಕಟ್ಟಿಮನಿ, ಕುಗಾಟೆ, ಎಂ.ಬಿ.ಗುಡೂರ ಸೇರಿದಂತೆ ಇತರರು ಇದ್ದರು. ಪ್ರಾರಂಭದಲ್ಲಿ ಪ್ರಭಾರಿ ಅಪರ ಜಿಲ್ಲಾಧಿಕಾರಿ ಔದ್ರಾಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

loading...