ಎಲ್ಲ ವಿಧ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಎಐಡಿಎಸ್ಒ ಆಗ್ರಹ

0
27
loading...

ಎಲ್ಲ ವಿಧ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ
ಎಐಡಿಎಸ್ಒ ಆಗ್ರಹ

ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಜ್ಯದ ಲಕ್ಷಾಂತರ ವಿಧ್ಯಾರ್ಥಿಗಳು ಉಚಿತ ಬಸ್ ಪಾಸ್ ನಿರೇಕ್ಷಯಲ್ಲಿದ್ದಾರೆ,ಹಿಂದಿನ ಸಿದ್ದರಾಮಯ್ಯ ಸರಕಾರ ವಿಧ್ಯಾರ್ಥಿಗಳಿಗೆ ಉಚಿತ ಬಸ್ ಪಾಸ ನೀಡುವುದಾಗಿ ಘೋಷಿಸಿತು, ಆದರೆ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ಬಸ್ ಪಾಸ ಹಣ ಪಡೆಯುತ್ತಿರುವುದು ಸರಿಯಲ್ಲ ,ಕೂಡಲೆ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕೆಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ವಿಧ್ಯಾರ್ಥಿಗಳು ಸರಕಾರಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಸರಕಾರ ವಿರಿದ್ದ ಘೋಷಣೆ ಕೂಗಿ ಬರಗಾಲ ಇರುವುದರಿಂದ ವಿಧ್ಯಾರ್ಥಿಗಳಿಗೆ ಆರ್ಥಿಕವಾಗಿ ಹೊರೆ ಕಡಿಮೆ ಮಾಡಲು ಉಚಿತ ಬಸ್ ಪಾಸ್ ವಿತರಿಸ ಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಎಐಡಿಎಸ್ಒ ಜಿಲ್ಲಾ ಮುಖಂಡ ಮಹಾಂತೇಶ ಬಿಳ್ಳೂರ, ರಾಜು ಗಾಣಗಿ,ಮುತ್ತು ದೋಡಗೌಡ್ರ ಇದ್ದರು.

loading...