ಎಸ್ಸಿ-ಎಸ್ಟಿ ನೌಕರರ ಜಿಲ್ಲಾ ಮಟ್ಟದ ಸಭೆ

0
19
loading...

ವಿಜಯಪುರ: ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಆಶ್ರಯದಲ್ಲಿ ಜೂ.15 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿ ಕುರಿತು ಈ ನಿರ್ಣಯ ಕೈಗೊಳ್ಳಲಾಯಿತು.
ಆಲಮಟ್ಟಿ ಎಸ್‍ಎಲ್‍ಎಒ ಸೋಮಲಿಂಗ ಗೆಣ್ಣೂರ ಮಾತನಾಡಿ, ಬಡ್ತಿ ಮೀಸಲಾತಿ ರಕ್ಷಣೆಗಾಗಿ ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಲು ಕೇಂದ್ರ ಸರ್ಕಾರವು ಕೂಡಲೇ ಕ್ರಮ ವಹಿಸಬೇಕು. ಲೋಕಸಭೆಯಲ್ಲಿ ಬಾಕಿಯಿರುವ ಸಂವಿಧಾನದ 117ನೇ ತಿದ್ದುಪಡಿಗೆ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರವು ಕೂಡಲೇ ಕ್ರಮ ವಹಿಸಬೇಕು. ಅಸ್ಪಶೃತಾ ನಿವಾರಣಾ ಕಾಯ್ದೆ 1989ಅನ್ನು ಯಾವುದೇ ಕಾರಣದಿಂದಲೂ ಬಲಹೀನಗೊಳ್ಳದಂತೆ ಕ್ರಮ ವಹಿಸಬೇಕು ಎಂದು ಹೇಳಿದರು.

77ನೇ ತಿದ್ದುಪಡಿಯನುಸಾರ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ,ಪ.ಜಾ.ಪ.ಪಂ.ದ ನೌಕರರಿಗೆ ನ್ಯಾಯ ದೊರಕಿಸಿ ಕೊಡಲು ರಾಜ್ಯ ಸರ್ಕಾರವು ಕೂಡಲೇ ವಹಿಸಬೇಕು, ಜೇಷ್ಠತಾ ಪಟ್ಟಿಯಲ್ಲಿ ಅನ್ಯಾಯವೆಸಗಿರುವ ಅಧಿಕಾರಿ-ಸಿಬ್ಬಂದಿಗಳ ವಿರುದ್ದ ಕಾನೂನು ಕ್ರಮ ವಹಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ರಾಜ್ಯ ಸರ್ಕಾರಗಳನ್ನು ತೀವ್ರವಾಗಿ ಒತ್ತಾಯಿಸಲು ಬೆಂಗಳೂರು ಚಲೋ ಬೃಹತ್ ರಾಜ್ಯಮಟ್ಟದ ರ್ಯಾಲಿ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ಎಲ್ಲ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಖಜಾನೆ ಇಲಾಖೆ ಉಪನಿರ್ದೇಶಕ ವಿನಯಕುಮಾರ, ಜಿಲ್ಲಾ ಅಧ್ಯಕ್ಷ ಬಿ.ಎಚ್.ನಾಡಗಿರಿ, ಎ.ಸಿ.ಚಲವಾದಿ, ಬಸವಂತ ಗುಣದಾಳ, ರವಿ ಯಲ್ಲಡಗಿ, ಎಂ.ಎಸ್.ನಾಯಕ, ಸುರೇಶ ಮ್ಯಾಗೇರಿ, ಕೆ.ಎಂ.ಇಬ್ರಾಹಿಂಪುರ, ಪ್ರಭು , ನಿಂಜಣ್ಣ ಕಾಳೆ, ಎಸ್.ಎಂ.ಡೋಣಿ, ಮಹಿಳಾ ಘಟಕದ ಅಧಕ್ಷರಾದ ನಂದಾ ತಿಕೋಟ, ಶ್ರೀಮತಿ ಹೊಳಿನ, ಆರ್.ಎಚ್.ಬನಸೋಡೆ ಮುಂತಾದವರು ಇದ್ದರು.

loading...