ಏಕಕಾಲದಲ್ಲಿ ಮೂರು ಭರತ ನಾಟ್ಯ: ಗಿನ್ನಿಸ್‌ ದಾಖಲೆ ನಿರ್ಮಿಸಿದ ಕಲಾವಿದರು

0
9
loading...

ಬಾಗಲಕೋಟ: ನಟರಾಜ ಸಂಗೀತ ನೃತ್ಯ ನಿಕೇತನ ಬಾಗಲಕೋಟೆಯ ಪ್ರಾಂಶುಪಾಲರಾದ ವಿಧೂಶಿ ಶುಭದಾ ಜಿ. ದೇಶಪಾಂಡೆ ಮತ್ತು ಉಷಾ ಆನಂದ ಪಾಟೀಲ ತಮ್ಮ ನೃತ್ಯಶಾಲೆಯ ಮಕ್ಕಳೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಭಾಗವಹಿಸಿದರು.
ಸಾಯಿ ಸೆಂಟರ್‌ ಫಾರ್‌ ಫರ್ಮಾರ್ಮಿಂಗ್‌ ಆರ್ಟ ಸಂಸ್ಥೆಯಿಂದ ಸರ್‌ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜೂನ್‌ 23 ಶನಿವಾರದಂದು ಆಯೋಜಿಸಲಾಗಿತ್ತು. 1123 ಕಲಾವಿದರು ವಂದೇ ಮಾತರಂ ಸಸ್ಯ ರ್ಯಾಮಲಾಂ ಮಾತರಂ ವಂದೇ ಮಾತರಂ ಎಂಬ ಗೀತೆಗೆ ಹಸಿರೇ ಉಸಿರು, ಹಸಿರು ಉಳಿಸಿ ಎಂಬ ಸಂದೇಶವನ್ನು ಸಾರುತ್ತ ಮನಮೋಹಕ ಭರತನಾಟ್ಯ ಪ್ರದರ್ಶಿಸಿ ಕ್ರೀಡಾಂಗದಲ್ಲಿ ನೆರೆದಂತಹ ಜನರ ಮನಗೆದ್ದು, ಬಾಗಲಕೋಟೆಯ ಕೀರ್ತಿ ಪತಾಕೆಯನ್ನು ಹಾರಿಸಿದರು.
ದೇಶದ ಮೂಲೆ ಮೂಲೆಗಳಿಂದ ಸೇರಿದ ಕಲಾವಿದರೊಂದಿಗೆ ಬಾಗಲಕೋಟೆಯ 22 ಮಕ್ಕಳು ವಂದೇ ಮಾತರಂ ಗೀತೆಗೆ ಹೆಜ್ಜೆ ಹಾಕಿ ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ, ಏಷ್ಯಾ ಬುಕ್‌ ಆಫ್‌ ರಿಕಾಡ್ರ್ಸ ಮತ್ತು ಇಂಡಿಯಾ ಬುಕ್‌ ಆಫ್‌ ರೆಕಾಡ್ರ್ಸ ನಿರ್ಮಿಸಿದರು.
ಗೌರಿಬಿದನೂರ ಶಾಸಕ ಹಾಗೂ ಕೃಷಿ ಸಚಿವ ಎನ್‌. ಎಚ್‌. ಶಿವಶಂಕರರೆಡ್ಡಿಯವರು ಈ ದಾಖಲೆಯ ನೃತ್ಯಕ್ಕೆ ಪ್ರಮುಖ ಸಾಕ್ಷಿಯಾದರು. ಬಂಕೀಮ್‌ ಚಂದ್ರ ಚಟರ್ಜಿ ವಿರಚಿತ ವಂದೇ ಮಾತರಂ ಗೀತೆ ಜಿಲ್ಲಾ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ದೇಶಪ್ರೇಮ ಇಮ್ಮಡಿಗೊಳಿಸುವಂತಿತ್ತು. ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ 6 ವರ್ಷದಿಂದ 36 ವರ್ಷದವರು ಏಕ ಸಮಾನ ಹೆಜ್ಜೆ ಹಾಕಿ ನೃತ್ಯ ಪ್ರದರ್ಶಿಸಿ ದಾಖಲೆ ಸೃಷ್ಟಿಸಿದರು.
ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೃತ್ಯಕಲಾವಿದರಾದ ಶುಭದಾ ಜಿ. ದೇಶಪಾಂಡೆ, ಉಷಾ ಆನಂದ ಪಾಟೀಲ ಚೇತನಾ ದೇಸಾಯಿಪಟ್ಟಿ, ಮಧುರಾ ಸಂಪಗಾವಿ, ನಿಧಿ ಪಾಟೀಲ, ಶ್ರದ್ಧಾ ಮೇಲ್ನಾಡ, ಮಹಾಲಕ್ಷ್ಮಿ ದೀಕ್ಷಿತ, ಸುಧಾ ಹುಬ್ಬಳ್ಳಿ, ರೇವತಿ ಆರ್‌. ಮುತಾಲಿಕದೇಸಾಯಿ, ಸೌಜನ್ಯ ಕೃಷ್ಣಾ ಮೊಹರೆ, ಶಾಂತಲಾ ಎಸ್‌. ಮೇಲ್ನಾಡ, ರಿಯಾ ಬಟಕುರ್ಕಿ, ಗೌರಿ ನಾಗಠಾಣ, ಶ್ರೇಯಾ ಸೂಳಿಗಾವಿ, ಶ್ರಾವಣಿ ಉಮದಿ, ಶ್ರೇಯಾ ಸುನಗದ, ಆದಿತಿ ಸುತಗುಂಡಾರ, ಪಲ್ಲವಿ ದೇಸಾಯಿ, ನಯನಾ ಪಾಟೀಲ, ಮಧು ಪಾಟೀಲ, ವೈಷ್ಣವಿ ಕುಲಕರ್ಣಿ, ಸೃಷ್ಟಿ ಈಳಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಿ.ಪಂ. ಅಧ್ಯಕ್ಷ ಹೊಸೂರ ಮಂಜುನಾಥ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೇಶವರಡ್ಡಿ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ನೃತ್ಯಪ್ರಿಯರು ದಾಖಲೆಯ ನೃತ್ಯಕ್ಕೆ ಸಾಕ್ಷಿಯಾದರು.

loading...