ಏಕೈಕ ಟಿ.20 ಆಸೀಸ್ ವಿರುದ್ಧ ಇಂಗ್ಲೆಂಡ್ ಗೆ ಜಯ

0
13

ಬರ್ಮಿಂಗ್​ಹ್ಯಾಮ್​:ಆಸ್ಟ್ರೇಲಿಯಾ ವಿರುದ್ದ ಇಂಗ್ಲೆಂಡ್ ಏಕದಿನ ಪಂದ್ಯಗಳಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ ಬಳಿಕ ಬುಧವಾರ ನಡೆದ ಏಕೈಕ ಟಿ.20 ಪಂದ್ಯದಲ್ಲಿ ಇಂಗ್ಲೆಂಡ್ 28 ರನ್ ಗಳ ರೋಚಕ ಜಯ ಸಾಧಿಸಿದೆ.

ಸೋತು ಮೊದಲು ಬ್ಯಾಟಿಂಗ್​ ಮಾಡಲು ಇಳಿದ ಇಂಗ್ಲೆಂಡ್​ ತಂಡ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳದ ಜಾಸನ್​ ರಾಯ್​(44), ಜೋಶ್​ ಬಟ್ಲರ್​(61) ತಂಡಕ್ಕೆ ಬದ್ರ ಬುನಾದಿ ಹಾಕಿಕೊಟ್ಟರು. 8.5 ಓವರ್​ಗಳಲ್ಲಿ 95ರನ್​ಗಳಿಸಿದ್ದ ಈ ಜೋಡಿ ಬೆರ್ಪಟ್ಟಿತ್ತು. ಕೇವಲ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಬಟ್ಲರ್​ ವೇಗವಾಗಿ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಇಂಗ್ಲೆಂಡ್​ನ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡರು.
ಇದಾದ ಬಳಿಕ ಬಂದ ಮಾರ್ಗನ್​(15), ಅಲೆಕ್ಸ್​​ ಹೆಲ್ಸ್​(49), ರೂಟ್​(35) ಹಾಗೂ ಜಾನಿ ಬೇರ್ಸ್ಟೋವ್(14)ರ ನನನ್​ಗಳಿಸಿ ತಂಡ 200ರಗಡಿ ದಾಡುವಂತೆ ಮಾಡಿದರು. ಕೊನೆಯದಾಗಿ ತಂಡ ನಿಗದಿತ 20 ಓವರ್​ಗಳಲ್ಲಿ5ವಿಕೆಟ್​ ಕಳೆದುಕೊಂಡು 221ರನ್​ಗಳಿಕೆ ಮಾಡಿತು.
ಇದರ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಪಡೆದುಕೊಂಡರು, ಮಧ್ಯಮ ಕ್ರಮಾಂಕದಲ್ಲಿ ದಿಢೀರ್​ ಕುಸಿತದಿಂದ ಸೋಲು ಅನುಭವಿಸುವಂತಾಯಿತು. ಕಾಂಗರೂ ಪರ ಆರಂಭಿಕ ಆ್ಯರನ್​ ಫಿಂಚ್​ ಕೇವಲ 41 ಎಸೆತಗಳಲ್ಲಿ 84ರನ್​ ಸಿಡಿಸಿ ಮಿಂಚಿದರು. ಆದರೆ ಇವರಿಗೆ ಬೇರೆ ಆಟಗಾರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಕೊನೆಯದಾಗಿ ಆಂಡ್ರ್ಯೂ ಟೈ(20),ಆಷ್ಟನ್ ಅಗರ್(29) ಮಿಂಚಿದರು ಪ್ರಯೋಜವಾಗಲಿಲ್ಲ. ಕೊನೆಯದಾಗಿ ತಂಡ 19.4 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 193ರನ್​ಗಳಿಸಲು ಮಾತ್ರ ಶಕ್ತವಾಯಿತು. ಇದರಿಂದ ಇಂಗ್ಲೆಂಡ್​ ಪಡೆ 28ರನ್​ಗಳ ಅಂತರದ ಗೆಲುವು ದಾಖಲು ಮಾಡಿಕೊಂಡಿತು.

ಇಂಗ್ಲೆಂಡ್​ ತಂಡದ ಪರ ರಶೀದ್​, ಕ್ರೀಸ್​ ಜೋರ್ಡನ್​ ತಲಾ 3ವಿಕೆಟ್​ ಪಡೆದುಕೊಂಡರೆ, ಪ್ಲಕಿಟ್​ 2, ಮೊಯಿನ್​ ಅಲಿ, ಡೇವಿಡ್ ವಿಲಿ ತಲಾ 1ವಿಕೆಟ್​ ಪಡೆದುಕೊಂಡರು.

loading...