ಏಜೆಂಟರ್ ಹಾವಳಿಗೆ ಬ್ರೇಕ್ ಹಾಕಿ:ಸಚಿವ ರಮೇಶ ಜಾರಕಿಹೊಳಿ ಎಚ್ಚರಿಕೆ

0
42
loading...

ಗೋಕಾಕ: ಕೆಲವೊಂದು ಸರ್ಕಾರಿ ಇಲಾಖೆಯಲ್ಲಿ ಏಜೆಂಟರ್ ಹಾವಳಿ ಹೆಚ್ಚಾಗಿದ್ದು ಅದನ್ನು ಅಧಿಕಾರಿಗಳು ತಡೆಗಟ್ಟಬೇಕೆಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅವರು ಸೋಮವಾರದಂದು ನಗರದ ನಗರಸಭೆ ಸಭಾಭವನದಲ್ಲಿ ಜರುಗಿದ ಮೂಡಲಗಿ ಮತ್ತು ಗೋಕಾಕ ತಾಲೂಕಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ಹಲವಾರು ಯೋಜನೆಗಳನ್ನು ಬಡ ಜನರಿಗೆ ತಲುಪಿಸುವಂತಹ ಮಹತ್ತರ ಕಾರ್ಯ ಅಧಿಕಾರಿಗಳ ಮೇಲಿದ್ದು ಅದನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ನಮ್ಮ ವಿರುದ್ಧ ಕೆಲವರು ಅಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದು ಜಾತಿ ರಾಜಕಾರಣ,ಸುಳ್ಳು ಪ್ರಚಾರ, ಹಿಂದೂತ್ವ ಬಗ್ಗೆ ಮಾತನಾಡುವವರ ಬಗ್ಗೆ ಗಮನ ವಿರಲಿ, ನಾನು ಕೂಡಾ ಹಿಂದೂ ಆಗಿದ್ದೇನೆ. ಹಿಂದುತ್ವ ಮತ್ತು ಜಾತಿ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿದ್ದು ಅಂತವರÀ ಮಾತಿಗೆ ಮರುಳಾಗಬಾರದು ಕಾನೂನು ಎಲ್ಲರಿಗೂ ಒಂದೇಯಾಗಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಸರ್ಕಾರದ ಕೆಲಸ ದೇವರ ಕೆಲಸವೆಂದು ಅರಿತು ಕಾರ್ಯ ನಿರ್ವಹಿಸಬೇಕು. ನಾನು ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಕಳೆದ 23 ತಿಂಗಳಿನಿಂದ ನಾನು ಸಚಿವನಾಗಿದ್ದ ಸಮಯದಲ್ಲಿ ಪ್ರಗತಿ ಪರಿಶೀಲನೆ ಬಗ್ಗೆ ಗಮನ ಹರಿಸಿಲ್ಲ ಆದ್ದರಿಂದ ಮುಂಬರುವ ಅಧಿವೇಶನ ಸಂದರ್ಭದಲ್ಲಿ ಅಥವಾ ಅದಕ್ಕಿಂತ ಪೂರ್ವದಲ್ಲಿ ಕ್ಷೇತ್ರದಲ್ಲಿ ಸಂಚರಿಸಿ ಕಾರ್ಯ ವೈಖರಿ ಪರಿಶೀಲಿಸಿ ಮತ್ತೋಮ್ಮೆ ಎಲ್ಲ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ಮಾಡುತ್ತೇನೆ ಎಂದರು.
ತಹಶೀಲ್ದಾರ ಹಾಗೂ ಕೆಎಸ್‍ಆರ್‍ಟಿಸಿ, ಸಮಾಜ ಕಲ್ಯಾಣ, ಭೂ ಸೇನಾ ನಿಗಮ, ಭೂ ಮಾಪನ,ನೀರಾವರಿ ಇಲಾಖೆ ಸೇರಿದಂತೆ ಇನ್ನೂ ಕೆಲವೊಂದು ಇಲಾಖೆಯಲ್ಲಿ ಏಜೆಂಟರ್ ಹಾವಳಿ ಹೆಚ್ಚಾಗಿದ್ದರಿಂದ ಚುನಾಯಿತ ಜನಪ್ರತಿನಿಧಿಗಳಿಗೆ ಬೆಲೆ ಇಲ್ಲದಂತಾಗಿದೆ.

ಚುನಾಯಿತ ಜನಪ್ರತಿನಿಧಿಗಳು ಯಾವುದೇ ಒಂದು ಕೆಲಸಕ್ಕೆ ಹೋದರೆ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕೆಲಸ ಮಾಡುತ್ತಿಲ್ಲ ಏಜೆಂಟರ್ ಮುಖಾಂತರ ಬೇಗನೆ ಕೆಲಸವಾಗುತ್ತದೆ ಎಂದು ಆರೋಪಿಸಿದರು. ಮುಂಬರುವ ದಿನಗಳಲ್ಲಿ ಅಂಕಲಗಿ ಮತ್ತು ಅಕ್ಕತಂಗೇರಹಾಳ ಗ್ರಾಮ ಪಂಚಾಯತ ಸೇರ್ಪಡೆ ಮಾಡಿ ಪಟ್ಟಣ ಪಂಚಾಯತ ಮಾಡಲಾಗುತ್ತದೆ. ಅಲ್ಲದೇ ಈಗಿದ್ದ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತಿಗೆ ಧುಪದಾಳ ಗ್ರಾಮ ಪಂಚಾಯತಿಯನ್ನು ಸೇರ್ಪಡೆ ಮಾಡಲಾಗುತ್ತದೆ ಎಂದು ತಿಳಿಸಿದರು. ಅರಭಾವಿ ಪಟ್ಟಣ ಪಂಚಾಯತಿಯಲ್ಲಿ ಸ್ವಂತ ಕಟ್ಟಡ ಮತ್ತು ಸಿಬ್ಬಂದಿ ಕೊರತೆ ಇದೆ ಎಂದು ಅರಭಾವಿ ಪ.ಪಂ ಮುಖ್ಯಾಧಿಕಾರಿ ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದು ಅಧಿಕಾರಿಗಳು ಸರಿಪಡಿಸಿಕೊಳ್ಳಬೇಕೆಂದರು. ಗೋಕಾಕದಲ್ಲಿ ಶೈಕ್ಷಣಿಕ, ಆರೋಗ್ಯ ಇಲಾಖೆಗಳು ಅಭಿವೃದ್ದಿ ಕೆಲಸಗಳನ್ನು ಮಾಡಿ ರಾಜ್ಯದಲ್ಲಿ ಹೆಸರು ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಿದರು.
ನಂತರ ಪ್ರತ್ಯೇಕವಾಗಿ ನಗರಸಭೆ ಮತ್ತು ಪೊಲೀಸ ಇಲಾಖೆಗಳ ಸಭೆಯನ್ನು ಸಚಿವರು ತಗೆದುಕೊಂಡು ಪೊಲೀಸ ಮತ್ತು ನಗರಸಭೆ ಇಲಾಖೆಗಳು ಜನರ ಸಮಸ್ಯೆ ಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲಾ ಇದರಿಂದ ನನಗೆ ರಾಜಕೀಯವಾಗಿ ಹಿನ್ನಡೆಯಾಗುತ್ತದೆ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ತರಾಟೆಗೆ ತಗೆದುಕೊಂಡರು. ನ್ಯಾಯ ಕೇಳಿ ಪೊಲೀಸ ಠಾಣೆಗೆ ಬರುವ ಸಾರ್ವಜನಿಕರಿಗೆ ಹಿಂದೂ ಮುಸ್ಲಿಂ ಎಂಬ ಭೇದ ಭಾವ ಮಾಡದೇ ಸರಿಯಾಗಿ ಸ್ಪಂದಿಸಿ ನ್ಯಾಯ ದೊರಕಿಸಿ ಕೂಡಬೇಕು. ಯಾರದೋ ಮಾತು ಕೇಳಿ ಕೇಸ್ ದಾಖಲಿಸಿಸಾರ್ವಜನಿಕರಿಗೆ ಸತಾಯಿಸುವ ಕಾರ್ಯ ಮಾಡದೇ ಎಲ್ಲರಿಗೂ ಒಂದೇ ನ್ಯಾಯ ಒದಗಿಸಿ ಕೊಡುವ ಕಾರ್ಯವಾಗಬೇಕೆಂದು ನಗರ ಠಾಣೆಯ ಎಸ್ ಐಗೆ ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕಾಡಳಿತ ವತಿಯಿಂದ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆ ಮೇಲೆ ತಹಶೀಲ್ದಾರ ಜಿ.ಎಸ್.ಮಳಗಿ, ಡಿಎಸ್ಪಿ ಪ್ರಭು ಬಿ.ಟಿ, ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ, ತಾ.ಪಂ ಇಒ ಎಫ್.ಜಿ.ಚಿನ್ನನವರ ಇದ್ದರು.

loading...