ಒಳ ಚರಂಡಿ, ರಸ್ತೆ ಡಾಂಬರೀಕರಣ ಶೀಘ್ರವೆ ಪರಿಹಾರ : ಕಾರಜೋಳ

0
15
loading...

ಕನ್ನಡಮ್ಮ ಸುದ್ದಿ ಮುಧೋಳ: ಮುಧೋಳ ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಯೋಜನೆಯು ಕೊನೆಯ ಹಂತಕ್ಕೆ ತಲುಪಿದ್ದು, ಪ್ರತಿ ಮನೆ ಮನೆಗಳಿಗೆ ಜೋಡಣೆ ಕಾರ್ಯ ಆಗಬೇಕಾಗಿದೆ ಎಂದು ಗೋವಿಂದ ಕಾರಜೋಳ ಎಂದರು.
ನಗರದ ತಾಪಂ ಸಭಾ ಭವನದಲ್ಲಿ ರಾಜ್ಯ ನೌಕರರ ಸಂಘದ ವತಿಯಿಂದ ಗೋವಿಂದ ಕಾರಜೋಳ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ಅವರು, ಈಗ ಶೇ 90ಕ್ಕಿಂತ ಹೆಚ್ಚು ಒಳಚರಂಡಿ ಕಾಮಗಾರಿಯು ಪೂರ್ಣಗೊಂಡಿದೆ ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಮಗೆ ತಿಳಿಸಿದ್ದಾರೆ. ಬಾಕಿ ಉಳಿದಿರುವ ಅಲ್ಪಸ್ವಲ್ಪ ಕಾಮಗಾರಿ ಪೂರ್ಣಗೊಳಿಸಲು ನಗರಸÀಭೆಯವರು ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ನಗರಸಭೆÀಯ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ನಿರ್ಲಕ್ಷವೇ ಕಾರಣ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಈ ಒಳಚರಂಡಿ ಯೊಜನೆ ಪೂರ್ಣಗೊಂಡ ನಂತರ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಡಾಂಬರೀಕರಣ ಮಾಡಬಹುದು. ಆದರೆ, ನಗರಸಭೆಯವರು ಕಾಮಗಾರಿ ಪೂರ್ಣಗೊಳಿಸಲು ಸಹಕರಿಸದೆ ಕಾಮಗಾರಿ ಕಳಪೆ ಆಗಿದೆ ಎಂದು ಸಬೂಬ ಹೇಳುತ್ತಿದ್ದಾರೆ. ಜೋಡಣಾ ಕಾಮಗಾರಿ ಪೂರ್ಣಗೊಂಡ ನಂತರವಷ್ಟೇ ಈ ಕಾಮಗಾರಿಯು ಯಶಸ್ವಿಯಾಗಿದೆಯೋ ಅಥವಾ ಕಳಪೆಯಾಗಿದೆಯೋ ಎಂದು ತಿಳಿಯಲಿದೆ.
ನಗರಸಭೆ ಮುಂದೆ ಧರಣಿ: ಅಷ್ಟೇ ಅಲ್ಲದೆ ನಗರಸಭೆಯು ಪಟ್ಟಣದ ಜನತೆಗೆ ನಲ್ಲಿಗಳ ಮೂಲಕ ತಿಂಗಳಿಗೆ ಎರಡು ಸಲ ಮಾತ್ರ ಕುಡಿಯುವ ನೀರು ಪುರೈಸುತ್ತಿದೆ. ಆದರೆ ಪಟ್ಟನದ ಜನಸಂಖ್ಯೆ ಹಾಗೂ ನೀರು ಸಂಗ್ರಹ ಸಾಮರ್ಥ್ಯ ಪರಿಶೀಲಿಸಿದಾಗ ನಗರಸಭೆಯವರು ಎರಡು ದಿನಕ್ಕೊಮ್ಮೆ ನೀರು ಬಿಡಬಹುದು. ಪಟ್ಟಣದಲ್ಲಿ ಅಂದಾಜು 4ರಿಂದ 5 ಸಾವಿರ ದಷ್ಟು ಅನಧೀಕೃತ ನಲ್ಲಿಗಳ ಜೋಡಣೆ ಇರುವುದರಿಂದ ನೀರು ಅಕ್ರಮವಾಗಿ ಪೋಲಾಗುತ್ತಿದೆ. ಈ ಅನಧೀಕೃತ ನಲ್ಲಿಗಳ ಜೋಡಣೆ ಸ್ಥಗಿತಗೊಳಿಸಬೇಕು, ಆವಾಗಲೇ ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯ . ಈ ಎರಡು ಕೆಲಸಗಳನ್ನು ಶೀಘ್ರವಾಗಿ ಮಾಡದಿದ್ದರೆ ತಾವೇ ಸ್ವತಃ ನಗರಸಭೆ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದರು.
2018-19ನೇ ಸಾಲಿನ ನೂತನ ಸರ್ಕಾರದ ರಾಜ್ಯ ಬಜೆಟ್‌ ಮಂಡನೆ ನಂತರ ಹೊಸ ಯೋಜನೆಗಳು ಜಾರಿಗೆ ಬರಲಿವೆ. ಅಲ್ಲಿಯವರೆಗೆ ಅಪೂರ್ಣಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್‌ ಡಿ.ಜೆ.ಮಹಾಂತ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ವ್ಹಿ.ಅಡವಿಮಠ. ಜಿಪಂ ಸದಸ್ಯ ಭೀಮನಗೌಡ ಪಾಟೀಲ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಕೆ.ಆರ್‌.ಮಾಚಪ್ಪನವರ, ವೇದಿಕೆ ಮೇಲೆ ಉಪಸ್ಥಿತರಿದ್ದರು.

loading...