ಕನಸು ನನಸಾಗಿಸಿಕೊಳ್ಳುವದು ಮುಖ್ಯ.: ರಮೇಶ ಭೂಸನೂರ

0
10
loading...

ಆಲಮೇಲ: ವಿಧ್ಯಾರ್ಥಿ ದಿಸೆಯಲ್ಲಿಯೇ ಮುಂದಿನ ಭವಿಷ್ಯದ ಬಗ್ಗೆ ಕನಸುಕಾಣುವದು ತಪ್ಪಲ್ಲ ಆದರೆ ಅದನ್ನು ನನಸಾಗಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಿಸಿಕೋಳ್ಳುವದೂ ಕೂಡಾ ಅಷ್ಟೆ ಮುಖ್ಯ ಅದನ್ನು ಸಮಾಜದ ಬೇರೆ ಬೇರೆ ಮೂಲಗಳಿಂದ ಪಡೆದುಕೊಂಡು ಗುರಿ ತಲುಪಬೇಕೆಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಅವರು ಆಲಮೇಲ ಸಮೀಪದ ದೇವಣಗಾಂವಗ್ರಾಮದ ಪ್ರಗತಿಪರ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಶ್ರೀರಾಮ ಟ್ರಾನ್ಸಪೋರ್ಟ್ ಫೈನಾನ್ಸ ಕಂಪನಿ ಲೀ. ವತಿಯಿಂದ ಹಮ್ಮಿಕೊಂಡಿದ್ದ ದೇವಣಗಾಂವದ ಪ್ರಗತಿಪರ ಶಿಕ್ಷಣಸಂಸ್ಥೆಯ ಪೌಢ ಶಾಲೆ ಹಾಗೂ ಕಡಣಿಯ ಪರಮಾನಂದ ಭೋಗಲಿಂಗೆಶ್ವರ ಪ್ರೌಢ ಶಾಲೆಯ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತ ಹಳ್ಳಿಗಳ ದೇಶ ಇದರ ಮೂಲ ಬೇರು ಹಳ್ಳಿಗಳಲ್ಲಿದೆ ಈ ಶ್ರೀರಾಮ ಗೃಪ್ ಕಂಪನಿಯವರು ಹಳ್ಳಿಗಳಲ್ಲಿನ ಮಕ್ಕಳಿಗೆ ಪ್ರೋತ್ಸಹ ಧನ ನೀಡುತ್ತಿರುವದು ಇಲ್ಲಿನ ಮಕ್ಕಳಿಗೆ ತುಂಬಾ ಉಪಯೋಗಕಾರಿಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಬೆಳಗಾವಿ ವಿಭಾಗದ ರಾಜ್ಯಮುಖ್ಯಸ್ಥ ಉದಯ ಚನ್ನಣ್ಣನವರ ಮಾತನಾಡಿ ಇತರರಿಗಾಗಿ ಶ್ರಮ ಪಡುವವರನ್ನು ಜನ ಎಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಆದ್ದರಿಂದ ಸಂಸ್ಥೆಯಿಂದ ಇತರರಿಗೆ ಸಹಾಯವಾಗಲೆಂದು ನಮ್ಮ ಸಂಸ್ಥೆಯು ವಿಧ್ಯಾರ್ಥಿವೇತನವನ್ನು ನೀಡುತ್ತಿದ್ದು ಸಮಾಜದ ಒಳತಿಗಾಗಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಲ್ಲಿ ಒಟ್ಟು 128 ಜನ ಮಕ್ಕಳಿಗೆ ತಲಾ 3 ಸಾವಿರ ದಂತೆ 3.84 ಲಕ್ಷ ರೂ ಇಂದು ವಿಧ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು.
ಸಾನಿಧ್ಯ ವಹಿಸಿದ್ದ ಅಫಜಲಪುರದ ವಿಶ್ವರಾಧ್ಯಮಳೇಂದ್ರ ಶ್ರೀಗಳು, ಅಡತ್‍ವ್ಯಾಪಾರಿ ಈರಯ್ಯ ಮಠ, ಎಸ್.ಎಸ್.ಚಂಡಕಿ ಮಾತನಾಡಿದರು.

ಪ್ರಗತಿಪರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕೇಶವರಾವ್ ಜೋಶಿ, ತಾಪಂ ಸದಸ್ಯ ಶಂಕರಲಿಂಗ ಕಡ್ಲೇವಾಡ, ಮಹಮ್ಮದ ಮುಲ್ಲಾ, ಗಿರೀಶ ದೇಸಾಯಿ, ಮಲಕಪ್ಪ ಜೇರಟಗಿ, ಪ್ರಕಾಶ ತುಪ್ಪದ, ವಿರುಪಕ್ಷಿ ಗಂಗನಳ್ಳಿ, ಸುಭಾಷ ಭೂಸನೂರ, ಭೋಗಪ್ಪ ಲಾಳಸಂಗಿ, ಉಮೇಶ ಬಿರಾದಾರ, ಸಂದೀಪ ಸುಪಲಿ, ಸಂಗಮೇಶ ಬಿರಾದಾರ, ಮಲ್ಲಿಕಾರ್ಜುನ ಅತಾಪಿ, ರವಿ ಮಠ, ಪ್ರಾಚಾರ್ಯ ಸುರೇಶ ಗಂಗನಳ್ಳಿ, ಕಡಣಿ ಕಾಲೇಜು ಪ್ರಾಚಾರ್ಯ ರಮೇಶ ಗಂಗನಳ್ಳಿ, ರಾಜು ದರ್ಜಿ, ವಿನಾಯಕ ಬೂದಿಹಾಳ, ಗುರುಪಾದ ಆಲಕೊಪ್ಪ, ರಾಘವೇಂದ್ರ ನಾಯಕ, ಶರಣಯ್ಯ ಮಠಪತಿ, ಮಲ್ಲಿಕಾರ್ಜುನ ಸೊನ್ನ, ಶ್ರೀಶೈಲ ಪಾರಗೊಂಡ, ಚನ್ನಪ್ಪ ಗಂಗನಳ್ಳಿ, ರಮೇಶ ಅತಾಪಿ ಇದ್ದರು.

loading...