ಕನಿಷ್ಠ ವೇತನ ಆಗ್ರಹಿಸಿ ಸಿಬ್ಬಂದಿಗಳಿಂದ ಪ್ರತಿಭಟನೆ

0
7
loading...

ಹಿರೇಕೆರೂರ: ರಟ್ಟೀಹಳ್ಳಿ ಬಹುಗ್ರಾಮ ನದಿ ನೀರು ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ (ಕೆಲಸಗಾರರಿಗೆ) ಕನಿಷ್ಠ ವೇತನ ನೀಡುವಂತೆ ಒತ್ತಾಯಿಸಿ ಬಹುಗ್ರಾಮ ನದಿ ನೀರು ಯೋಜನೆಯ ರಾಜ್ಯ ನದಿ ಕುಡಿಯುವ ನೀರು ಸರಬುರಾಜು ನೌಕರರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ. ನೇತೃತ್ವದಲ್ಲಿ ಬೈರನಪಾದದ ಬಳಿಯಲ್ಲಿರುವ ಜಾಕ್‍ವೇಲ್ ಹತ್ತಿರ ಪ್ರತಿಭಟನೆ ನಡೆಸಲಾಯಿತು.

ಬಹುಗ್ರಾಮ ನದಿ ನೀರು ಯೋಜನೆಗೆ ಸಂಬಂದಪಟ್ಟ ಎಂಜನೀಯರ್ ರಮೇಶಕುಮಾರ ಮತ್ತು ಗುತ್ತಿಗೆದಾರ ಅಶೋಕ ಬೆಳವಗಿ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಸಿಬ್ಬಂದಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಸಮಸ್ಯೆಯನ್ನಾಲಿಸಿದ ಎಂಜನೀಯರ್ ರಮೇಶಕುಮಾರ ಮಾತನಾಡಿ, ಚಾಲ್ತಿಯಲ್ಲಿರುವ ಟೆಂಡರ್ 2018-19 ಕ್ಕೆ ಮುಗಿಯುತ್ತದೆ. ಕನಿಷ್ಠ ವೇತನ ಪಾವತಿಸುವುದಕ್ಕೆ ಅನುವಾಗಲು ಬೇಕಾಗುವ ಹೆಚ್ಚಿವರಿ ಮೊತ್ತದ ಬಗ್ಗೆ ಈಗಾಗಲೇ ಅಂದಾಜು ಪತ್ರಿಕೆಯನ್ನು ತಯಾರಿಸಿ ಸಲ್ಲಿಸಲಾಗಿದೆ. ಈಗ ಅದು ಬೆಂಗಳೂರಿನ ಮುಖ್ಯ ಎಂಜನೀಯರ ಕಚೇರಿಯಲ್ಲಿ ಇದೆ. ಅನುಮೋದನೆ ದೊರೆತ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯ ನದಿ ಕುಡಿಯುವ ನೀರು ಸರಬುರಾಜು ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಟಿ.ಮಲ್ಲಿಕಾರ್ಜುನ ಮಾತನಾಡಿ, ಈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸೂಕ್ತವಾದ ವೇತನ ನೀಡಬೇಕೆಂದು (ಕನಿಷ್ಠ ವೇತನ) ಒತ್ತಾಯಿಸಿದರು.
ಕನಿಷ್ಠ ವೇತನ ಮತ್ತು ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಗುತ್ತಿಗೆದಾರರು ತಿಳಿಸಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು. ರಟ್ಟೀಹಳ್ಳಿ ಠಾಣೆಯ ಎಎಸ್‍ಐ ಬಿ.ಎಸ್.ಮಡ್ಡೇರ, ಪೊಲೀಸ್ ಸಿಬ್ಬಂದಿ ಬಿ.ಬಿ.ಹರವಿ, ವಾಯ್.ಎಫ್, ಸುಣಗಾರ, ಆರ್.ಎಚ್.ಹೆಡಿಯಾಲ, ಗುತ್ತಿಗೆದಾರರಾದ ಅಶೋಕ ಬೆಳವಗಿ ಹನುಮಂತಪ್ಪ ಬೆಳವಗಿ, ಇದ್ದರು.

ಪ್ರತಿಭಟನೆಯಲ್ಲಿ ಬಹುಗ್ರಾಮ ನದಿ ನೀರು ಯೋಜನೆಯ ಸಿಬ್ಬಂದಿ ಚಂದ್ರಪ್ಪ ಮೇಲೆಬೆನ್ನೂರು, ಸುಧಾಕರ ಕುಂಬಳೂರು, ಕೃಷ್ಣಪ್ಪ ಚಟ್ನಳ್ಳಿ, ರಮೇಶ ತಾವರಗಿ, ಬಸವರಾಜ ದಂಡಗಿಹಳ್ಳಿ, ಜಗದೀಶ ಬೆನಕಣ್ಣನವರ, ನಿಂಗಪ್ಪ ಬಣಗಾರ, ವಿಶ್ವನಾಥ ಉಕ್ಕಡಗಾತ್ರಿ, ಸತೀಶ ಸಾಲಿಮಠ, ರವಿ ಉಕ್ಕಡಗಾತ್ರಿ, ರವಿ ಕೆ.ಎಂ ಸೇರಿದಂತೆ ಹಲವು ಸಿಬ್ಬಂದಿಗಳು ಭಾಗವಹಿಸಿದ್ದರು.

loading...