“ಕನ್ನಡ ಪುಸ್ತಕ ಸೊಗಸು” ಬಹುಮಾನಕ್ಕೆ ಅರ್ಜಿ ಆಹ್ವಾನ

0
28
loading...

ಗದಗ : ಕನ್ನಡ ಪುಸ್ತಕ ಪ್ರಾಧಿಕಾರ ಜನೆವರಿ 2017 ರಿಂದ ಡಿಸೆಂಬರ್ 2017 ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ ಅವುಗಳ ಮುದ್ರಣ, ಮುಖಪುಟ ವಿನ್ಯಸ, ಗುಣಮಟ್ಟವನ್ನು ಪರಿಗಣೀಸಿ, ಕಲಾವಿದರು/ ಲೇಖಕರು/ ಪ್ರಕಾಶಕರಿಗೆ “ ಕನ್ನಡಪುಸ್ತಕ ಸೊಗಸು-2017” (ಪ್ರಥಮ, ದ್ವಿತೀಯ, ತೃತೀಯ ಮಕ್ಕಳ ಪುಸ್ತಕ ಮುಖಪುಟ ಚಿತ್ರ ವಿನ್ಯಾಸ ಪ್ರಥಮ, ಮುಖ ಪುಟ ಚಿತ್ರ ಕಲೆಯ ದ್ವಿತೀಯ) ಬಹುಮಾನಗಳನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಪ್ರಕಾಶಕರು/ ಕಲಾವಿದರು/ ಲೇಖಕರುಗಳು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ. ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು/ ಚಿತ್ರ ಕಲಾವಿದರ ಪೂರ್ಣ ವಿಳಾಸ, ಈ ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಯನ್ನು ಜೂ.30 ರೊಳಗಾಗಿ ಆಡಳಿತಾಧಿಕರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002 ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು 560 002, ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್ ಸೈಟ್ www.kannadapustakapradhikara.com ದೂರವಾಣಿ ಸಂಖ್ಯೆ 080-22484516/ 22107704 ನ್ನು ಸಂಪರ್ಕಿಸಬಹುದಾಗಿದೆ.

loading...