ಕನ್ನಡ ಸಾಹಿತ್ಯ ಬರಹಗಾರರ ಸಂಖ್ಯೆ ಗಣನೀಯವಾಗಿದೆ

0
10
loading...

ವಿಜಯಪುರ: ಕನ್ನಡ ಸಾಹಿತ್ಯ ಬರಹಗಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಲೇಖಕರಿಗೆ ಪುಸ್ತಕ ಪ್ರಕಟಣೆಯ ವೆಚ್ಚ ಭರಿಸುವ ಸಾಮಥ್ರ್ಯವಿಲ್ಲ. ಹೀಗಾಗಿ ಕನ್ನಡ ಲೇಖಕ ಬಡವನಾಗಿದ್ದಾನೆ ಎಂದು ಸಂಶೋಧಕ ಡಾ.ಎಂ.ಎಸ್. ಮದಭಾವಿ ಹೇಳಿದರು.
ಸ್ಪಂದನಾ ಸಾಹಿತ್ಯಾಸಕ್ತರ ಬಳಗದ ವತಿಯಿಂದ ಹೊರತರಲಾದ `ಹಾಸ್ಯ ಸ್ಪಂದನ’ ಲಲಿತ ಪ್ರಬಂಧಗಳ ಸಂಕಲನ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತಮವೆನಿಸುವ ಕನ್ನಡ ಗ್ರಂಥಗಳನ್ನು ಪ್ರಕಟಿಸಿ ಮಾರಾಟದ ವ್ಯವಸ್ಥೆ ಮಾಡುವ ವ್ಯವಸ್ಥೆ ಕಲ್ಪಿಸುವ ಮೂಲಕ ಸಾಹಿತಿಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಆದ್ದರಿಂದ ಸರಕಾರ ಸಾಹಿತಿಗಳ ಮಹತ್ವಾಕಾಂಕ್ಷೆಯನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು. ಹಾಸ್ಯ ಬರವಣಿಗೆ ಎಲ್ಲರಿಗೂ ಸಾಧಿಸುವುದಿಲ್ಲ. ಸ್ಪಂದನ ಬಳಗದವರು ಉತ್ತಮ ಹಾಸ್ಯ ಪ್ರಬಂಧಗಳನ್ನು ಬರೆದು ಸೈ ಎನಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ವಿಶ್ರಾಂತ ಪ್ರಾಚಾರ್ಯ ಡಾ.ಬಿ. ಜಗದೀಶ ಕೃತಿ ಬಿಡುಗಡೆಗೊಳಿಸಿಸದರು. ಶ್ರೀಕೃಷ್ಣ ನಾಗರಹಳ್ಳಿ ವಿರಚಿತ ಮಕ್ಕಳಿಗಾಗಿ ಗೀತಗಣಿತ ಗ್ರಂಥವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಸಾಹಿತಿ ಜಂಬುನಾಥ ಕಂಚ್ಯಾಣಿ ಅಧ್ಯಕ್ಷತೆ ವಹಿಸಿದ್ದರು.
ಬಸವರಾಜ ಮೇಲುಪ್ಪರಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕರ ಪರವಾಗಿ ಸಂಪಾದಕ ಬಿ.ಎಸ್. ಸಜ್ಜನ ಹಾಗೂ ಶ್ರೀಕೃಷ್ಣ ನಾಗರಹಳ್ಳಿ ಮಾತನಾಡಿದರು.

ಸ್ಪಂದನ ಬಳಗದ ಸಂಚಾಲಕಿ ಕೆ. ಸುನಂದಾ, ವಿದ್ಯಾವತಿ ಅಂಕಲಗಿ, ಸಿದ್ಧಲಿಂಗ ಹದಿಮೂರ, ಚಂದ್ರಶೇಖರ ಮುಳವಾಡ, ಸಾಹೇಬಗೌಡ ಬಸರಕೋಡ, ಎಸ್.ಡಿ. ಮಾದನಶೆಟ್ಟಿ, ಡಾ.ಆರ್.ಕೆ. ಕುಲಕರ್ಣಿ, ಕಂಚ್ಯಾಣಿ ಶರಣಪ್ಪ, ಪ್ರಭಾವತಿ ದೇಸಾಯಿ, ಜಯಶ್ರೀ ಬಿರಾದಾರ, ಮ.ಗು. ಯಾದವಾಡ, ಶರಣಗೌಡ ಪಾಟೀಲ, ಬಿ.ಎಚ್. ಬಾದರಬಂಡಿ ಪಾಲ್ಗೊಂಡಿದ್ದರು.

loading...