ಕಳತನ ಆರೋಪ: ಎರಡು ವರ್ಷ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದ ಕೋರ್ಟ್.

0
66
loading...

ಕಳತನ ಆರೋಪ: ಎರಡು ವರ್ಷ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದ ಕೋರ್ಟ್.

ಕನ್ನಡಮ್ಮ ಸುದ್ದಿ-ಸಂಕೇಶ್ವರ : ಮನೆ ಕಳತನ ದ ಆರೋಪ ಪ್ರಕರಣ ಎದುರಿಸುತ್ತಿದ್ದ ಬೆಳಗಾವಿ ನಗರದ ಪ್ರಕಾಶ ವಿನಾಯಕ ಪಾಟೀಲ ಎಂಬಾತನಿಗೆ ಇಂದು ಸಂಕೇಶ್ವರ ಜೆಎಂಎಪಸಿ ನ್ಯಾಯಾಲಯ ಆರೋಪಿಗೆ ಎರಡು ವರುಷ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೋರಡಿಸಿದೆ .
ಆರೋಪಿ ಪ್ರಕಾಶ ಪಾಟೀಲ ಮೇಲೆ ೨೦೧೫ ರಲ್ಲಿ ಮನೆ ಕಳ್ಳತನ ಆರೋಪದಡಿ ಸಂಕೇಶ್ವರ ಠಾಣೆಯಲ್ಲಿ ಅಪರಾಧ ಸಂಖ್ಯೆ ೩೯/೧೫ ಕಲಂ ೪೫೭,೩೮೦,೫೧೧ ೩೪ ಐಪಿಸಿ ಪ್ರಕರಣ ದಾಖಲಾಗಿತ್ತು .
ಆರೋಪಿ ಬಂಧಿಸುವಲ್ಲಿ ಪೊಲೀಸ್ ತನಿಖಾ ಅಧಿಕಾರಗಳಾಗಿ ಸಿಪಿಐ ಸಂದೀಪಸಿಂಗ್ ಮುರಗೂಡ್ ,ಪಿಎಸ್ ಐ ಶಶಿಕಾಂತ ವರ್ಮಾ,ಹೆಚ್ .ಡಿ ಮುಲ್ಲಾ ಸಿಬ್ಬಂದಿಗಳಾದ ಮಂಜುನಾಥ ಕಬ್ಬೂರ,ಬಿ.ವಾಯ್ ನೆರ್ಲಿ,ಎಂ.ಎಸ್ .ಹಾರೂಗೇರಿ ಇವರುಗಳ ಪ್ರಯತ್ನದಿಂದ ಆರೋಪಿ ಪ್ರಕಾಶ ಪಾಟೀಲನನ್ನು ಬಂಧಿಸುವಲ್ಲಿ ಬಲೆ ಬಿಸಿ ಯಶಸ್ವಿಯಾಗಿದ್ದರು .

loading...