ಕಳಪೆ ಕಾಮಗಾರಿ ತನಿಖೆಗೊಳಿಪಡಿಸಲು ಆಗ್ರಹ

0
20
loading...

ಬೀಳಗಿ: ತಾಲೂಕಿನ ಸೊನ್ನ ಯಾತ ನೀರಾವರಿ ಸಂಪೂರ್ಣವಾಗಿ ಕಳಪೆ ಕಾಮಗಾರಿಯಾಗಿದ್ದು ಸರಕಾರ ತನಿಖೆಗೊಳಿಪಡಿಸಬೇಕೆಂದು ಭಾರತೀಯ ಕಿಸಾನ ಸಂಘದ ಜಿಲ್ಲಾ ಅಧ್ಯಕ್ಷ ವಿ. ಜಿ. ರೇವಡಿಗಾರ ಆಗ್ರಹಪಡಿಸಿದ್ದಾರೆ. ಅವರು ಸೊನ್ನ ಗ್ರಾಮದ ಜಾಕ್‍ವೆಲ್ ಸ್ಥಳ ಪರಿಶೀಲನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿ ಕೃಷ್ಣಾ ಭಾಗ್ಯ ಜಲ ನಿಗಮ ನಿ. ಆಲಮಟ್ಟಿ ಇವರು ಬೀಳಗಿ-ಸೊನ್ನ ಗ್ರಾಮದ ಕೃಷಿಗಾಗಿ 1050 ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 2010-11 ರಲ್ಲಿ ಪ್ರಾರಂಭವಾದ ಸೊನ್ನ ಏತ ನೀರಾವರಿಗಾಗಿ ಸರಕಾರ ರೂ. 6.90 ಕೋಟಿಗಳನ್ನು ಖರ್ಚು ಮಾಡಿ ಜಾಕ್‍ವೆಲ್, ರೈಜಿಂಗ್ ಪಾಯಿಂಟ್ ಹಾಗೂ ಕಾಲುವೆಗಳನ್ನು ನಿರ್ಮಾಣ ಮಾಡಿ 7 ವರ್ಷಗಳ ಹಿಂದೆ ಲೋಕಾರ್ಪಣಗೊಳಿಸಿದ್ದಾರೆ.
ಆದರೆ ಇಂದು ಜಾಕ್‍ವೆಲ್ ಇಂಟೆಕ್ ಪಾಯಿಂಟ್ ಕಾಮಗಾರಿ ಕಳಪೆಯಾಗಿ ಕುಸಿದು ಬಿದ್ದಿರುತ್ತದೆ. ಇದರಿಂದ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೀಳಗಿ ಹಾಗೂ ಸೊನ್ನ ರೈತರ ಜಮೀನುಗಳಿಗೆ ನೀರು ಬರುವುದು ದುಸ್ತರವಾಗಿದೆ, ಒಂದು ವಾರದೊಳಗೆ ತ್ವರಿತಗತಿಯಲ್ಲಿ ದುರಸ್ತಿಗೊಳಿಸಬೇಕು ಮತ್ತು ಕಾಮಗಾರಿ ಮಾಡಿದ ಗುತ್ತಿಗೆದಾರ ಲಕ್ಷ್ಮೀ ಸಿವ್ಹಿಲ್ ಇಂಜಿನೀಯರಿಂಗ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.

ಈ ಕಳಪೆ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಉಗ್ರ ಕ್ರಮ ಕೈಕೊಳ್ಳಬೇಕು. ಇಲ್ಲದಿದ್ದಲ್ಲಿ ಈ ಪ್ರಕರಣವನ್ನು ಎ.ಸಿ.ಬಿ. ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸೊನ್ನ ಗ್ರಾಮದ ಪ್ರಗತಿಪರ ರೈತ ಶಿವಾನಂದ ಉತ್ತೂರ ಮಾತನಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಪೆ ಕಾಮಗಾರಿ ಹಾಗೂ ಜಾಕ್‍ವೆಲ್ ಕುಸಿದ ಬಗ್ಗೆ ಸಾಕಷ್ಟು ಸಲ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಮತ್ತು ಕೆಲಸ ನಿರ್ವಹಿಸುವ ದಿನಗೂಲಿ ನೌಕರರು ಜಾಕ್‍ವೆಲ್‍ಗೆ ಹೋಗಲು ಭಯ ಪಡುತ್ತಿದ್ದಾರೆ. ಜಾಕ್‍ವೆಲ್ ಕುಸಿದಿದ್ದರಿಂದ ಇಂಟೆಕ್‍ಪೈಪ್‍ಗಳೆಲ್ಲವೂ ಮಣ್ಣಲ್ಲಿ ಹೂತು ಹೋಗಿರುತ್ತವೆ ಎಂದು ಸ್ಥಳದಲ್ಲಿ ಉಪಸ್ಥಿತರಿದ್ದ ರೈತರುಗಳು ಆರೋಪಿಸಿ ಬೇಗನೆ ಜಾಕವೆಲ್ ದುರಸ್ಥಿಗೊಳಿಸಬೇಕು. ಸೊನ್ನ ಗ್ರಾಮದಲ್ಲಿ ನಿರ್ಮಾಣಗೊಂಡ ಸೊನ್ನ ಏತ ನೀರಾವರಿ ಜಾಕ್‍ವೆಲ್ ಕುಸಿದು ಬಿದ್ದಿರುವುದು.

loading...