ಕಾನೂನಿನ ಅರಿವಿದ್ದರೆ ಅಪರಾಧ ಸಂಖ್ಯೆಯೇ ಕಡಿಮೆಯಾಗುತ್ತದೆ: ಸನದಿ

0
18
loading...

ದಾಂಡೇಲಿ: ನಾವು ಕಾನೂನನ್ನು ಗೌರವಿಸಿದರೆ, ಕಾನೂನು ನಮ್ಮನ್ನು ಗೌರವಿಸುತ್ತದೆ. ಕಾನೂನಿನ ಅರಿವಿದ್ದರೆ ಅಪರಾಧಗಳ ಸಂಖ್ಯೆಯೇ ಕಡಿಮೆಯಾಗುತ್ತದೆ. ಈ ದೇಶದ ಪ್ರತಿಯೊಬ್ಬ ಪ್ರಜೆ ಕೂಡಾ ಕಾನೂನನ್ನು ಗೌರವಿಸಬೇಕು ಎಂದು ಹಳಿಯಾಳ ನ್ಯಾಯಾಲಯದ ಸಿವಿಲ್ ನ್ಯಾಯಾದೀಶರಾದ ಬಸವರಾಜ ಐ. ಸನದಿ ನುಡಿದರು.
ಅವರು ದಾಂಡೇಲಿಯ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲಿಸ್, ಕಾಲೇಜು, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಾಕ್ಷರತಾ ಜಾಥಾ ಕ್ಕೆ ಚಾಲನೆ ನೀಡಿ ನಂತರ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾಂಡೇಲಿ ವಕೀಲರ ಸಂಘದ ಅಧ್ಯಕ್ಷ ಅಜೀತ ನಾಯಕ ಸಾಕ್ಷರತಾ ಜಾಥಾದ ಉದ್ದೇಶದ ಬಗ್ಗೆ ವಿವರಿಸಿ, ಇಂದು ಕೆಲವರಿಗೆ ಕಾನೂನಿನ ಅರಿವಲ್ಲದ ಕಾರಣದಿಂದಾಗಿಯೇ ಕೆಲವು ಅಪರಾಧಗಳು ನಡೆಯುತ್ತವೆ. ಕಾನೂನಿ ಕನಿಷ್ಠ ಜ್ಞಾನವಾದರೂ ಪ್ರತಿಯೊಬ್ಬರಿಗೂ ತಿಳಿದಿರಬೇಕು ಎಂದರು.

ನ್ಯಾಯವಾದಿ ಸೋಮಕುಮಾರ ಎಸ್. ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕಲ್ರಮದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಆನಂಧ ಕೆ. ಕೊಣ್ಣೂರ, ಸಿ.ಪಿ.ಐ ಯಲ್ಲನಗೌಡ ನಾವಲಗಟ್ಟಿ, ಪಿ.ಎಸ್.ಐ ಪುಟ್ಟೇಗೌಡ ಎಸ್.ಎನ್. ನ್ಯಾಯವಾದಿಗಳಾದ ವಿ.ಆರ್. ಹೆಗಡೆ, ಎಮ್.ಸಿ. ಹೆಗಡೆ, ಎಚ್.ಎಸ್. ಕುಲಕರ್ಣಿ, ಅನಿತಾ ಸೋಮಕುಮಾರ, ಸುಮಿತ್ರಾ, ಕವಿತಾ ಹಂಪಣ್ಣವರ, ಶೈಲಾ ನಾಮದಾರಿ, ಶಾಲಾ ಮುಖ್ಯಾದ್ಯಾಪಕಿ ಸಿಸ್ಟರ್ ಸೆಲ್ವಿ ಮುಂತಾದವರಿದ್ದರು. ನ್ಯಾಯವಾದಿ ಆರ್.ವಿ. ಗಡೆಪ್ಪನವರ ನಿರೂಪಿಸಿದರು. ಶಿಕ್ಷಕ ಡೆವಿಡ್ ವಂದಿಸಿದರು.

loading...