ಕಾರ್ಯಕರ್ತರು ಸೋಲಿಗೆ ಆತಂಕ ಪಡಬಾರದು ಸರ್ಕಾರ ನಮ್ಮದೆ ಇದೆ ಅಶೋಕ ಪಟ್ಟಣ

0
50
loading...

ರಾಮದುರ್ಗಃ ಚುನಾವಣೆ ಮೇಲೆ ಸೋಲು ಗೆಲವು ಇರುವದು ಸಹಜ ನನಗೆ ಅಭೂತ ಪೂರ್ವ ಬೆಂಬಲ ನೀಡಿದ ತಾಲೂಕಿನ ನಮ್ಮ ಸಹೋದರ ಸಹೋದರಿಯರಿಗೆ ಹಾಗೂ ಪಕ್ಷದ ಮುಖಂಡರಿಗೆ ಯುವ ಕಾರ್ಯಕರ್ತರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ, ಮುಂಬರುವ ದಿನಗಳಲ್ಲಿ ಸದಾ ಕಾಲ ನಿಮ್ಮೊಂದಿಗೆ ಇರುತ್ತೇನೆ ಎಂದು ಅಶೋಕ ಮ. ಪಟ್ಟಣ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.
ಸ್ಥಳೀಯ ವೆಂಕಟೇಶ್ವರ ದೇವಸ್ಥಾನದಲ್ಲಿ ತಾಲೂಕಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ನನ್ನ ಅಭಿವೃದ್ದಿಯನ್ನು ಮೆಚ್ಚಿಕೊಂಡು ಸುಮಾರು 65 ಸಾವಿರ ಮತಗಳನ್ನು ನೀಡಿದ್ದಾರೆ. ಅಲ್ಪ ಮತಗಳಿಂದ ನಾವು ಪರಾಭವಗೊಂಡರು ಕಾರ್ಯಕರ್ತರು ಯಾರು ಹೆದರಬಾರದು ಸರ್ಕಾರ ನಮ್ಮದೆ ಇದೆ ಎಲ್ಲ ಕೆಲಸ ಕಾರ್ಯಗಳು ನಾವು ಹೇಳಿದಂತೆ ನಡೆಯುತ್ತದೆ. ಮತ್ತೆ ತಾಲೂಕಿನಲ್ಲಿ ಪಕ್ಷ ಕಟ್ಟೋಣ. ತಾಲೂಕಿನ ಎಲ್ಲ ಕಾರ್ಯಕರ್ತರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತೇನೆ. ಕೈಲಾದಷ್ಟು ಸಹಾಯ ಸಹಕಾರ ಮಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಬಿ ಎಸ್. ನಾಯಕ ಮಾತನಾಡಿ ಚುನಾವಣೆಯಲ್ಲಿ ಸೋಲು ಗೆಲವು ಇರುವುದು ಸಹಜ ಹಿಂದೆ ಯಾವ ಶಾಸಕರು ಮಾಡದಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆ ಅತಿಯಾದ ಆತ್ಮ ವಿಶ್ವಾಸವೆ ನಮಗೆ ಸೋಲಿಗೆ ಕಾರಣ. ಸಮ್ಮಿಶ್ರ ಸರ್ಕಾರ ಬಹಳ ದಿನ ನಡೆಯವದಿಲ್ಲ ಕೆಲವೆ ದಿನಗಳಲ್ಲಿ ಚುನಾವಣೆ ಬರುತ್ತದೆ ಒಂದಾಗಿ ಪಕ್ಷ ಸಂಘಟನೆ ಮಾಡಿ ಅಶೋಕ ಪಟ್ಟಣ ಅವರನ್ನು ಶಾಸಕರನ್ನಾಗಿ ಮಾಡೋಣ ಎಂದು ಹೇಳಿದರು.
ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗಪ್ಪ ಶಿಂಗಾರಗೊಪ್ಪ ಮಾತನಾಡಿ ಶಾಸಕರು ಮಾಡಿದ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ತಾಲೂಕಿನ ಕಾರ್ಯಕರ್ತರೊಂದಿಗೆ ಇರುತ್ತಾರೆ ಅಭಿವೃದ್ದಿ ಪರ ಕೆಲಸ ಮಾಡುತ್ತಾರೆ ಮುಂದಿನ ದಿನಗಳಲ್ಲಿ ಅನೇಕ ಚುನಾವಣೆಯಗಳಲ್ಲಿ ಬರುತ್ತವೆ ಗ್ರಾಮಿಣ ಭಾಗದಲ್ಲಿ ಪಕ್ಷವನ್ನು ಸಂಘಟನೆ ಮಾಡಿ ಕಾಂಗ್ರೆಸ್ ಭದ್ರ ಕೋಟೆಯನ್ನಾಗಿ ಮಾಡೋಣ ಎಂದು ಹೇಳಿದರು.
ಎಸ್ ಆರ್.ಬಿ. ಪಾಟೀಲ ಮಹಮ್ಮದ ಶೇಫಿ ಬೆಣ್ಣಿ ಬಸವರಾಜ ಹಿರೇರಡ್ಡಿ ಮಾತನಾಡಿ ಸಮಾಜವನ್ನು ಇಬ್ಬಾಗ ಮಾಡಿ ಬಿಜೆಪಿಯವರು ಮತಗಳನ್ನು ಪಡೆದುಕೊಂಡಿದ್ದಾರೆ. ಬರುವ ದಿನಗಳಲ್ಲಿ ಯುವ ಜನತೆಗೆ ಸರಿಯಾದ ಮಾರ್ಗದರ್ಶನ ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಇತ್ತೀಚಿಗೆ ಅಗಲಿದ ತಾಲೂಕಿನ ಹಾಲೊಳ್ಳಿ ಗ್ರಾಮದ ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಬಸವಂತಪ್ಪ ಸೋಮಲಿಂಗಪ್ಪ ನರಸಾಪೂರ ಹಾಗೂ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಪ್ಪ ಜಂಗವಾಡ,ಯುಥ್ ಅಧ್ಯಕ್ಷ ರಮೇಶ ಬಂಡಿವಡ್ಡರ, ಜಿಲ್ಲಾ ಪಂಚಾಯತ ಸದಸ್ಯರಾದ ಜಹೂರ ಹಾಜಿ, ಕೃಷ್ಣಪ್ಪಾ ಲಮಾಣಿ, ಎಪಿಎಂಸಿ ಅಧ್ಯಕ್ಷ ಬಿ ಎಂ.ಪಾಟೀಲ,ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷ ಎಸ್.ಎಂ ಪಾಟೀಲ, ಮುಖಂಡರಾದ ಶಾಸಕಗೌಡ ಪಾಟೀಲ, ಕಲ್ಲಣ್ಣ ವಜ್ರಮಟ್ಟಿ, ಪರುತಗೌಡ ಪಾಟೀಲ, ಎನ್.ಬಿ ದಂಡಿನದುರ್ಗಿ, ದ್ಯಾಮಣ್ಣ ದೊಡಮನಿ, ಬಾಳಪ್ಪ ಹಂಜಿ, ರಮೇಶ ಅಣ್ಣಿಗೇರಿ, ಬಾಳಪ್ಪ ರಡ್ಡರಟ್ಟಿ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

loading...