ಕಾಲಾ ಚಲನಚಿತ್ರ ಪ್ರದರ್ಶನ ಸ್ಥಗಿತ

0
29
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಕರ್ನಾಟಕ ರಕ್ಷಣಾ ವೇದಿಕೆಯ ಮನವಿ ಮೇರೆಗೆ ಹಳಿಯಾಳ ಪಟ್ಟಣದ ಬಸವರಾಜ ಚಿತ್ರಮಂದಿರದಲ್ಲಿ ರಜನಿಕಾಂತ ಅಭಿನಯದ ‘ಕಾಲಾ’ ಚಲನಚಿತ್ರ ಪ್ರದರ್ಶನವನ್ನು ಶುಕ್ರವಾರ ಸ್ಥಗಿತಗೊಳಿಸಲಾಯಿತು.
ತಮಿಳು ನಟ ರಜನಿಕಾಂತರವರು ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಒತ್ತಾಯಿಸುವ ಮೂಲಕ ಕನ್ನಡಿಗರಿಗೆ ನೋವಾಗುವಂತೆ ಮಾತನಾಡಿರುತ್ತಾರೆ. ಹೀಗಾಗಿ ಅವರ ಅಭಿನಯದ ‘ಕಾಲಾ’ ತಮಿಳು ಚಿತ್ರವನ್ನು ಪ್ರದರ್ಶಿಸಬಾರದು ಎಂದು ಪ್ರತಿಭಟಿಸಿ ಕರವೇ ಸಂಘಟನೆಯವರು ಚಿತ್ರಮಂದಿರಕ್ಕೆ ತೆರಳಿ ‘ಕಾಲಾ’ ಚಿತ್ರದ ಪೋಸ್ಟರ್‍ಗಳನ್ನು ಹರಿದು ಹಾಕಿದರು. ನಂತರ ಇಂದು ಚಿತ್ರ ಪ್ರದರ್ಶನ ಮಾಡಬಾರದೆಂದು ಸಲ್ಲಿಸಿದ ಮನವಿಗೆ ಚಿತ್ರಮಂದಿರದ ನಿರ್ವಾಹಕರು ಒಪ್ಪಿಗೆ ಸೂಚಿಸಿದರು.

ಕರವೇ ತಾಲೂಕಾಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಇವರ ನೇತೃತ್ವದಲ್ಲಿ ಪದಾಧಿಕಾರಿಗಳಾದ ಚಂದ್ರಕಾಂತ ಬಿ ದುರ್ವೆ, ಮಹೇಶ ಆನೆಗುಂದಿ, ವಿನೋದ ದೊಡ್ಮನಿ, ಈರಯ್ಯಾ ಹೀರೆಮಠ, ಶ್ರೀಶೈಲ ಮಠದೇವರು, ಪ್ರಶಾಂತ ಪಾಟೀಲ್, ರಘು ಅಯ್ಯಂಗಾರ, ದೇಮಾಣಿ ದೇವಗಿರಿ, ವಿಜಯ ಪಡ್ನೀಸ್, ಸಚಿನ ಅಗಸರ, ನಾಗಯ್ಯಾ ಓಶಿಮಠ, ತುಕಾರಾಮ ಮಡಿವಾಳ, ಶಿವಾನಂದ ಶೆಟ್ಟಿ, ಶಿವಾನಂದ ಡಮ್ಮಣಗಿಮಠ, ಸುಧಾಕರ ಕುಂಬಾರ, ವಿನಾಯಕ ಮಡ್ಡಿ, ಮಂಜುನಾಥ ಹೊಂಡದಕಟ್ಟಿ, ಕಾಂತು ನೇವಗೇರಿ, ವಿನಾಯಕ ಶೆಟ್ಟಿ, ಕಾರ್ತಿಕ ಕಳ್ಳಿಮನಿ, ಶಿವಾನಂದ ಕರಜೇಂಕರ, ಚಂದ್ರಕಾಂತ ಅರಶೀನಗೇರಿ ಮೊದಲಾದವರು ಪಾಲ್ಗೊಂಡಿದ್ದರು.

loading...