ಕಾಲಾ ಚಿತ್ರ ಬಿಡುಗಡೆ – ಭದ್ರತೆಯಿದ್ದರೂ ತುಮಕೂರಲ್ಲಿ ತೆರೆ ಕಾಣದ ಚಿತ್ರ

0
23
loading...

ತುಮಕೂರು- ಕಾಲಾ ಚಿತ್ರ ಬಿಡುಗಡೆ ಗೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ನಗರದಲ್ಲಿ ಚಿತ್ರ ಪ್ರದರ್ಶನ ಸಂಪೂರ್ಣ ಸ್ಥಗಿತಗೊಂಡಿದೆ.
ಕಾವೇರಿ ನೀರಿನ ಕುರಿತಾಗಿ ಕನ್ನಡಿಗರ ವಿರುದ್ಧವಾಗಿ ನಟ ರಜನಿಕಾಂತ್ ಮಾತನಾಡಿರುವ ಹಿನ್ನಲೆಯಲ್ಲಿ ಕಾಲಾ ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವಡೆ ಚಿತ್ರ ಬಿಡುಗಡೆಯಾಗಿಲ್ಲ. ಸದ್ಯ ಈ ಬಿಸಿ ತುಮಕೂರಿನಲ್ಲೂ ತಟ್ಟಿದೆ.
ಕಾಲಾ ಚಿತ್ರ ಬಿಡುಗಡೆಗೆ ರಾಜ್ಯಾದ್ಯಂತ ಅವಕಾಶ ನೀಡುವುದಿಲ್ಲ ಎಂಬ ಕನ್ನಡಪರ ಸಂಘಟನೆಗಳ ಎಚ್ಚರಿಕೆಯ ಭಯದಲ್ಲಿ ಚಿತ್ರಪ್ರದರ್ಶನ ಆರಂಭವಾಗಿಲ್ಲ ಎಂದು ತಿಳಿದು ಬಂದಿದೆ.
ತುಮಕೂರು ನಗರದ ಮಾರುತಿ ಚಿತ್ರಮಂದಿರದಲ್ಲಿ ಇಂದು ಕಾಲಾ ಚಲನಚಿತ್ರ ಪ್ರದರ್ಶನವಾಗಬೇಕಿತ್ತು. ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಎರಡು ದಿನಗಳ ಹಿಂದೆಯಷ್ಟೇ ಕನ್ನಡಪರ ಸಂಘಟನೆಗಳು ಬಿಡುಗಡೆಗೊಳಿಸದಂತೆ ಎಚ್ಚರಿಕೆ ನೀಡಿದ್ದವು. ಹೀಗಾಗಿ ಕಾಲಾ ಚಿತ್ರದ ಬದಲು ತೆಲುಗು ಚಲನಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.
ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿರುವ ರಜನಿಕಾಂತ್ ಅಭಿನಯದ ತಮಿಳು ಚಿತ್ರ ಕಾಲಾ ಪ್ರದರ್ಶನಕ್ಕೆ ಹೈಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಅಗತ್ಯ ಭದ್ರತೆ ಒದಗಿಸಿದ್ದರೂ ಚಿತ್ರ ಬಿಡುಗಡೆ ಆಗಿಲ್ಲ.

loading...