ಕಿತ್ತೂರ ಚೆನ್ನಮ್ಮಾ ಸ್ಮಾರಕ ರಾಷ್ಟ್ರೀಯ ಸ್ಮಾರಕ ಮಾಡಲು ಆಗ್ರಹಿಸಿ ಪಾದಯಾತ್ರೆ: ವಚನಾನಂದ ಶ್ರೀಗಳು

0
13
loading...

ನರಗುಂದ: ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ ವೀರರಾಣಿ ಕಿತ್ತೂರ ಚೆನ್ನಮ್ಮಾಜಿ ಅವರ ಸ್ಮಾರಕವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕೆಂದು ಆಗ್ರಹಿಸಿ 246 ಕಿಮಿ ಡಾವಣಗೇರಿಯಿಂದ ಬೆಳಗಾವಿ ವರೆಗೆ ಮುಂದಿನ ದಿನ ಗೊತ್ತು ಪಡಿಸಿ ರಾಜ್ಯದ ಮಠಾಧೀಶರು ಪಾದಯಾತ್ರೆ ನಡೆಸಿ ಸರ್ಕಾರಗಳಿಗೆ ಆಗ್ರಹಿಸಲಾಗುವುದೆಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧೀಶರಾದ ಜಗದ್ಗುರು ವಚನಾನಂದ ಶ್ರೀಗಳು ತಿಳಿಸಿದರು.
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ತಾಲೂಕ ಪಂಚಮಸಾಲಿ ಸಮಾಜದ ವಿವಿದೋದ್ದೇಶಗಳ ಸಂಘದ ವತಿಯಿಂದ ಜೂ. 16 ರಂದು ಶಾಸಕ ಸಿ.ಸಿ. ಪಾಟೀಲ ಹಾಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರುಗಳಾದ ವಚನಾನಂದ ಶ್ರೀಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು, ದೇಶದ ಪ್ರೇಮಾಅಭಿಮಾನವನ್ನು ರಾಣಿ ಚೆನ್ನಮ್ಮ ಅವರಂತೆ ಈ ದೇಶದ ಜನತೆ ಕಲಿತುಕೊಳ್ಳಬೇಕಿದೆ. ಅಮೇರಿಕಾದಲ್ಲಿರುವ ಮೆಸಿಗನ್‍ಲೇಕ್ ಎಂಬ ಮಹಾ ಸರೋವರ 746 ಕಿಮಿ ಗಿಂತ ಹೆಚ್ಚು ವಿಸ್ತಾರತೆ ಹೊಂದಿದೆ. ಅಲ್ಲಿ ಜೂ. 21 ರಂದು ವಿಶ್ವ ಆರೋಗ್ಯ ದಿನಾಚರಣೆ ಮತ್ತು ಬಸವ ಜಯಂತಿಯಂತಹ ಮಹತ್ವದ ಕಾರ್ಯಕ್ರಮಗಳು ನಡೆಯಲಿವೆ. ಇತರ ದೇಶಗಳು ಬಸವ ತತ್ವವನ್ನು ಅಳವಡಿಸಿಕೊಳ್ಳಲು ಬಹಳಷ್ಟು ಮಹತ್ವದ ಕೆಲಸ ನಿರ್ವಹಿಸುವಾಗ ನಾವೆಲ್ಲ ಈ ದೇಶದವರು ಬಸವ ತತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ವಿಶ್ವ ಯೋಗ ದಿನಾಚರಣೆ ಇಡೀ 196 ದೇಶಗಳಲ್ಲಿ ಜೂ. 21 ರಂದು ಆವರಣಗೊಳ್ಳಲಿದ್ದು ಇದರ ಮಹತ್ವವನ್ನು ನಾವೆಲ್ಲ ಪಡೆಯಬೇಕಾಗಿದೆ.
ವೀರಶೈವ ಲಿಂಗಾಯತ್ ಧರ್ಮಗಳು ಒಂದು ಎನ್ನುವ ಮನೋಭಾವಣೆ ಎಲ್ಲರಲ್ಲಿಯೂ ಇದೆ. ಶ್ರೇಷ್ಟ ಮತ್ತು ಉನ್ನತ ಧರ್ಮದ ವೀರಶೈವ ಲಿಂಗಾಯತ ಧರ್ಮದ ಶಾಸಕರು ಈ ಭಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಂಡಿದ್ದಾರೆ. ಜಾತಿ ವರ್ಗ ಆಧಾರದ ಮೇಲೆ ಸಚಿವ ಸಂಪುಟ ವಿಸ್ತರಣೆಮಾಡುವ ಸಂದರ್ಭದಲ್ಲಿ ಲಿಂಗಾಯತ ಧರ್ಮದ ಕೇವಲ ನಾಲ್ಕು ಶಾಸಕರುಗಳಿಗೆ ಮಾತ್ರ ಸಚಿವ ಸ್ಥಾನ ಲಭಿಸಿದೆ ಆದರೆ ಗೌಡ ಒಕ್ಕಲಿಗರಿಗೆ ಮುಖ್ಯಮಂತ್ರಿ ಸೇರಿ ಒಟ್ಟು 10 ಸ್ಥಾನಗಳು ಕಲ್ಪಿತಗೊಂಡಿವೆ.
ಇಂತಹ ವೈಷಮ್ಯ ಸರಿಯಲ್ಲ, ಲಿಂಗಾಯತ ಧರ್ಮದ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಂಡ ಶಾಸಕರನ್ನು ಸಚಿವ ಸ್ಥಾನದಿಂದ ಹೊರಗಿಟ್ಟಿದ್ದಾರೆ ಎಂದೂ ರಾಜ್ಯದಲ್ಲಿರುವ ಮಠದ ಸ್ವಾಮಿಗಳು ಇದಕ್ಕಾಗಿ ಹೋರಾಟ ನಡೆಸುವುದು ಸರಿಯಲ್ಲ. ಸ್ವಾಮಿಗಳ ಕಾರ್ಯ ಎಲ್ಲ ಜನಾಂಗದವರಿಗೆ ಧರ್ಮ ಬೋಧನೆ ಮಾಡಿ ಸಮಾಜದಲ್ಲಿ ಸಾಮರಸ್ಯ ತರುವ ಕೆಲಸಕ್ಕೆ ಮಾತ್ರ ಅವರು ಸಿಮಿತರು ಎಂದು ವಚನಾನಂದ ಶ್ರೀಗಳು ತಿಳಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸಿ.ಸಿ. ಪಾಟೀಲ, ಪಂಚಮಸಾಲಿ ಸಮಾಜದ ಜನತೆ ನನ್ನ ಮೇಲೆ ವಿಶ್ವಾಸ ಮತ್ತು ಪ್ರೀತಿ ಇಟ್ಟು ಈ ಭಾರಿಯ ವಿಧಾನಸಭೆಯಲ್ಲಿ ಹೆಚ್ಚಿನ ಮತನೀಡುವ ಮೂಲಕ ಆಯ್ಕೆಗೊಳಿಸಿದ್ದಕ್ಕೆ ತಮಗೆಲ್ಲ ಗೌರವಸಲ್ಲಿಸುತ್ತೇನೆ. ಇದರ ಜೊತೆ ಎಲ್ಲ ಸಮಾಜ ವರ್ಗದವರು ನನಗೆ ಹೆಚ್ಚಿನ ಮತನೀಡಿದ್ದಾರೆ. ಅವರೂ ನನ್ನ ಅಭಿಮಾನಿಗಳು, ರಾಜ್ಯದಲ್ಲಿ ಈಚಿನ ಬೆಳವಣಿಗೆ ಮತ್ತು ರಾಜ್ಯಾಡಳಿತ ಕಾರ್ಯಬಾರ ಸಂದರ್ಭದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಆಯ್ಕೆಗೊಂಡಿದ್ದರೂ ಸಹ ಹೆಚ್ಚಿನ ಸಂಖ್ಯೆ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ. ಹೆಚ್ಚಿನ ಸ್ಥಾನ ಲಿಂಗಾಯಿತ ಖೋಟಾದಲ್ಲಿ ಬರಬೇಕಿತ್ತು. ಆದರೆ ರಾಜಕಾರಣದ ವ್ಯವಸ್ಥೆಯಲ್ಲಿ ಬಹಳಷು ಅಸಮಾನತೆ ಮಾಡಲಾಗಿದೆ. ಪಂಚಮಸಾಲಿ ಪೀಠದ ಸ್ವಾಮಿಗಳು ಸಹ ಇದನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುವ ಒತ್ತಡದ ಹೋರಾಟದಲ್ಲಿ ಭಾಗಿಗಳೂ ಆಗಬಹುದು. ಧರ್ಮದ ಪ್ರಾಭ್ಯಲತೆಯ ಕಾರಣದ ಹೊರಾಟವೂ ನಡೆಯಬಹುದು ಎಂದು ತಿಳಿಸಿದ ಅವರು, ಯೋಗದಲ್ಲಿ ಅತೀ ಜ್ಞಾನಸಂಪಾದಿಸಿದ ಹರಿಹರದ ಪೀಠಾಧ್ಯಕ್ಷರಾದ ವಚನಾನಂದ ಶ್ರೀಗಳನ್ನು ಮುಂದಿನ ಅಕ್ಟೋಬರ್ ತಿಂಗಳದ ನಂತರದಲ್ಲಿ ಕರೆಯಿಸಿ ಪಟ್ಟಣದಲ್ಲಿ ಯೋಗ ಶಿಬಿರ ನಡೆಸಲು ತಿರ್ಮಾನಿಸಲಾಗಿದೆ.
ಮಕ್ಕಳು ಶಿಕ್ಷಣದಲ್ಲಿ ಹೆಚ್ಚಿನ ಸಾಧನೆ ಮಾಡಬೇಕಾಗಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹಾಗೂ ಅವರ ಮುಂದಿನ ಓದಿಗಾಗಿ ಅನೇಕ ಬಡ ಮಕ್ಕಳ ಪಾಲಕರು ತಮ್ಮನ್ನು ಸಂಪರ್ಕಿಸಿದಲ್ಲಿ ಅವರಿಗೆ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಪಂಚಮಸಾಲಿ ಸಮಾಜ ವಿವಿದೋದ್ದೇಶಗಳ ಸಂಘದ ಅಧ್ಯಕ್ಷ. ಡಾ. ಸಿ.ಕೆ. ರಾಚನಗೌಡ್ರ, ಪಂಚಗ್ರಹ ಗುಡ್ಡದ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿದರು. ಕೇಂದ್ರ ಸರ್ಕಾರದ ಬಹು ಮಹತ್ವದ ಯೋಜನೆಯಾದ ಫಸಲ್ ಬಿಮಾ ಯೋಜನೆ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ಧೆಶಕ ಚನ್ನಪ್ಪ ಅಂಗಡಿ, ಗದಗ ವಿಮಾ ಕಂಪನಿಯ ಶಾಖಾ ವ್ಯವಸ್ಥಾಪಕ ಮಂಜುನಾಥ ಕುರಡೇಕರ ರೈತರಿಗೆ ಸಭೆಯಲ್ಲಿ ಮಾಹಿತಿ ನೀಡಿದರು.
ವಿರಕ್ತಮಠದ ಶಿವಕುಮಾರ ಸ್ವಾಮಿಗಳು, ಪತ್ರಿವನಮಠದ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರು. ಬೈರನಹಟ್ಟಿ ಶಾಂತಲಿಂಗ ಸ್ವಾಮಿಗಳು, ಪಂಚಮಸಾಲಿ ಸಮಾಜದ ತಾಲೂಕ ಉಪಾಧ್ಯಕ್ಷ ಪಿ.ಎಲ್. ಪಾಟೀಲ, ಎಫ್,ಆರ್, ಪಾಟೀಲ, ನಿಂಗಣ್ಣ ಗಾಡಿ, ಸಿ.ಎಸ್. ಪಾಟೀಲ, ಎಂ.ಬಿ. ಮೆನಸಗಿ, ಪುರಸಭೆ ಅಧ್ಯಕ್ಷ ಶಿವಾನಂದ ಮುತವಾಡ, ಪುರಸಭೆ ಸದಸ್ಯೆ ಸಾವಿತ್ರಿ ಹಟ್ಟಿ, ನೇತ್ರಾ ಪೂಜಾರ, ಸಂಗಪ್ಪ ಪೂಜಾರ, ಡಾ. ಎಫ್.ಕೆ. ಸವದತ್ತಿ. ಡಾ. ಶಿವಾನಂದ ಪಾಟೀಲ, ಪ್ರಕಾಶ ಪಟ್ಟಣಶೆಟ್ಟಿ, ಅಜೀತ ಪಾಟೀಲ, ಅಜ್ಜು ಪಾಟೀಲ, ಮಹೇಶ ಹಟ್ಟಿ, ಶಿವಪ್ಪ ಬೋಳಶೆಟ್ಟಿ, ಬಿ.ಎನ್. ಪಾಟೀಲ, ಅಶೋಕ ಸಾಲೂಟಗಿ, ಬಿ.ಎಸ್. ಕರಬಸಣ್ಣವರ, ಬಿ.ಜಿ. ಸುಂಕದ ಅನೇಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರಶಾಂತ ಅಳಗವಾಡಿ, ಅಜ್ಜುಪಾಟೀಲ, ಪ್ರಶಾಂತ ಪಲ್ಲೇದ ನಿರ್ವಹಿಸಿದರು.

loading...