ಕೊಂಕಣ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

0
27
loading...

ಕನ್ನಡಮ್ಮ ಸುದ್ದಿ-ಕುಮಟಾ: ಕೊಂಕಣ ಶಿಕ್ಷಣ ಸಂಸ್ಥೆಗೆ 25 ವರ್ಷ ತುಂಬಿದ್ದು, ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಈ ವರ್ಷ ಬಿ.ಕೆ.ಭಂಡಾರಕರ್‍ರವರ ಸರಸ್ವತಿ ಪದವಿಪೂರ್ವ ಕಾಲೇಜಿನ ಕಟ್ಟಡವು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮುರಲೀಧರ ಪ್ರಭು ತಿಳಿಸಿದರು.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಲೇಜಿನ ಸುಸಜ್ಜಿತ ಕಟ್ಟಡವನ್ನು ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಜುನ್ 3 ಭಾನುವಾರ ಸಂಜೆ 4.30 ಕ್ಕೆ ಲೋಕಾರ್ಪಣೆಗೊಳಿಸಲಿದ್ದಾರೆ. ಶ್ರೀಗಳ ಪಟ್ಟ ಶಿಷ್ಯರಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಇನ್ಫೋಸಿಸ್ ಫೌಂಡೇಶನ್‍ನ ಟ್ರಸ್ಟಿ ಯು.ರಾಮದಾಸ ಕಾಮತ ಉಪಸ್ಥಿತರಿರಲಿದ್ದಾರೆ. ಅತಿಥಿಗಳಾಗಿ ಇನ್ಫೋಸಿಸ್ ಲಿಮಿಟೆಡ್‍ನ ಉಪಾಧ್ಯಕ್ಷ ಸಂಜಯ ಭಟ್ಟ, ಹಾಂಗ್ಯೋ ಮಿಲ್ಕ್ಸ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಜಿ.ಪೈ, ಉದ್ಯಮಿ ದಿನೇಶ ಆರ್.ನಾಯಕ, ಕಲಭಾಗ ಗ್ರಾ.ಪಂ.ಅಧ್ಯಕ್ಷ ವಿರೂಪಾಕ್ಷ ನಾಯ್ಕ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 7 ರಿಂದ 8 ರವರೆಗೆ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದ್ದು, ಸೌಮ್ಯ ಅರುಣ ಗೊಟಗರ್ ತಂಡದವರು ಮೇಘದೂತ ಎಂಬ ಸುಂದರ ಯಕ್ಷ ನೃತ್ಯ ಸಾದರಪಡಿಸಲಿದ್ದಾರೆ.

1991ನೇ ಇಸವಿಯಲ್ಲಿ ಕೆಲವು ಶಿಕ್ಷಣ ಪ್ರೇಮಿಗಳು ಸೇರಿ ಒಂದು ವಿಭಿನ್ನ ದೃಷ್ಠಿಕೋನ ಹೊಂದಿರುವ ವಿಶಿಷ್ಠವಾದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಇಂದು ಈ ಸಂಸ್ಥೆ ಪ್ರಗತಿಯತ್ತ ಸಾಗಿದೆ. ಬಾಲಮಂದಿರ, ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣದಿಂದ ಪದವಿಪೂರ್ವ ಕಾಲೇಜು ಶಿಕ್ಷಣವನ್ನು ಪ್ರಾರಂಭಿಸಲಾಗಿದೆ. ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ಹಾಗು ವಾಣಿಜ್ಯ ವಿಭಾಗವನ್ನು ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಲಾಗುತ್ತಿದ್ದಾರೆ. ಈಗ ಕಾಲೇಜಿಗೆ ಸುಸಜ್ಜಿತ ಕಟ್ಟಡವನ್ನು 30 ಸಾವಿರ ಚದರ ಅಡಿಯಾಗಿದ್ದು, 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ .ಕಟ್ಟಡದ ಮೊದಲನೇ ಅಂತಸ್ತನ್ನು ಇನ್ಫೋಸಿಸ್ ಫೌಂಡೇಶನ್ 96 ಲಕ್ಷ ರೂ ವೆಚ್ಚದಲ್ಲಿ ನಿಮಿಸಿಕೊಟ್ಟಿದ್ದು, ಅದಕ್ಕೆ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ಎಂದು ನಾಮಕರಣ ಮಾಡಲಿದ್ದೇವೆ ಎಂದು ಪ್ರಭು ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಅಶೋಕ ಪ್ರಭು, ವಿಠಲ ನಾಯಕ, ಎನ್.ಬಿ.ಶಾನಭಾಗ, ಆರ್.ಎಚ್.ದೇಶಭಂಡಾರಿ, ಕಾಲೇಜಿನ ಪ್ರಾಚಾರ್ಯೆ ಸುಲೋಚನಾ ರಾವ್ ಇದ್ದರು.

loading...