ಕೊಪ್ಪಳ ತಾ ಪಂ ಸಾಮಾನ್ಯ ಸಭೆ :  ಸೂಕ್ತ ಕ್ರಮಕ್ಕೆ ಶಿಕ್ಷಣ ಇಲಾಖೆಗೆ ಸೂಚನೆ

0
10
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಪಂಚಾಯತ ಹಂತಗಳÀ ಸಭೆಗಳು ಅಂದರೆ ಕೇವಲ ಚರ್ಚೆ, ವಾದ ವಿವಾದ, ಗೊಂದಲಗಳಿಂದ ಕೂಡಿದ ಸಭೆಗಳಾಗಿ ಯಾವುದೇ ಸಾರ್ವಜನಿಕ ಚರ್ಚೆಗಳು ನಡೆಯದೆ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ, ಶಿಕ್ಷಣ, ಆರೋಗ್ಯ, ಕೃಷಿ, ಸೇರಿದಂತೆ ಇತರೆ ವಿಷಯಗಳ ಮೇಲೆ ಚರ್ಚೆಗಳನ್ನು ನಡೆಸುವ ಮೂಲಕ ಹಲವು ನಿರ್ಣಯಗಳನ್ನು ತೆಗದುಕೊಳ್ಳುವ ಮೂಲಕ ಕೊಪ್ಪಳ ತಾಲೂಕ ಪಂಚಾಯತ ಸಾಮಾನ್ಯ ಸಭೆಯು ಮಾದರಿಯಾಗಿದೆ.

ಶುಕ್ರವಾರ ತಾಲೂಕ ಪಂಚಾಯತ ಸಭಾಂಗಣದಲ್ಲಿ ಅಧ್ಯಕ್ಷ ಬಾಲಚಂದ್ರನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯು ತಾಲೂಕಿನಲ್ಲಿ ಶಿಕ್ಷಣದ ಗುಣ ಮಟ್ಟ ಕುಸಿಯುತ್ತಿರುವ ಬಗ್ಗೆ, ಸಾರ್ವಜನಿಕ ಆರೋಗ್ಯ, ಸರ್ಕಾರದ ಅನುದಾನದ ಸಬ್ದಳಕೆ ಬಗ್ಗೆ ಸದಸ್ಯರಿಗೆ ಇರುವ ಕಾಳಜಿ ಕಂಡುಬಂದಿತು. ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪ್ರೌಡ ಶಿಕ್ಷದವರೆಗೆ ಕಲಿಕೆಯ ಗುಣಮಟ್ಟದ ಕುಸಿತದಿಂದ ಮಕ್ಕಳು ಶಿಕ್ಷಣ ವಂಚಿತರಾಗುತ್ತಿರುವುದರ ಬಗ್ಗೆ ಕಳಕಳಿಯನ್ನು ವ್ಯಕ್ತಪಡಿಸಿದ್ದು, ಶಿಕ್ಷಣ ಇಲಾಖೆ ಶಿಕ್ಷಣದ ಗುಣ ಮಟ್ಟ ಸುಧಾರಣೆ ಸೇರಿದಂತೆ, ಶಿಕ್ಷಕರ ಕಡ್ಡಾಯ ಹಾಜರಾತಿಗೆ ಬೈಯೊಮೇಟ್ರಿಕ್ ಅಳವಡಿಸಲು ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆಗೆ ಸೂಚಿಸಲಾಯಿತು.
ಶಿಕ್ಷಣದ ಇಲಾಖೆ ಪ್ರಗತಿ ವರದಿಯನ್ನು ಮಂಡಿಸಿದ ಕ್ಷೆÃತ್ರ ಶಿಕ್ಷಣಾಧಿಕಾರಿ ಶೋಭಾ ಅವರು ತಾಲೂಕಿನಲ್ಲಿ ೩೨೬ ಪ್ರಾಥಮಿಖ ಹಾಗೂ ೬೯ ಪ್ರೌಡ ಶಾಲೆಗಳಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಗೆ ೫೦೭೯ ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ ೩೯೧೩ ವಿದ್ಯಾರ್ಥಿಗಳು ಉತ್ತಿÃರ್ಣರಾಗಿದ್ದು, ೧೧೬೬ ಜನ ವಿದ್ಯಾರ್ಥಿಗಳು ಅನುತ್ತಿÃರ್ಣರಾಗಿರುತ್ತಾರೆ ಎಂದರು. ಇದಕ್ಕೆ ಆಕ್ಷೆÃಪಿಸಿದ ಸದಸ್ಯರು ಶಿಕ್ಷಣ ಇಲಾಖೆಯ ನಿರ್ಲಕ್ಷö್ಯ ಮತ್ತು ಶಿಕ್ಷಕರು ಸರಿಯಾಗಿ ಕೆಲಸ ಮಾಡದ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು. ಸರ್ಕಾರ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣಕ್ಕಾಗಿ ಹೆಚ್ಚು ಗಮನಹರಿಸಿದೆ ಆದರೆ ಇಲ್ಲಿ ಮಾತ್ರ ಶಿಕ್ಷಕ ಹಾಗೂ ಅಧಿಕಾರಿಗಳ ಬೇಜಾಬ್ದಾರಿಯಿಂದ ಪ್ರತಿ ವರ್ಷ ಅನುತ್ತಿÃರ್ಣರಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಇದುವರೆಗೂ ಸರಿಯಾಗಿ ಶಿಕ್ಷಣದ ಮತ್ತು ಕಲಿಕೆಯ ಗುಣಮಟ್ಟ ಹೆಚ್ಚಿಸಲು, ಬದಲಾವಣೆಗೆ ಗಂಭಿರವಾಗಿ ಪ್ರಯತ್ನಿಸಿಲ್ಲವೆಂದು ಸದಸ್ಯರಾದ ಮೂತೇಪ್ಪ ಜಿ, ವಿರುಪಾಕ್ಷಗೌಡ ಮಾಲಿ ಪಾಟೀಲ, ಬಸವರಾಜ ಪಲ್ಲೆÃದ ಸೇರಿದಂತೆ ಇತರರು ಆರೋಪಿಸಿದರು. ಸದಸ್ಯರ ಆರೋಪಕ್ಕೆ ಉತ್ತರಿಸಿದ ಬಿಇಓ ಅವರು ಈ ಬಗ್ಗೆ ಸೂಕ್ತ ಗಮನಹರಿಸುವುದಾಗಿ ಮತ್ತು ಶಿಕ್ಷಕರ ಕಡ್ಡಾಯ ಹಾಜರಾತಿಗೆ ಬೈಯೊಮೇಟ್ರಿಕ್ ಅಳವಡಿಸಿಲು ಕ್ರಮಕೈಗೊಳ್ಳುವದಾಗಿ ತಿಳಿಸಿದರು. ಸಭೆಯಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಯಿತು. ನಿಗದಿ ಸಮಯದೊಳಗೆ ಪುಸ್ತಕ, ಸಮವಸ್ತç, ಬೈಸೈಕಲ್, ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡುವುಂತೆ ಸೂಚಿಸಲಾಯಿತು.

ಸರ್ಕಾರಿ ಕಚೇರಿಗಳಲ್ಲಿ ಶೌಚಾಲಯಗಳು ಇಲ್ಲ : ತಹಸೀಲ್ದಾರ್ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಶೌಚಾಲಯಗಳೇ ಇಲ್ಲವೆಂದು ಸದಸ್ಯರಾದ ಮೂರ್ತೇಪ್ಪ, ಯಂಕಪ್ಪ ಹೊಸಳ್ಳಿ ಹೇಳಿದರು, ಇದಕ್ಕೆ ಉತ್ತರಿಸಿದ ಅಧ್ಯಕ್ಷ ಬಾಲಚಂದ್ರನ್ ಅವರು ಕಡ್ಡಾಯವಾಗಿ ಎಲ್ಲಾ ಇಲಾಖೆಗಳಲ್ಲಿ ಶೌಚಾಲಯ ನಿರ್ಮಿಸುವುಂತೆ ಸಂಬಂಧಿಸಿದವರೆಗೆ ಸೂಚಿಸಲಾಗುವುದೆಂದರು. ಆಹಾರ ಸಾಮಾಗ್ರಿಗಳ ಖರಿದಿಗೆ ಇಲ್ಲ ಟೆಂಡರ್ : ಅಂಗನವಾಡಿ ಕೇಂದ್ರಗಳಿಗೆ ಕಳೆದ ೨೦೧೪ ರಿಂದಲೂ ಆಹಾರ ಸಾಮಾಗ್ರಿಗಳ ಖರಿದಿಗೆ ಟೆಂಡರ್ ಕರೆದಿಲ್ಲ, ಸುಮಾರು ವರ್ಷಗಳಿಂದ ಒಂದೇ ಏಜನ್ಸಿಯಿಂದ ಸರಬರಾಜು ಮಾಡಲಾಗುತ್ತಿದ್ದು, ತೀರಾ ಕಳಪೆ ಮಟ್ಟದಿದ್ದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲವೆಂದು ಸದಸ್ಯ ವೀರುಪಾಕ್ಷಗೌಡ ಪಾಟೀಲ ಹೇಳಿದರು. ಪ್ರತಿವರ್ಷ ಸರ್ಕಾರದ ನಿಯಮದಂತೆ ಟೆಂಡರ್ ಕರೆಯಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಯಿತು.
ನೋಣಗಳ ಹಾವಳಿ, ಸಾಂಕ್ರಾಮಿಕ ರೋಗಳ ಬಗ್ಗೆ ಎಚ್ಚರಿಕೆ : ತಾಲೂಕಿನಲ್ಲಿ ಸುಮಾರು ೨೮ಕ್ಕೂ ಹೆಚ್ಚು ಕೋಳಿ ಫಾರಂಗಳಿದ್ದು, ಅದರಿಂದ ನೋಣಗಳ ಹಾವಳಿಹೆಚ್ಚಾಗಿದ್ದು, ತಕ್ಷಣ ಕೋಳಿ ಫಾರಂಗಳ ಮಾಲಿಕರು ಸ್ವಚ್ಛತೆ ಮತ್ತು ನೋಣಗಳ ಹಾವಳಿ ತಡೆಗಟ್ಟಲು ಕ್ರಮಕೈಗೊಳ್ಳುವುಂತೆ ಸಭೆಯಲ್ಲಿ ಸೂಚಿಸಲಾಯಿತು. ಹಾಗೂ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಆರೋಗ್ಯ ಇಲಾಖೆಯಿಂದ ಮುಂಜಾಗೃತ ಕ್ರಮಕ್ಕೆ ಆರೋಗ್ಯಾಧಿಕಾರಿಗಳಿ ತಿಳಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಶಂಕ್ರಮ್ಮ ಉಪ್ಪಲಾಪೂರ, ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಸೇರೀದಂತೆ ತಾ.ಪಂ. ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

loading...